ಕರ್ನಾಟಕ

karnataka

ETV Bharat / health

ಭಾರತದ ಕೋಟ್ಯಂತರ ಮಹಿಳೆಯರನ್ನು ಕಾಡುತ್ತಿದೆ ಎಂಡೊಮೆಟ್ರಿಯೊಸಿಸ್: ಏನಿದು? - ಎಂಡೊಮೆಟ್ರಿಯೊಸಿಸ್ ಸಮಸ್ಯೆ

ಎಂಡೊಮೆಟ್ರಿಯೊಸಿಸ್ ಎಂಬುದು ಸ್ತ್ರೀರೋಗ. ಇದರಿಂದ ಭಾರತದ ಮಹಿಳೆಯರು ಹೆಚ್ಚು ಬಾಧಿತರಾಗಿದ್ದಾರೆ.

43 million women in India suffer from endometriosis
43 million women in India suffer from endometriosis

By ETV Bharat Karnataka Team

Published : Feb 16, 2024, 5:46 PM IST

ನವದೆಹಲಿ: ಭಾರತದ 43 ಮಿಲಿಯನ್​ ಮಹಿಳೆಯರು ಎಂಡೊಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಎಂಡೊಮೆಟ್ರಿಯೊಸಿಸ್ ಎಂಬುದು ಸ್ತ್ರೀರೋಗ ಸಮಸ್ಯೆ. ಶೇ 10ರಷ್ಟು ಯುವತಿಯರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಯದಲ್ಲಿ ಅಂದರೆ 15ರಿಂದ 49 ವರ್ಷದಲ್ಲಿ ಈ ಸಮಸ್ಯೆ ಕಾಡುತ್ತದೆ. ವಿಶ್ವದೆಲ್ಲೆಡೆ 190 ಮಿಲಿಯನ್​ ಯುವತಿಯರು ಮತ್ತು ಮಹಿಳೆಯರು ತಮ್ಮ ಸಂತಾನೋತ್ತತ್ತಿ ಸಮಯದಲ್ಲಿ ಈ ತೊಂದರೆಗೆ ಒಳಗಾಗುತ್ತಿದ್ದಾರೆ.

ಜಾರ್ಜ್​ ಇನ್ಸುಟಿಟ್ಯೂಟ್​ ಫಾರ್​ ಗ್ಲೋಬಲ್​ ಹೆಲ್ತ್​​​ ಸಂಶೋಧಕರು ಈ ಕುರಿತು ಮಾತನಾಡಿದ್ದು, ಇತರೆ ದೀರ್ಘಾವಧಿ ಅನಾರೋಗ್ಯದ ಹೊರತಾಗಿ ಭಾರತ ಸೇರಿದಂತೆ ಜಾಗತಿಕವಾಗಿ ಸರ್ಕಾರಗಳು ಎಂಡೊಮೆಟ್ರಿಯೊಸಿಸ್‌ಗೆ ಕಡಿಮೆ ಗಮನ ನೀಡುತ್ತಿದೆ ಎಂದು ಹೇಳಿದ್ದಾರೆ.

ಎಂಡೊಮೆಟ್ರಿಯೊಸಿಸ್ ಸಮಸ್ಯೆಯು ಅತಿ ಹೆಚ್ಚು ಆದಾಯ ಹೊಂದಿರುವ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿದೆ. ಭಾರತದಲ್ಲಿ ಈ ಪರಿಸ್ಥಿತಿಯಿಂದ ಬಳಲುತ್ತಿರುವುದರ ಬಗ್ಗೆ ಕಡಿಮೆ ಮಟ್ಟದ ತಿಳಿವಳಿಕೆ ಇದೆ. ಎಂಡೊಮೆಟ್ರಿಯೊಸಿಸ್ ಹೊಂದಿರುವ ಮಹಿಳೆಯರು ವಿಪರೀತ ನೋವು ಮತ್ತು ತೀವ್ರತರದ ಲಕ್ಷಣಗಳಂಥ ಸಂಕೀರ್ಣತೆಯಿಂದ ಬಳಲುತ್ತಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮಾಸಿಕ ಋತುಚಕ್ರದ ಸಮಯದಲ್ಲಿ ಉಂಟಾಗುವ ಹಾರ್ಮೋನ್​ಗಳ ಬದಲಾವಣೆಗೆ ಕಾರಣವಾಗುವ ಅಂಗಾಂಶ ಬೆಳವಣಿಗೆ ಎಂಡೋಮೆಟ್ರಿಯಲ್​ ಕೋಶಗಳನ್ನು ತುಂಡರಿಸಿ, ಸ್ರಾವ ಉಂಟಾಗುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಋತುಚಕ್ರದ ರಕ್ತಸ್ತ್ರಾವವಾಗುತ್ತದೆ. ಆದರೆ, ಈ ರಕ್ತ ದೇಹದಲ್ಲಿಯೇ ಉಳಿದುಬಿಡುತ್ತದೆ. ಹೀಗೆ ಒಳಗೆ ಉಳಿದ ರಕ್ತ ಅಲ್ಲಿಯೇ ಇದ್ದು, ಉರಿಯೂತಕ್ಕೆ ಕಾರಣವಾಗುತ್ತದೆ. ಅಲ್ಲದೇ ಅಂಗಾಂಶಗಳಿಗೆ ಗಾಯಗಳಾಗುತ್ತದೆ. ಅಂಗಾಂಶ ಗಾಯಗಳು ಅಗಾಧ ನೋವಿಗೆ ಕಾರಣವಾಗುತ್ತದೆ.

