ಕರ್ನಾಟಕ

karnataka

ETV Bharat / health

ಹೈದರಾಬಾದಿ ಹಲೀಮ್​: ಈ ಖಾದ್ಯದ ವಿಶೇಷತೆ ಏನು? ಇದನ್ನು ಹೇಗೆ ತಯಾರಿಸುತ್ತಾರೆ? - Hyderabadi Haleem - HYDERABADI HALEEM

ಹಲೀಮ್​​ 2010 ರಲ್ಲಿ GI ಟ್ಯಾಗ್ ಅನ್ನು ಪಡೆದುಕೊಂಡಿತ್ತು. ಭಾರತದಲ್ಲಿ ಇದನ್ನು ಸ್ವೀಕರಿಸಿದ ಮೊದಲ ಮಾಂಸಾಹಾರಿ ಖಾದ್ಯ ಆಗಿದೆ, ಇದರ GI ಟ್ಯಾಗ್ ಅನ್ನು ಮೇ 2022 ರಲ್ಲಿ ನವೀಕರಿಸಲಾಗಿದೆ. ಟ್ಯಾಗ್ ಡಿಸೆಂಬರ್ 2019 ರಲ್ಲಿ ಅವಧಿ ಮುಕ್ತಾಯಗೊಂಡಿತ್ತು.

Ramadan Special Story
ಹೈದರಾಬಾದಿ ಹಲೀಮ್​: ಈ ಖಾದ್ಯದ ವಿಶೇಷತೆ ಏನು? ಇದನ್ನು ಹೇಗೆ ತಯಾರಿಸುತ್ತಾರೆ?

By ETV Bharat Karnataka Team

Published : Apr 4, 2024, 6:58 AM IST

ಹೈದರಾಬಾದ್: ಹಲೀಮ್ ಮತ್ತು ರಂಜಾನ್​​​ ಎಂದರೆ ಅದಕ್ಕೆ ಎಲ್ಲಿಲ್ಲದ ನಂಟು. ರಂಜಾನ್​ ತಿಂಗಳಲ್ಲಿ ಹಲೀಮ್​​ಗೆ ಎಲ್ಲಿಲ್ಲದ ಬೇಡಿಕೆ. ಪ್ರಪಂಚದಾದ್ಯಂತದ ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಆಚರಣೆ ಮಾಡ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೂ ಈ ಸಂದರ್ಭದಲ್ಲಿ ಅವರು ಏನನ್ನೂ ತಿನ್ನುವುದಿಲ್ಲ. ಈ ನಡುವೆ ಈ ಪವಿತ್ರ ತಿಂಗಳಲ್ಲಿ ಹೈದರಾಬಾದ್‌ನ ಮೂಲೆ ಮೂಲೆಯಲ್ಲಿ ಸುಗಂಧಭರಿತ ಖಾದ್ಯ ಹಲೀಮ್​ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿದೆ.

ಹಲೀಮ್​ ಇದು ಮೂಲತಃ ಅರಬ್ ಖಾದ್ಯ. ಮಾಂಸ, ಗೋಧಿ ಮತ್ತು ಬಹಳಷ್ಟು ಮಸಾಲೆಗಳ ಮಿಶ್ರಣವಾಗಿದೆ. 1869 ಮತ್ತು 1911 ರ ನಡುವೆ ಹೈದರಾಬಾದ್‌ನ 6 ನೇ ನಿಜಾಮ್ ಮಹಬೂಬ್ ಅಲಿ ಖಾನ್ ಇದನ್ನು ಪರಿಚಯಿಸಿದರು. ಈ ಖಾದ್ಯ ಅಂದಿನಿಂದ ಹೈದರಾಬಾದ್​​ನಲ್ಲಿ ಪ್ರಸಿದ್ಧಿಗೆ ಬಂತು. ಕಳೆದ ಕೆಲವು ದಶಕಗಳಿಂದ ಹಲೀಮ್​ ಇಫ್ತಾರ್​ ಕೂಟದ ಭಾಗವಾಗಿದೆ. ಏಕೆಂದರೆ ಮುಸ್ಲಿಮರು ಖರ್ಜೂರ ಮತ್ತು ನೀರಿನಿಂದ ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಆ ಬಳಿಕ ಹಲೀಮ್​ ವನ್ನು ಸವಿಯಲು ಬಯಸುತ್ತಾರೆ. ಈ ಖಾದ್ಯ ರುಚಿಯ ಜೊತೆಗೆ ಪ್ರೋಟೀನ್‌ ಯುಕ್ತ ಆಹಾರವಾಗಿದೆ. ಉಪವಾಸ ಆಚರಣೆ ಮಾಡುವವರಿಗೆ ಈ ಖಾದ್ಯ ಉತ್ತಮ ಪೌಷ್ಟಿಕ ಆಹಾರವಾಗಿದೆ. ಹಲೀಮ್​​ ಪ್ರತಿ ಪ್ಲೇಟ್‌ಗೆ 50 ರಿಂದ 300 ರೂ.ವರೆಗೆ ದರ ಇರುತ್ತದೆ.

