Black foods benefits:ಕಪ್ಪು ಬಣ್ಣವನ್ನು ಯಾರು ಇಷ್ಟಪಡುವುದಿಲ್ಲ? ಅದೇ ರೀತಿ ಕಪ್ಪು ಆಹಾರಗಳು ನಮ್ಮ ಉಪಹಾರ, ಊಟದ ತಟ್ಟೆಯಲ್ಲಿ ಇದ್ದರೆ ಯಾವೆಲ್ಲಾ ಪ್ರಯೋಜನಗಳು ಲಭಿಸತ್ತೇವೆ? ಈ ಕಪ್ಪು ಆಗಿ ಕಾಣುವ ಆಹಾರಗಳು ಆರೋಗ್ಯಕ್ಕೆ ಬಹು ಉಪಯೋಗಗಳನ್ನು ನೀಡುತ್ತವೆ ಎನ್ನುತ್ತಾರೆ ತಜ್ಞರು.
ಕೆಲವು ಕಪ್ಪು ಆಹಾರಗಳು ಆಂಥೋಸಯಾನಿನ್‌ಗಳೆಂಬ ವರ್ಣದ್ರವ್ಯಗಳನ್ನು ಹೊಂದಿರುತ್ತವೆ. ಅದರಿಂದ ಅವುಗಳನ್ನು ಕಪ್ಪು, ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ಈ ಆಹಾರಗಳಲ್ಲಿನ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮತ್ತು ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ದೇಹವನ್ನು ಶಕ್ತಗೊಳಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ, ನಾವು ನೋಡುತ್ತಾ, ತಿನ್ನುತ್ತಾ ಬೆಳೆದ ಕೆಲವು ಕಪ್ಪು ಆಹಾರಗಳ ಪ್ರಯೋಜನಗಳನ್ನು ಇದೀಗ ತಿಳಿದುಕೊಳ್ಳೋಣ.
ಕಪ್ಪು ಅಕ್ಕಿ: ನಮ್ಮ ಸಾಂಪ್ರದಾಯಿಕ ಅಕ್ಕಿಗಳಲ್ಲಿ ಒಂದಾದ ಕಪ್ಪು ಅಕ್ಕಿಯನ್ನು ಆಗ್ನೇಯ ಏಷ್ಯಾದ ದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದನ್ನು ಭಾರತದಲ್ಲಿ ಎಲ್ಲರೂ ಬಳಸುತ್ತಿದ್ದರು. ಪ್ರಾಚೀನ ಚೀನಾದಲ್ಲಿ ರಾಜರು ಮಾತ್ರ ಈ ಅಕ್ಕಿಯನ್ನು ತಿನ್ನುತ್ತಿದ್ದರು. ಸಾಮಾನ್ಯ ಜನರಿಗೆ ಇದನ್ನು ನಿಷೇಧಿಸಲಾಗಿದೆ. ಕಾರಣ ಅದರಲ್ಲಿರುವ ಪೋಷಕಾಂಶಗಳು ಮತ್ತು ಅದು ಒದಗಿಸುವ ಆರೋಗ್ಯ ಪ್ರಯೋಜನಗಳು ಅನೇಕ. ಕಪ್ಪು ಕಂದು ಅಕ್ಕಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಫೈಬರ್ ಮತ್ತು ಆ್ಯಂಟಿ - ಆಕ್ಸಿಡೆಂಟ್‌ಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ತೂಕ ಇಳಿಸಿಕೊಳ್ಳಲು ಇದು ತುಂಬಾ ಸಹಕಾರಿ. ಈ ಅಕ್ಕಿಯಿಂದ ಪುಲಾವ್, ಬಿರಿಯಾನಿ, ಕಡುಬು, ದೋಸೆ, ಇಡ್ಲಿ ಇತ್ಯಾದಿಗಳನ್ನು ಮಾಡಬಹುದು.
ಕಪ್ಪು ಉದ್ದಿನ ಬೇಳೆ: ಕಪ್ಪು ಉದ್ದಿನ ಬೇಳೆಯಲ್ಲಿ ಫೈಬರ್, ಕಬ್ಬಿಣ, ಫೋಲೇಟ್, ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ದೇಹದಲ್ಲಿ ಆರೋಗ್ಯಕರ ಕೊಬ್ಬಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದರಲ್ಲಿನ ಪೊಟ್ಯಾಸಿಯಮ್ ಅಂಶವು ರಕ್ತ ಪರಿಚಲನೆ ಸುಧಾರಿಸುತ್ತದೆ. ಮೂಳೆ ಸವೆತದಿಂದ ಉಂಟಾಗುವ ಸೊಂಟ ಮತ್ತು ಕೀಲು ನೋವಿಗೆ ಕಪ್ಪು ಉದ್ದಿನ ಬೇಳೆ ವರದಾನವಾಗಿದೆ. ಅಂತೆಯೇ, ನಿಮ್ಮ ಆಹಾರದಲ್ಲಿ ಕಪ್ಪು ಉದ್ದಿನ ಬೇಳೆ ಸೇರಿಸಿದರೆ ಉತ್ತಮ.
ಕರಿ ಮೆಣಸು:ಕೊಲೆಸ್ಟ್ರಾಲ್ ಮತ್ತು ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಕರಿಮೆಣಸು, ದೇಹಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು ಶೀತ, ಶ್ವಾಸಕೋಶ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಕೋವಿಡ್ 19 ಸಮಯದಲ್ಲಿ ಕರಿಮೆಣಸಿನ ಹಿರಿಮೆ ಎಲ್ಲರಿಗೂ ತಿಳಿದಿದೆ ಎಂದು ಹೇಳುತ್ತಾರೆ ತಜ್ಞರು.