ನವದೆಹಲಿ: ಲಸಿಕೆಯಲ್ಲಿ ಭಾರತ ಜಾಗತಿಕ ನಾಯಕನಾಗಿದ್ದು, ಹೊಸ ಹೊಸ ಲಸಿಕೆಯ ಮೆಲೆ ದೇಶ ಸಾಕಷ್ಟು ಹೂಡಿಕೆ ಮಾಡುತ್ತಿದೆ ಎಂದು ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್ನ ಸಹ ಸಂಸ್ಥಾಪಕರಾದ ಬಿಲ್ ಗೇಟ್ಸ್ ತಿಳಿಸಿದರು.
ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತವೂ ಡಿಜಿಟಲ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಜೊತೆಗೆ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದೆ. ಲಸಿಕೆ ಅಭಿವೃದ್ಧಿಯಲ್ಲಿನ ತಮ್ಮ ಸಾಮರ್ಥ್ಯವನ್ನು ಭಾರತ ಎಲ್ಲರಿಗೂ ತಿಳಿಸಿದೆ. ಭಾರತ ಜಾಗತಿಕ ನಾಯಕನಾಗಿದ್ದು, ಅನೇಕ ಹೊಸ ಲಸಿಕೆಗಾಗಿ ನಾವು ಪಾಲುದಾರರ ಜೊತೆಗೆ ಹೂಡಿಕೆ ಮಾಡುತ್ತಿದ್ದೇವೆ ಎಂದರು.
ಡಯಾಗ್ನೋಸ್ಟಿಕ್ ಸಾಮರ್ಥ್ಯವನ್ನು ಪ್ರಸ್ತಾಪಿಸಿದ ಅವರು ಭವಿಷ್ಯದಲ್ಲಿ ಜಾಗತಿಕ ಆರೋಗ್ಯ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಭಾರತದ ಆವಿಷ್ಕಾರದ ಪಾತ್ರ ದೊಡ್ಡದಿದೆ. ತಮ್ಮ ಪ್ರವಾಸದ ವೇಳೆ ಸಾಕಷ್ಟು ಹೊಸ ಡಯಾಗ್ನೋಸ್ಟಿಕ್ ಕಂಪನಿಗಳಿಗೆ ಭೇಟಿ ನೀಡಿದ್ದು, ಅನೇಕ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರದ ಸಾಮರ್ಥ್ಯ ಕಂಡಿರುವುದಾಗಿ ತಿಳಿಸಿದರು.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಭಾರತ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಾಂಕ್ರಾಮಿಕತೆ ಸಮಯದಲ್ಲಿ ಡಯಾಗ್ನೋಸ್ಟಿಕ್ ಉದ್ಯಮವೂ ಉತ್ತಮ ರೀತಿ ಕೆಲಸ ನಿರ್ವಹಿಸಿದೆ. ಆಧಾರ್ ಮತ್ತು ಬ್ಯಾಂಕ್ ಖಾತೆಯ ಡಿಜಿಟಲ್ ಸಂಪರ್ಕ ಆರಂಭವಾಗಿದ್ದು, ಇದೀಗ ಡಿಜಿಟಲೀಕರಣದಲ್ಲಿ ಎಲ್ಲವೂ ನಿರ್ವಹಣೆ ಆಗುತ್ತಿದೆ. ಇದೀಗ ಕೃಷಿಯಲ್ಲಿ ನಾವು ನೋಡುತ್ತಿದ್ದೇವೆ ಎಂದರು.
ಭಾರತದ ನಾಯಕತ್ವವು ಇತರೆ ದೇಶಗಳಿಗೆ ಅನುಕೂಲರವಾಗಿದೆ. ಜಿ 20 ಶೃಂಗಸಭೆಯಲ್ಲಿ ಇತರರಿಗೆ ಸಹಾಯ ಮಾಡುವ ಇಚ್ಛೆಯನ್ನು ಭಾರತ ಪ್ರದರ್ಶಿಸಿತ್ತು. ನಾವು ಭಾರತದೊಂದಿಗೆ ಪಾಲುದಾರರು. ದೇಶವನ್ನು ವೇಗಗೊಳಿಸುವ ಕುರಿತು ನಾವು ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದೇವೆ. ಭಾರತದಲ್ಲಿ ಅನೇಕರ ಉಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಅವರು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪೌಂಡೇಶನ್ ಜನಸಂಖ್ಯೆ ನಿಯಂತ್ರಣದೊಂದಿಗೆ ಸಂರ್ಪಕವನ್ನ ಹೊಂದಿಲ್ಲ. ಈ ಆಯ್ಕೆ ಕುರಿತು ಮಹಿಳೆಯರು ನಿರ್ಧಾರ ಮಾಡಬೇಕು. ಶಿಶು ಸಾವಿನ ಸಂಖ್ಯೆ ಇಳಿಕೆ ಕುರಿತು ಮಾತನಾಡಿದ ಅವರು, ಅನೇಕ ಹೊಸ ಲಸಿಕೆಗಳನ್ನು ಅಳವಡಿಸಿಕೊಂಡಿದ್ದು ದೇಶದ ಎಲ್ಲಾ ರೀತಿಯ ಮಕ್ಕಳಿಗೆ ತಲುಪಿಸುವ ಅದ್ಭುತ ಕೆಲಸವನ್ನು ಮಾಡಿದ್ದಾರೆ. ಲಸಿಕೆಯಲ್ಲಿ ಭಾರತವೂ ಸಾಕಷ್ಟು ಸುಧಾರಣೆಯನ್ನು ಕಾಣುತ್ತಿದೆ. ಮಕ್ಕಳ ಸಾವಿನ ಸಂಖ್ಯೆಯನ್ನು ಭಾರೀ ಕಡಿಮೆ ಮಾಡಿದೆ ಎಂದರು. (ಎಎನ್ಐ)
ಇದನ್ನೂ ಓದಿ:ಭುವನೇಶ್ವರ ಕೊಳೆಗೇರಿಗೆ ಭೇಟಿ ನೀಡಿದ ಬಿಲ್ ಗೇಟ್ಸ್: ನಿವಾಸಿಗಳ ಜೊತೆ ಸಂವಾದ