ಹೈದರಾಬಾದ್‌ ಸಂಸ್ಕೃತಿಯ ಭಾಗ: ಹೈದರಾಬಾದಿನ ಬೀದಿಗಳ ನೀವೇನಾದರು ಪ್ರಯಾಣಿಸಿದರೆ,"ಭಟ್ಟಿಗಳು," ಸಾಂಪ್ರದಾಯಿಕ ಇಟ್ಟಿಗೆ ಮತ್ತು ಮಣ್ಣಿನ ಒಲೆಗಳನ್ನು ಸಹಜವಾಗಿ ಕಾಣುತ್ತೀರಿ. ಹೋಟೆಲ್‌ಗಳು ಮತ್ತು ರಸ್ತೆಬದಿಯ ಜಾಗಳಲ್ಲಿ ಈ ಚಿತ್ರಣ ಕಂಡು ಬರುವುದು ಸಹಜ, ಇದು ಹಲೀಮ್​​​​​​​​ನ ಅಡ್ಡೆಗಳನ್ನು ಸಹಜವಾಗಿ ಗುರುತಿಸುವಂತೆ ಮಾಡುತ್ತದೆ. ಹಲೀಮ್​ ಜತೆ ಜನಪ್ರಿಯತೆ ಸಾಂಪ್ರದಾಯಿಕ ಬಿರಿಯಾನಿಯೂ ಸಹ ಹೈದರಾಬಾದ್​ನ ಎಲ್ಲಡೆ ಸುಲಭವಾಗಿ ಸಿಗುತ್ತದೆ.

ನಗರದ ಕೆಲವು ಪ್ರಸಿದ್ಧ ರೆಸ್ಟೋರೆಂಟ್‌ಗಳು ಅವರು ತಯಾರಿಸಿರುವ ಹಲೀಮ್‌ನ ಗುಣಮಟ್ಟಕ್ಕಾಗಿ ಹೆಸರುವಾಸಿಯಾಗಿವೆ. ಅವುಗಳಲ್ಲಿ ಪಿಸ್ತಾ ಹೌಸ್ ಪ್ರಮುಖವಾಗಿ ಕೇಳಿಬರುತ್ತಿದೆ. ಪಿಸ್ತಾಹೌಸ್​ಗಳು ಹೈದರಾಬಾದ್​ನ ಎಲ್ಲ ಪ್ರಮುಖ ಸ್ಥಳಗಳಲ್ಲಿ ಕಂಡು ಬರುತ್ತವೆ. 1997 ರಿಂದ ಹಲೀಮ್​​​​​ ಅನ್ನು ರೆಡಿ ಮಾಡಿ ಗ್ರಾಹಕರಿಗೆ ಉಣ ಬಡಿಸುತ್ತಾ ಬಂದಿದೆ.

ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಹೋಟೆಲ್​ಗಳು ಹೆಚ್ಚಿನ ಆದ್ಯತೆ ನೀಡುತ್ತವೆ. ರಂಜಾನ್‌ ತಿಂಗಳಲ್ಲಿ ಪ್ರತಿದಿನ 10,000 ಕೆಜಿ ಹಲೀಮ್ ಮಾರಾಟ ಮಾಡುವುದಾಗಿ ಪಿಸ್ತಾ ಹೌಸ್ ಹೇಳಿಕೊಂಡಿದೆ. ಈಟಿವಿ ಭಾರತ್‌ನೊಂದಿಗೆ ಮಾತನಾಡಿದ ಪಿಸ್ತಾ ಹೌಸ್‌ನ ಆಹಾರ ಉತ್ಪಾದನಾ ವ್ಯವಸ್ಥಾಪಕ ಮೊಹಮ್ಮದ್ ಅಖಿಲ್, ನಗರದ 40 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹಲೀಮ್​ ಮಾರಾಟ ಮಾಡುತ್ತೇವೆ. ಶುದ್ಧ ಭಾರತೀಯ ಮಸಾಲೆ, ಮಟನ್ ಮತ್ತು ಶುದ್ಧ ತುಪ್ಪವನ್ನು ಹಲೀಮ್​ ತಯಾರಿಕೆಗೆ ಬಳಸುತ್ತೇವೆ ಎಂದು ಹೇಳಿದ್ದಾರೆ.

GI ಆಹಾರ ಪ್ರಶಸ್ತಿ: ಈ ಖಾದ್ಯವು 2010 ರಲ್ಲಿ GI ಟ್ಯಾಗ್ ಅನ್ನು ಪಡೆದುಕೊಂಡಿತ್ತು. ಭಾರತದಲ್ಲಿ ಇದನ್ನು ಸ್ವೀಕರಿಸಿದ ಮೊದಲ ಮಾಂಸಾಹಾರಿ ಖಾದ್ಯ ಹಲೀಮ್​ ಆಗಿದೆ, ಇದರ GI ಟ್ಯಾಗ್ ಅನ್ನು ಮೇ 2022 ರಲ್ಲಿ ನವೀಕರಿಸಲಾಗಿದೆ. ಟ್ಯಾಗ್ ಡಿಸೆಂಬರ್ 2019 ರಲ್ಲಿ ಅವಧಿ ಮುಕ್ತಾಯಗೊಂಡಿತ್ತು. ಆಹಾರ ಪದಾರ್ಥಗಳ ವರ್ಗದ ಅಡಿಯಲ್ಲಿ GI ಟ್ಯಾಗ್ ಅನ್ನು ಸ್ವೀಕರಿಸುವ ತೆಲಂಗಾಣ ಏಕೈಕ ಉತ್ಪನ್ನ ಇದಾಗಿದೆ. ಹೈದರಾಬಾದಿ ಹಲೀಮ್​ಗೆ ಆಹಾರ ವಿಭಾಗದಲ್ಲಿ 'ಅತ್ಯಂತ ಜನಪ್ರಿಯ ಜಿಐ' ಎಂಬ ಗೌರವವನ್ನು ಪಡೆದುಕೊಂಡಿದೆ. ಭಾರತದ ವಿವಿಧ ಪ್ರದೇಶಗಳ 17 ಆಹಾರ ಪದಾರ್ಥಗಳಲ್ಲಿ 2022ನೇ ಸಾಲಿನಲ್ಲಿ ಹಲೀಮ್​ ವಿಜಯಶಾಲಿಯಾಗಿದೆ. ಹಲೀಮ್​ಗೆ ರಸಗುಲ್ಲಾ ಮತ್ತು ಬಿಕನೇರಿ ಭುಜಿ ಖಾದ್ಯಗಳು ಭರ್ಜರಿ ಪೈಪೋಟಿ ಕೊಟ್ಟಿದ್ದವು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು ನಡೆಸಿದ ಮತದಾನ ವ್ಯವಸ್ಥೆಯ ಮೂಲಕ ಈ ಪ್ರಶಸ್ತಿಗೆ ಹಲೀಮ್​ ಅನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಹೈದರಾಬಾದ್​ನ ಸಂಸ್ಕೃತಿಯನ್ನು ಹಲೀಮ್ ಪ್ರತಿಬಿಂಬಿಸುವಂತೆ ಮಾಡಿದೆ.

