ನವದೆಹಲಿ: ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡುವಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆಯು ಹೊಸ ಭರವಸೆ ಮೂಡಿಸಿದ್ದು, ಇದನ್ನು ಅಂಕೊಲಾಜಿ ಚಿಕಿತ್ಸೆಯಲ್ಲಿ ಸಾಮರ್ಥ್ಯದಾಯಕವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಕ್ಯಾನ್ಸರ್ ತಜ್ಞರು ಮಾಹಿತಿ ನೀಡಿದ್ದಾರೆ.
ಸಾಂಪ್ರದಾಯಿಕವಾಗಿ ಕ್ಯಾನ್ಸರ್ ರೋಗ ಪತ್ತೆಗೆ ಆರಂಭಿಕ ಹಂತದಲ್ಲಿ ಬಯಾಪ್ಸಿ, ಮೈಕ್ರೋಸ್ಕೋಪ್ ಅಡಿಯಲ್ಲಿ ಹಿಸ್ಟಾಲೋಜಿಕಲ್ ಪರೀಕ್ಷೆ ಮತ್ತು ಎಂಆರ್ಐ ಮತ್ತು ಸಿಟಿ ಮತ್ತು ಪಿಇಟಿ ಸ್ಕ್ಯಾನ್ನ ಮೂಲಕ ಇಮೇಜಿಂಗ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಈ ಸಾಂಪ್ರದಾಯಿಕ ರೋಗ ಪತ್ತೆಯಲ್ಲಿ ಇಮೇಜಿಂಗ್ ಫಲಿತಾಂಶವು ವೃತ್ತಿಪರರ ಅಭಿಪ್ರಾಯಗಳಲ್ಲಿ ಭಿನ್ನತೆಗೆ ಕಾರಣವಾಗಬಹುದು. ಇದರ ಜೊತೆಗೆ ನಿರ್ದಿಷ್ಟ ಪತ್ತೆ ಕಾರ್ಯವೂ ಅನಾನುಕೂಲಕರವಾಗಿದೆ.
ಆದರೆ, ಎಐ ವ್ಯವಸ್ಥೆಯಲ್ಲಿ ವಿಶೇಷವಾಗಿ ಆಳವಾದ ಕಲಿಕೆ ಬಳಕೆ ಮಾಡಿಕೊಂಡು ತಂತ್ರಗಾರಿಕೆ ನಿಖರತೆಯ ಜೊತೆಗೆ ವೈದ್ಯಕೀಯ ಚಿತ್ರಗಳನ್ನು ವಿಶ್ಲೇಷಣೆ ಮಾಡಲಾಗುವುದು. ಇದಕ್ಕಾಗಿ ತರಬೇತಿ ಪಡೆದ ಅಗಾಧ ಪ್ರಮಾಣದ ಪಬ್ಲಿಕ್ ಡೊಮೈನ್ ಕ್ಯಾನ್ಸರ್ ದತ್ತಾಂಶವನ್ನು ಇರಿಸಲಾಗಿದೆ. ಇದರಿಂದ ಎಐ ನಿಮಿಷದಲ್ಲೇ ರೋಗ ಪತ್ತೆ ಮಾಡಲಿದೆ. ವಿಶಾಲ ವ್ಯಾಪ್ತಿಯಲ್ಲಿ ದತ್ತಾಂಶಗಳನ್ನು ಸೆಟ್ ಮಾಡಿರುವ ಹಿನ್ನೆಲೆಯಲ್ಲಿ ರೋಗಿಗಳ ನಿರ್ದಿಷ್ಟವಾಗಿ ಸ್ತನ/ಚರ್ಮ ಕ್ಯಾನ್ಸರ್ ಹೊಂದಿದ್ದಾರಾ ಎಂಬ ಮಾಹಿತಿಯೊಂದಿಗೆ ರೋಗದ ಅಪಾಯದ ಕುರಿತು ಮುನ್ಸೂಚನೆ ನೀಡುತ್ತದೆ.
