ನವದೆಹಲಿ: ಪ್ರೋಟಿನ್ಗಳ ಅತಿ ಹೆಚ್ಚು ಸೇವನೆ ಗ್ಯಾಸ್ಟ್ರೊ ಮತ್ತು ಕಿಡ್ನಿ ಸಮಸ್ಯೆಯೊಂದಿಗೆ ಸಂಬಂಧಿಸಿಲ್ಲದಿದ್ದರೂ, ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ ಸೇವನೆ ದೇಹಕ್ಕೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ಪ್ರೋಟಿನ್ ಸೇವನೆ ಸಾಮಾನ್ಯವಾಗಿ ಕಡಿಮೆ ಇದೆ. ಅಧಿಕ ಪ್ರೊಟೀನ್ ಡಯಟ್ ಆರೋಗ್ಯಕರ ಕಿಡ್ನಿಗೆ ಹಾನಿ ಮಾಡುವುದಿಲ್ಲ ಎಂದಿದ್ದಾರೆ.
ಜರ್ನಲ್ ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷಿಯನ್ನಲ್ಲಿ ಪ್ರಕಟವಾದ ದೊಡ್ಡ ವಿಶ್ಲೇಷಣೆ ಪ್ರಕಾರ, ಅಧಿಕ ಪ್ರೋಟಿನ್ ಡಯಟ್ ಕಡಿಮೆ ದೀರ್ಘಾವಧಿ ಕಿಡ್ನಿ ಸಮಸ್ಯೆ(ಸಿಕೆಡಿ)ಯೊಂದಿಗೆ ಸಂಬಂಧ ಹೊಂದಿದೆ. ಈ ಸಂಬಂಧ ನಾನ್ಚಂಗ್ ಯುನಿವರ್ಸಿಟಿ ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಅಧ್ಯಯನದಲ್ಲಿ ಸಿಕೆಡಿ ಅಪಾಯವೂ ಅಧಿಕ ಮಟ್ಟದ ಸಸದ್ಯ ಅಥವಾ ಪ್ರಾಣಿಗಳ ಪ್ರೋಟಿನ್ ಸೇವನೆಯೊಂದಿಗೆ ಸಂಬಂಧ ಹೊಂದಿದೆ.
ಆಸಿಡ್ ರಿಫ್ಲುಕ್ಸ್ಗೆ ಕಾರಣವಾಗಬಹುದು: ಅಧಿಕ ಕಾರ್ಬೋಹೈಡ್ರೇಟ್ ಡಯಟ್ಗಳು ಆಸಿಡ್ ರಿಫ್ಲುಕ್ಸ್ಗೆ ಕಾರಣವಾಗಬಹುದು. ಅಧಿಕ ಕಾರ್ಬೋ ಹೈಡ್ರೇಟ್ ಆಹಾರವೂ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಅನಿಯಂತ್ರಣ, ದೀರ್ಘಾವಧಿ ರೋಗಕ್ಕೆ ಕಾರಣವಾಗಬಹುದು ಎಂದು ಮೆಟೊಬಾಲಿಕ್ ಹೆಲ್ತ್ ಕೋಚ್ ಶಶಿಕಾಂತ್ ಅಯ್ಯಂಗಾರ್ ತಿಳಿಸಿದ್ದಾರೆ.
ಶಿಫಾರಸು ಮಾಡಿದ ಪ್ರಮಾಣದ ಪ್ರೋಟಿನ್ ಕಿಡ್ನಿ ಆರೋಗ್ಯಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ ಎಂದು ಹೈದರಾಬಾದ್ನ ಇಂಧ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರಾದ ಸುಧೀರ್ ಕುಮಾರ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟವರು ತೂಕಕ್ಕೆ ಅನುಗುಣವಾಗಿ 1 ಗ್ರಾಂ, 1.3 ಗ್ರಾಂ, 1.6ಗ್ರಾಂ ಪ್ರೋಟಿನ್ ಸೇವನೆ ಮಾಡಬಹುದು. ಇದು ಅವರ ಸಾಮಾನ್ಯ, ಸಾಧಾರಣೆ ಮತ್ತು ತೀವ್ರತೆ ದೈಹಿಕ ಚಟುವಟಕೆ ಮೇಲೂ ಅವಲಂಬಿತವಾಗಿದೆ ಎಂದು ಪ್ರಖ್ಯಾತ ನರರೋಗತಜ್ಞರು ತಿಳಿಸಿದ್ದಾರೆ.