Foods to Avoid Keep Liver Healthy: ಯಕೃತ್ತು ನಮ್ಮ ದೇಹದಲ್ಲಿನ ಅತಿದೊಡ್ಡ ಮತ್ತು ಪ್ರಮುಖ ಅಂಗವಾಗಿದೆ. ಈ ಅಂಗವು ಮುಕ್ಕಾಲು ಭಾಗದವರೆಗೆ ಹಾನಿಗೊಳಗಾದರೂ ಕೂಡ ಅದು ತಾನೇ ಸರಿಪಡಿಸಿಕೊಳ್ಳಬಲ್ಲದು. ಕಾಲು ಭಾಗ ಚೆನ್ನಾಗಿದ್ದರೆ, ಅದು ತನ್ನನ್ನು ತಾನೇ ಮರುನಿರ್ಮಾಣ ಮಾಡಬಹುದು. ಅಂತಹ ಪ್ರಮುಖ ಅಂಗಕ್ಕೆ ಹಾನಿಯಾಗಲು ಮದ್ಯಪಾನ ಮತ್ತು ಧೂಮಪಾನವು ಕಾರಣ ಎಂದು ಹಲವರು ಭಾವಿಸುತ್ತಾರೆ. ಇವೆರಡೂ ಪ್ರಮುಖ ಕಾರಣ ಆಗಿದೆ. ಇದರೊಂದಿಗೆ ನಾವು ದಿನದಲ್ಲಿ ಸೇವಿಸುವ ಹಲವು ಆಹಾರ ಪದಾರ್ಥಗಳು ಲಿವರ್ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎನ್ನುತ್ತಾರೆ ಪೌಷ್ಟಿಕ ಆಹಾರ ತಜ್ಞೆ ಡಾ.ಅಂಜಲಿ ದೇವಿ. ಯಾವೆಲ್ಲಾ ಕಾರಣಕ್ಕೆ ಯಕೃತ್ತು ಹಾನಿಯಾಗುತ್ತದೆ ಎಂಬುದನ್ನು ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ.
ಕೂಲ್ ಡ್ರಿಂಕ್ಸ್:ತಂಪು ಪಾನೀಯ ಸೇವನೆಯಿಂದ ಲಿವರ್ ಬೇಗ ಹಾಳಾಗುತ್ತದೆ. ಹೆಚ್ಚು ಸಕ್ಕರೆ ಮತ್ತು ಸಿಹಿತಿಂಡಿಗಳನ್ನು ತಿನ್ನುವುದು ಯಕೃತ್ತಿಗೆ ಒಳ್ಳೆಯದಲ್ಲ. ಇದರಿಂದಾಗಿ ಯಕೃತ್ತಿನ ಕಾರ್ಯವು ನಿಧಾನಗೊಳ್ಳುತ್ತದೆ. ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ದ್ರವಾಂಶದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಲಿವರ್ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ವೈದ್ಯರಾದ ಡಾ.ಅಂಜಲಿ ದೇವಿ ತಿಳಿಸುತ್ತಾರೆ.
ಕೊಬ್ಬಿನಾಂಶವಿರುವ ಆಹಾರ: ಹೆಚ್ಚು ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸುವುದರಿಂದ ಯಕೃತ್ತಿನ ಆರೋಗ್ಯವನ್ನು ಹಾನಿಗೊಳಿಸಬಹುದು. ಬೆಣ್ಣೆ, ತುಪ್ಪ, ಚೀಸ್, ಕೆಂಪು ಮಾಂಸದಂತಹ ಆಹಾರಗಳಲ್ಲಿ ಕೊಬ್ಬಿನಾಂಶ ಸಮೃದ್ಧವಾಗಿ ಇರುತ್ತವೆ. ಹಾಗಾಗಿ ಇವುಗಳಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ವೈದ್ಯರು.
ಜಂಕ್, ಫಾಸ್ಟ್ ಫುಡ್:ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಲಿವರ್ ಆರೋಗ್ಯವನ್ನು ಹಾಳು ಮಾಡುತ್ತವೆ. ಬಣ್ಣ ಮತ್ತು ರುಚಿಗಾಗಿ ಕೆಲವು ರಾಸಾನಿಕಗಳನ್ನು ಬಳಸಿ ತಯಾರಿಸಿದ ಆಹಾರವನ್ನು ಸೇವಿಸುವುದು ತುಂಬಾ ಅಪಾಯಕಾರಿ. ಇದಲ್ಲದೇ ತಂಪು ಪಾನೀಯಗಳಲ್ಲಿ ಬಳಸುವ ಸಕ್ಕರೆ ಮತ್ತು ಸಂಸ್ಕರಣಾ ಸಾಮಗ್ರಿಗಳು (Processing materials) ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ವಿವರಿಸುತ್ತಾರೆ.
ರಾಸಾಯನಿಕ ಹಾಕಿ ಬೆಳೆದ ಆಹಾರ: ಪಿತ್ತಜನಕಾಂಗದ ಕಾಯಿಲೆಗಳನ್ನು ತಪ್ಪಿಸಲು ರಾಸಾಯನಿಕಗಳನ್ನು ಹಾಕಿ ಬೆಳೆದ ಆಹಾರವನ್ನು ತ್ಯಜಿಸುವುದು ಉತ್ತಮ. ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಸೇವಿಸಲು ವೈದ್ಯರು ಸೂಚಿಸುತ್ತಾರೆ.