ಕರ್ನಾಟಕ

karnataka

ETV Bharat / entertainment

ಮೊದಲ ದಿನವೇ ₹ 4 ಕೋಟಿ ವ್ಯವಹಾರ ನಡೆಸಿದ 'ಯೋಧ': ಸಿದ್ಧಾರ್ಥ್ ಮಲ್ಹೋತ್ರಾ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ - Yodha

ಶುಕ್ರವಾರ ತೆರೆಗಪ್ಪಳಿಸಿರೋ 'ಯೋಧ' ಉತ್ತಮ ಪ್ರದರ್ಶನ ಕಾಣುತ್ತಿದೆ.

Yodha Box Office Collection
ಯೋಧ ಬಾಕ್ಸ್ ಆಫೀಸ್​​ ಕಲೆಕ್ಷನ್​​

By ETV Bharat Karnataka Team

Published : Mar 16, 2024, 12:55 PM IST

ಬಾಲಿವುಡ್​​ ಸೂಪರ್​ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಯೋಧ' ನಿನ್ನೆಯಷ್ಟೇ ಚಿತ್ರಮಂದಿರ ಪ್ರವೇಶಿಸಿದೆ. ಬಹುನಿರೀಕ್ಷೆಗಳೊಂದಿಗೆ ತೆರೆಗಪ್ಪಳಿಸಿದ ಈ ಚಿತ್ರ ಬಹುತೇಕ ಪಾಸಿಟಿವ್​​ ರೆಸ್ಪಾನ್ಸ್ ಸ್ವೀಕರಿಸಿದೆ. ಬಾಕ್ಸ್​ ಆಫೀಸ್​ ವ್ಯವಹಾರಕ್ಕೆ ಬಂದರೆ, ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಅಂಕಿ-ಅಂಶಗಳ ಮೂಲಕ ಎಲ್ಲರ ಗಮನ ಸೆಳೆದಿದೆ.

ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಶೇರ್ ಮಾಡಿರೋ ಮಾಹಿತಿ ಪ್ರಕಾರ, ಆ್ಯಕ್ಷನ್​​-ಪ್ಯಾಕ್ಡ್ ಚಿತ್ರ ತನ್ನ ಮೊದಲ ದಿನ ಭಾರತದಲ್ಲಿ ಉತ್ತಮ ವ್ಯವಹಾರ ನಡೆಸಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಮುಖ್ಯಭೂಮಿಕೆಯಲ್ಲಿದ್ದಾರೆ. ಸಿನಿಮಾಗೆ ಹೊಸಬರಾದ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ಅವರ ನಿರ್ದೇಶನವಿದೆ. ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಶಶಾಂಕ್ ಖೈತಾನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮಾರ್ಚ್ 15, ಶುಕ್ರವಾರದಂದು ಬಿಡುಗಡೆ ಆಗಿರುವ 'ಯೋಧ' ಭಾರತೀಯ ಬಾಕ್ಸ್​​ ಆಫೀಸ್​ನಲ್ಲೇ 4.25 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಆಕ್ಯುಪೆನ್ಸಿ ರೇಟ್​​ ಶೇ. 13.86ರಷ್ಟಿತ್ತು ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಸಾಗರ್ ಆಂಬ್ರೆ ಮತ್ತು ಪುಷ್ಕರ್ ಓಜಾ ಅವರ ಚೊಚ್ಚಲ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ರೋಮಾಂಚಕ ಸಿನಿಮೀಯ ಅನುಭವ ನೀಡಿದೆ ಎಂದು ಸಿನಿಮಾ ವೀಕ್ಷಿಸಿದವರು ತಿಳಿಸಿದ್ದಾರೆ.

ಇದನ್ನೂ ಓದಿ:ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಯೋಧ' ತೆರೆಗೆ: ಕಿಯಾರಾ ಅಡ್ವಾಣಿ ಸೇರಿ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ

ದೆಹಲಿಯಲ್ಲಿನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರಾ, ಚಿತ್ರದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದರು. ಕಾಲ್ಪನಿಕ ಕಥಾಹಂದರವನ್ನು ಹೈಲೈಟ್ ಮಾಡಿದ್ದರು. ತಮ್ಮ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ಬಾಲಿವುಡ್​ ನಟ ಅಮಿತಾಭ್​ ಬಚ್ಚನ್ ಅನಾರೋಗ್ಯದ ವದಂತಿ​: ಸ್ಪಷ್ಟನೆ ನೀಡಿದ ಬಿಗ್​ ಬಿ

ಮುಂಬೈನಲ್ಲಿ ಗುರುವಾರ ರಾತ್ರಿ 'ಯೋಧ' ಸ್ಪೆಷಲ್​​ ಸ್ಕ್ರೀನಿಂಗ್​​ ನಡೆಯಿತು. ಸೆಲೆಬ್ರಿಟಿಗಳು, ಚಿತ್ರತಂಡ ಮತ್ತು ಅವರ ಕುಟುಂಬಸ್ಥರಿಗಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಸಂಪೂರ್ಣ ಕುಟುಂಬ ಹಾಜರಾಗಿತ್ತು. ಸಿನಿಮಾ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದರು. ಈ ಈವೆಂಟ್​ನ ಫೋಟೋ - ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿತ್ತು. ಸಿನಿಮಾ ವೀಕ್ಷಿಸಿದ ಸಿದ್ಧಾರ್ಥ್ ಮಲ್ಹೋತ್ರಾ ಪತ್ನಿ, ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾಣಿ ಚಿತ್ರತಂಡದ ಪ್ರಯತ್ನಕ್ಕೆ ಫುಲ್​ ಮಾರ್ಕ್ ಕೊಟ್ಟಿದ್ದರು. ''ಸಿದ್ಧಾರ್ಥ್ ಮಲ್ಹೋತ್ರಾ, ನೀವು ಅದ್ಭುತ. ನಮ್ಮೆಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಸಾಗರ್ ಅಂಬ್ರೆ, ಪುಷ್ಕರ್ ಓಜಾ ಇದು ನಿಮ್ಮ ಮೊದಲ ಸಿನಿಮಾ ಎಂದು ನಂಬಲಾಗುತ್ತಿಲ್ಲ. ದಿಶಾ ಪಟಾನಿ ಮತ್ತು ರಾಶಿ ಖನ್ನಾ ಚಿತ್ರದ ಲೇಡಿ ಯೋಧಾಸ್" ಎಂದುಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ABOUT THE AUTHOR

...view details