BAY LEAF HAIR MASK - ಕೂದಲಿನ ಬೆಳವಣಿಗೆಗೆ ಬೇ ಎಲೆ: ನೀವು ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದೀರಾ? ಎಷ್ಟೇ ಪ್ರಯತ್ನ ಮಾಡಿದರೂ ಫಲಿತಾಂಶ ಸಿಗುತ್ತಿಲ್ಲವೇ? ಹಾಗಾದರೆ ಒಮ್ಮೆ ಬಿರಿಯಾನಿ ಎಲೆಗಳ ರೆಮಿಡೀಸ್ ಟ್ರೈ ಮಾಡಿ ನೋಡಿ ಎನ್ನುತ್ತಾರೆ ತಜ್ಞರು. ಈ ಎಲೆಗಳು ತಲೆಹೊಟ್ಟು, ತುರಿಕೆ ಮತ್ತು ನೆತ್ತಿಯಲ್ಲಿ ಉರಿಯುವುದನ್ನು ಕಡಿಮೆ ಮಾಡುವ ಮೂಲಕ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಕೂದಲು ಬೆಳವಣಿಗೆಗೆ ಮನೆಮದ್ದು:ತಲೆಹೊಟ್ಟು ಅನೇಕರನ್ನು ಕಾಡುವ ಕೂದಲಿನ ಸಮಸ್ಯೆಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು ಹೆಚ್ಚು ಕಾಡುತ್ತದೆ. ತಲೆಹೊಟ್ಟು ಹೆಚ್ಚಾದರೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಡ್ಯಾಂಡ್ರಫ್ ಸಮಸ್ಯೆ ಹೋಗಲಾಡಿಸಲು ಅನೇಕರು ಅದೇನೇನೋ ಪ್ರಯತ್ನಗಳನ್ನು ಮಾಡುತ್ತಾರೆ. ಎಷ್ಟೇ ಬಾರಿ ಪ್ರಯತ್ನಿಸಿದರೂ, ತಲೆಹೊಟ್ಟು ಮಾಯುವುದಿಲ್ಲ! ನೀವು ಸಹ ಈ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದೀರಾ? ಹಾಗಾದರೆ, ಬಿರಿಯಾನಿ ಎಲೆಗಳಿಂದ ತಯಾರಿಸಿದ ಈ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿದರೆ ತಲೆಹೊಟ್ಟುಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಮೇಲಾಗಿ, ಇದರಿಂದ ತಲೆಹೊಟ್ಟು ಜೊತೆಗೆ ನೆತ್ತಿಯಲ್ಲಿನ ತುರಿಕೆ, ದದ್ದು ಮತ್ತು ಉರಿಯಿಂದ ಉತ್ತಮ ಉಪಶಮನ ದೊರೆಯುತ್ತದೆ ಮತ್ತು ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ ಎಂದು ಸಲಹೆ ನೀಡಲಾಗುತ್ತದೆ. ಹಾಗಾದರೆ ಈ ಸ್ಟೋರಿಯಲ್ಲಿ ಆ ಮನೆ ರೆಮೆಡಿ ಏನು ಎಂಬುದನ್ನು ತಿಳಿದುಕೊಳ್ಳೋಣ.
ಬೇ ಲೀಫ್ ಹೇರ್ ಮಾಸ್ಕ್: ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಬಿರಿಯಾನಿ ಎಲೆ ಮತ್ತು ಕಹಿಬೇವಿನ ಎಲೆ ಹಾಕಿ ಒಲೆಯ ಮೇಲೆ ಇಟ್ಟು ಚೆನ್ನಾಗಿ ಬೇಯಿಸಿ. ನಂತರ ಅವುಗಳನ್ನು ಕುದಿಸಿದ ನಂತರ ತಣ್ಣಗಾಗಿಸಿ ಮತ್ತು ಎಲೆಗಳನ್ನು ಮಿಕ್ಸಿಂಗ್ ಜಾರ್ನಲ್ಲಿ ಹಾಕಿ ಪೇಸ್ಟ್ ಮಾಡಿ. ನಂತರ ಅದನ್ನು ಒಂದು ಬೌಲ್‌ಗೆ ತೆಗೆದುಕೊಂಡು ಅದಕ್ಕೆ ಒಂದು ಚಮಚ ಬೇವಿನ ಎಣ್ಣೆ, ಅಲೋವೆರಾ ಜೆಲ್ ಮತ್ತು ಆಮ್ಲಾ ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ನಂತರ, ಮಿಶ್ರಣವನ್ನು ತಲೆಗೆ ಅಂದರೆ ಕೂದಲಿನ ಬುಡಕ್ಕೆ ಅನ್ವಯಿಸಿ ಮತ್ತು ಅದನ್ನು ನಿಮ್ಮ ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಿ. ಇದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೇಯೇ ಬಿಡಿ. ನಂತರ ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.