ಹಲೀಮ್​ ತಯಾರಿಕೆ ಹೇಗೆ?:ಹಲೀಮ್ ಅನ್ನು ಸಾಂಪ್ರದಾಯಿಕವಾಗಿ ದೊಡ್ಡ ಕಡಾಯಿಗಳಲ್ಲಿ ತಯಾರಿಸಲಾಗುತ್ತದೆ. ಹಲೀಮ್ ತಯಾರಿಸಲು ರಾತ್ರಿಯಿಡಿ ಗೋಧಿ, ಬಾರ್ಲಿ ಮತ್ತು ಬೇಳೆಯನ್ನು ನೆನಸಿಡಲಾಗುತ್ತದೆ. ಕೊರ್ಮಾ ಎಂದು ಕರೆಯಲ್ಪಡುವ ಒಂದು ಖಾರದ ಮಾಂಸದ ರಸವನ್ನು ಮಾಂಸವು ಮೃದುವಾಗುವವರೆಗೆ ಕುದಿಸಲಾಗುತ್ತದೆ. ಜೊತೆಗೆ ಗೋಧಿ, ಬಾರ್ಲಿ ಮತ್ತು ಬೇಳೆಯೊಂದಿಗೆ ಉಪ್ಪಿನ ನೀರಿನಲ್ಲಿ ಮೃದುವಾಗುವವರೆಗೆ ಬೇಯಿಸಲಾಗುತ್ತದೆ. ಬೆಂದ ಗೋಧಿ, ಬಾರ್ಲಿ ಮತ್ತು ಬೇಳೆಯನ್ನು ಆಮೇಲೆ ಮಾಂಸದ ರಸದೊಂದಿಗೆ ಸೌಟಿನಿಂದ ಪೇಸ್ಟ್‌ನಂಥ ಸ್ನಿಗ್ಧತೆ ಬರುವವರೆಗೆ ಮಿಶ್ರಣಮಾಡಲಾಗುತ್ತದೆ. ಸಂಪೂರ್ಣ ಕ್ರಿಯೆ ಮುಗಿಯಲು ಸುಮಾರು ಆರು ಗಂಟೆ ಹಿಡಿಯುತ್ತದೆ. ಆದರೆ, ಹಲೀಮ್‍ನ ತಯಾರಿಕೆ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ.

ಹಲೀಮ್ ಅನ್ನು ಕತ್ತರಿಸಿದ ಪುದೀನಾ, ನಿಂಬೆ ರಸ, ಕೊತ್ತಂಬರಿ, ಕರಿದ ಈರುಳ್ಳಿ, ಕತ್ತರಿಸಿದ ಶುಂಠಿ ಅಥವಾ ಹಸಿ ಮೆಣಸಿನಕಾಯಿಯಿಂದ ಅಲಂಕರಿಸಿ ಬಡಿಸಬಹುದಾಗಿದೆ. ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ, ಹಲೀಮ್ ಅನ್ನು ನಾನ್‍ನೊಂದಿಗೆ ಅಥವಾ ಯಾವುದೇ ಬಗೆಯ ಬ್ರೆಡ್ ಅಥವಾ ಅನ್ನದೊಂದಿಗೆ ನೀಡಲಾಗುತ್ತದೆ.

ಇದನ್ನು ಓದಿ:ಎಷ್ಟೇ ತಿಂದರೂ ತೂಕ ಏರದು; ಇಡ್ಲಿಯಿಂದ ಎಷ್ಟೆಲ್ಲಾ ಆರೋಗ್ಯ ಲಾಭಗಳಿವೆ ಗೊತ್ತಾ? - Idli health benefits

ABOUT THE AUTHOR

...view details