ಗಾಳಿಯಲ್ಲಿರುವ ಸೂಕ್ಷ್ಮ ಮಲಿನಕಾರಕ ಕಣಗಳು ಗಂಭೀರ ಆರೋಗ್ಯ ಅಪಾಯ ಹೆಚ್ಚಿಸುವ ಎಲ್ಲಾ ಸಾಧ್ಯತೆಗಳಿವೆ. ಈ ವಿಚಾರವನ್ನು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿವೆ. ಇದೀಗ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ವಾಯುಮಾಲಿನ್ಯ ಕ್ಯಾನ್ಸರ್, ಹೃದಯಾಘಾತ ಮತ್ತು ಸಾವಿನ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.
2000ರಿಂದ 2023ರವರೆಗೆ ಪ್ರಕಟವಾದ ಅನೇಕ ಅಧ್ಯಯನಗಳನ್ನು ಸಂಶೋಧಕರು ವಿಶ್ಲೇಷಿಸಿದ್ದು, ವಾಯುಮಾಲಿನ್ಯ ಹೃದಯಾಘಾತ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದೆ.
ಸಂಶೋಧಕರು ಗಮನಿಸಿದಂತೆ, ಗಾಳಿಯ ಮಲಿನಕಾರಕ ಕಣಗಳಿಗೆ (ಪಿಎಂ2.5) ತೆರೆದುಕೊಂಡಾಗ ವಿಷಕಾರಿ ಅಂಶವನ್ನು ಹೊರಹಾಕುವ ಮನುಷ್ಯನ ದೇಹದ ಸಾಮರ್ಥ್ಯ ಕುಗ್ಗುತ್ತದೆ. ಇದು ಉರಿಯೂತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇತ್ತೀಚಿಗೆ ವಾಯುಮಾಲಿನ್ಯ ಹೃದಯ ರೋಗ ಮತ್ತು ಕ್ಯಾನ್ಸರ್ ಮೇಲೆ ಬೀರುವ ಜಂಟಿ ಪರಿಣಾಮದ ಕುರಿತು ಅಧ್ಯಯನ ನಡೆದಿದೆ. ಹೃದಯದ ಕ್ಯಾನ್ಸರ್ ಮೇಲೆ ವಾಯುಮಾಲಿನ್ಯದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಹಾಗೆಯೇ ಕಡಿಮೆ ಸಮಯದಲ್ಲಿ ಭಾರೀ ಮಾಲಿನ್ಯಕ್ಕೆ ಒಡ್ಡಿಕೊಂಡಾಗ ಹೃದಯ ಕ್ಯಾನ್ಸರ್ ಸಂತ್ರಸ್ತರ ಮೇಲೆ ತ್ವರಿತ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.