ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಭಾನುವಾರ ಇಬ್ಬರೂ ವಿಶೇಷ ವಿವಾಹ ಕಾಯ್ದೆಯಡಿ ಸಪ್ತಪದಿ ತುಳಿದಿದ್ದಾರೆ. ಮದುವೆ ಬಳಿಕ ನವ ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರು ಬಿಳಿಬಣ್ಣದ ಉಡುಪಿನಲ್ಲಿರುವ ಫೋಟೋಗಳನ್ನು ಹಂಚಿಕೊಂಡು ಅದಕ್ಕೆ ಶೀರ್ಷಿಕೆಯನ್ನು ಸಹ ನೀಡಿದ್ದಾರೆ.
ಶೀರ್ಷಿಕೆಯಲ್ಲಿ ಹೇಳಿರುವುದೇನು?:ಫೋಟೋದೊಂದಿಗೆ ಶೀರ್ಷಿಕೆಯಲ್ಲಿ ಸೋನಾಕ್ಷಿ ಮತ್ತು ಜಹೀರ್, "ಈ ದಿನ, (23.06.2017)ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ಶುದ್ಧ ರೂಪದಲ್ಲಿ ನೋಡಿದ್ದೇವೆ ಮತ್ತು ಅದನ್ನು ಹಿಡಿದಿಡಲು ನಿರ್ಧರಿಸಿದ್ದೇವೆ. ಇಂದು ಆ ಪ್ರೀತಿ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವುದನ್ನು ಕಲಿಸಿಕೊಟ್ಟು ಹಿರಿಯರ ಆಶೀರ್ವಾದ ಪಡೆದು ಮದುವೆಯಾದೆವು. ಇಂದು ಆ ಪ್ರೀತಿಯು ಎಲ್ಲ ಸವಾಲುಗಳನ್ನು ಎದುರಿಸಿ ವಿಜಯವನ್ನು ಸಾಧಿಸಲು ಮಾರ್ಗದರ್ಶನ ನೀಡಿದೆ. ಎರಡೂ ಕುಟುಂಬಗಳು ಮತ್ತು ಇಬ್ಬರ ದೇವರುಗಳ ಆಶೀರ್ವಾದದೊಂದಿಗೆ ಇಂದು ನಾವಿಬ್ಬರು ಗಂಡ ಹೆಂಡತಿ ಆಗಿದ್ದೇವೆ. ನನಗೆ ನಂಬಿಕೆ ಇದೆ ಈ ಪ್ರೀತಿ ಇಂದಿನಿಂದ ಕೊನೆವರೆಗೂ ಶಾಶ್ವತವಾಗಿ ಉಳಿಯಲಿದೆ ಎಂಬ ಭರವಸೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.
ಮದುವೆ ಸಮಾರಂಭಕ್ಕೆ ಸಾಕ್ಷಿಯಾಗದ ಬಾಲಿವುಡ್ ದಿಗ್ಗಜರು:ಸೋನಾಕ್ಷಿ ಮತ್ತು ಜಹೀರ್ ಮದುವೆ ಸಮಾರಂಭದಲ್ಲಿ ಶತ್ರುಘ್ನ ಸಿನ್ಹಾ ಮತ್ತು ಕುಟುಂಬ, ಜಹೀರ್ ಮತ್ತು ಕುಟುಂಬ ಹಾಗೂ ಆತ್ಮೀಯ ಸ್ನೇಹಿತರಾದ ಸಾಕಿಬ್ ಸಲೀಮ್, ಹುಮಾ ಖುರೇಷಿ ಜೊತೆಗೆ ಆಯುಷ್ ಶರ್ಮಾ, ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹ್ಯಾರಿ, ಅನಿಲ್ ಕಪೂರ್ ಸೇರಿ ಚಿತ್ರತಾರೆಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವ ದಂಪತಿಗೆ ಶುಭಹಾರೈಸಿದ್ದಾರೆ.