ಕ್ಯಾನ್ಸರ್ ರೋಗಗಳ ಪತ್ತೆಯಲ್ಲಿ ಎಐ ಅಂಕೋಲಜಿ ಬಳಕೆ ಸಹಾಯಕವಾಗಿದೆ. ಅಲ್ಲದೇ ವೈದ್ಯರಿಗೆ ರೋಗದ ಪತ್ತೆಗೆ ಮತ್ತು ಭಾರತದಲ್ಲಿನ ರೋಗಿಕೇಂದ್ರಿತ ಕ್ಯಾನ್ಸರ್ ಆರೈಕೆಯಲ್ಲಿ ಸಹಾಯಕವಾಗಿದೆ. ಎಐ ರೆಡಿಯೋ ಥೆರಪಿಯಲ್ಲೂ ಸಹಾಯ ಮಾಡುತ್ತಿದ್ದು, ಅಲ್ಗೋರಿದಂ ಚಿಕಿತ್ಸೆಯನ್ನು ಶೀಘ್ರವಾಗಿ ಮತ್ತು ವೇಗವಾಗಿ ನಡೆಸುತ್ತದೆ ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ರೆಡಿಯೋ ಅಂಕೋಲಜಿಸ್ಟ್ ಡಾ.ವೀನಿತ್ ನಕ್ರಾ ತಿಳಿಸಿದ್ದಾರೆ.
ರಿಮೋಟ್ ಕನ್ಸಲ್ಟೆನ್ಸಿಯಂತಹ ಅನೇಕ ಕಾರ್ಯಕ್ರಮದಲ್ಲೂ ಇದು ರೋಗಿಗಳಿಗೆ ಸಹಾಯವಾಗುತ್ತದೆ. ಭಾರತದಲ್ಲಿ ಅಧಿಕ ಕ್ಯಾನ್ಸರ್ ಹೊರೆ ಇದ್ದು, ಸೀಮಿತ ಮೂಲಸೌಲಭ್ಯಗಳಿದೆ. ಈ ನಿಟ್ಟಿನಲ್ಲಿ ಎಐ ಕಡಿಮೆ ಅವಧಿಯಲ್ಲಿ ಕಂಪ್ಯೂಟರ್, ಡಾಕ್ಯುಮೆಂಟೇಷನ್, ರೋಗಿಗಳ ಕ್ಯಾನ್ಸರ್ ಪತ್ತೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಆರಂಭಿಕ ಹಂತದಲ್ಲಿ ಎಐ ಸ್ತನ ಕ್ಯಾನ್ಸರ್ ಪತ್ತೆ ಮಾಡುವುದರಿಂದ ಅದರ ಚೇತರಿಕೆ ದರ ಕೂಡ ಭಾರತದಲ್ಲಿ ಹೆಚ್ಚಲಿದೆ. ಎಐ ಈ ಹಿಂದಿನ ಹಲವು ತಂತ್ರಜ್ಞಾನಗಳಿಗಿಂತ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ. ತರಬೇತಿ ಪಡೆದ ಅನೇಕ ಡೇಟಾಸೆಟ್ಗಳನ್ನು ಇದಕ್ಕೆ ದಾಖಲು ಮಾಡಿರುವುದರಿಂದ ಸಮಸ್ಯೆ ಪತ್ತೆ ಪರೀಕ್ಷೆಯಲ್ಲಿ ಸುಧಾರಣೆ ನಡೆಸುತ್ತದೆ. ಈ ಹಿಂದಿನ ರೋಗ ಪತ್ತೆ ಮಾರ್ಗಕ್ಕಿಂತ ಇದು ಭೋಗೋಳಿಕ, ವಯಸ್ಸು ಮತ್ತು ವರ್ಣ ಸೇರಿದಂತೆ ಎಲ್ಲಾ ಹಂತದಲ್ಲಿ ಹೆಚ್ಚು ನಿಖರ ಫಲಿತಾಂಶ ನೀಡಲು ಸಹಾಯ ಮಾಡುತ್ತದೆ ಎಂದು ದೆಹಲಿಯ ಯುನಿಕ್ ಹಾಸ್ಪಿಟಲ್ ಕ್ಯಾನ್ಸರ್ ಸೆಂಟರ್ನ ಮುಖ್ಯ ಅಂಕಾಲಾಜಿಸ್ಟ್ ಡಾ.ಆಶೀಶ್ ಗುಪ್ತಾ ತಿಳಿಸಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: 9-14 ವರ್ಷದ ಬಾಲಕಿಯರಿಗೆ ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ; ವಿತ್ತ ಸಚಿವೆ