ಋತುಚಕ್ರದ ನೋವುಗಳು ಸಾಮಾನ್ಯ ಎಂದು ಅನೇಕರು ಈ ಎಂಡೊಮೆಟ್ರಿಯೊಸಿಸ್​​ ಬಗ್ಗೆ ಜಾಗೃತಿ ಹೊಂದಿರುವುದಿಲ್ಲ. ಅಲ್ಲದೇ, ಇದನ್ನು ತಡವಾಗಿ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಲು ಮಹಿಳೆಯರು ಮುಂದಾಗುತ್ತಾರೆ ಎಂದು ಭಾರತ ಜಾಗತಿಕ ಮಹಿಳಾ ಆರೋಗ್ಯ ಕಾರ್ಯಕ್ರಮದ ಹಿರಿಯ ಸಂಶೋಧಕ ರಾಬಂಗ್ಶಿ ತಿಳಿಸಿದ್ದಾರೆ. ಎಂಡೊಮೆಟ್ರಿಯೊಸಿಸ್​​​ ಮಹಿಳೆಯರ ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ನಾಪತ್ತೆಯಾಗಿರುವ ಅಂಶವಾಗಿದ್ದು, ಈ ಕ್ಷೇತ್ರದಲ್ಲಿ ವಿಶಾಲ ವ್ಯಾಪ್ತಿಯಲ್ಲಿ ನಿಯಮ ಶಿಫಾರಸಿಗೆ ಮುಂದಾಗುವ ಭರವಸೆ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಈ ಅಧ್ಯಯನಕ್ಕಾಗಿ ಡಾ.ಪ್ರೀತಿ ನೇತೃತ್ವದ ತಂಡ ದೆಹಲಿ ಮತ್ತು ಅಸ್ಸಾಂನಲ್ಲಿ 21 ಮಹಿಳೆ ಮತ್ತು 10 ಪುರುಷ ಭಾಗಿದಾರರನ್ನು ಸಂದರ್ಶಿಸಿದೆ. 18 ವರ್ಷ ಮೇಲ್ಪಟ್ಟವರಲ್ಲಿ ಲ್ಯಾಪ್ರೊಸ್ಕೋಪಿಯಾ ಪತ್ತೆ ಮೂಲಕ ಎಂಡೊಮೆಟ್ರಿಯೊಸಿಸ್​​ ಪರೀಕ್ಷೆ ನಡೆಸಲಾಗಿದೆ. ಅಧ್ಯಯನವು ಮಹಿಳೆಯರು ಅನುಭವಿಸುವ ಎಂಡೊಮೆಟ್ರಿಯೊಸಿಸ್​​​ ಮತ್ತು ಇದು ಅವರ ಅವರ ಮೇಲೆ ಮತ್ತು ಭಾಗಿದಾರರಲ್ಲಿ ಜೀವನದ ಮೇಲೆ ಬೀರುವ ಪರಿಣಾಮವನ್ನು ಇದು ಅವಿಷ್ಕರಿಸುತ್ತದೆ. ನಮ್ಮ ಅಧ್ಯಯನವು ಎಂಡೊಮೆಟ್ರಿಯೊಸಿಸ್​​ ಪತ್ತೆ ಮತ್ತು ಚಿಕಿತ್ಸೆ ಮೂಲಕ ಇದರ ಪರಿಣಾಮವನ್ನು ಕಡಿಮೆ ಮಾಡುವ ಕುರಿತು ಒತ್ತು ನೀಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮೈಗ್ರೇನ್, ಬೆವರುವಿಕೆ: ಯುವತಿಯರಲ್ಲಿ ಹೃದ್ರೋಗ, ಪಾರ್ಶ್ವವಾಯು ಅಪಾಯ ಹೆಚ್ಚಿಸಬಹುದು

ABOUT THE AUTHOR

...view details