ನವದೆಹಲಿ: ಪೋಷಕತ್ವ ಎಂಬುದು ವರದಾನವಾದರೂ ಶೇ 20ರಷ್ಟು ತಾಯಂದಿರಿಗೆ ಜೀವನದಲ್ಲಿನ ಈ ಘಟ್ಟ ಆತಂಕ, ಖಿನ್ನತೆ ಮತ್ತು ಪ್ರಸವ ಪೂರ್ವ ಖಿನ್ನತೆಗೆ ಕಾರಣವಾಗುತ್ತದೆ. ಅನೇಕ ಸಂದರ್ಭದಲ್ಲಿ ಇದಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹೋದಲ್ಲಿ ತಾಯಿ ಮತ್ತು ಮಗುವಿಗೆ ಮಾರಾಣಾಂತಿಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸವಪೂರ್ವ ಖಿನ್ನತೆ ಎಂಬುದು ಸಾಮಾನ್ಯವಾಗಿದೆ. ಇದು ಮಕ್ಕಳಾದ ಬಳಿಕ ತಾಯಂದಿರಿಗೆ ಕಾಡುವ ಪರಿಸ್ಥಿತಿಯಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಬಹುದಾಗಿದೆ. ಇದಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ನಿಖರವಾಗಿಲ್ಲ. ಬೇಸರ, ಆತಂಕ ಮತ್ತು ಸುಸ್ತಿನ ಭಾವನೆಗಳು ಇದಕ್ಕೆ ಕಾರಣಗಳಾಗುತ್ತವೆ. ಅನುವಂಶಿಕತೆ, ಹಾರ್ಮೋನ್ ಬದಲಾವಣೆ, ನಿದ್ರೆ ಕೊರತೆ, ಆಯಾಸ ಅಥವಾ ತಾಯ್ತನದ ಒತ್ತಡದ ಫಲಿತಾಂಶವೂ ಇದಾಗಬಹುದು.
ಪ್ರಸವ ನಂತರದ ಖಿನ್ನತೆಯ ಹರಡುವಿಕೆಯ ಒಟ್ಟಾರೆ ಅಂದಾಜು ಶೇ 22ರಷ್ಟು ವರದಿಯಾಗಿದ್ದು, ಹೆರಿಗೆಯ ಎರಡು ವಾರಗಳಲ್ಲಿ ಈ ಖಿನ್ನತೆ ಕಾಡುತ್ತದೆ.
ಪೋಷಕತ್ವದ ಹೊಣೆಗಾರಿಯೆಯು ದಂಪತಿಗಳಿಗೆ ಸವಾಲುದಾಯಕವಾಗಿದ್ದು, ಅನೇಕ ಬಾರಿ ಇದು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆ ಸಂದರ್ಭದಲ್ಲಿ ಕಾಡುವ ಕ್ಲಿಷ್ಟತೆ ಅಥವಾ ಐವಿಎಫ್ ಗರ್ಭಧಾರಣೆ ಮಾದರಿ ಸಹಾಯ, ಹೆರಿಗೆ ಬಳಿಕ ಹೆಚ್ಚುವರಿ ತೂಕ ಸೇರಿ ಹಲವು ಅಂಶಗಳು ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಗುರುಗ್ರಾಮದ ಮೆದಾಂತ ಆಸ್ಪತ್ರೆಯ ಮನೋವೈದ್ಯ ಡಾ ಸೌರಭ್ ಮೆಹ್ರೊತ್ರಾ ತಿಳಿಸಿದ್ದಾರೆ.