ಕರ್ನಾಟಕ

karnataka

ವಜ್ರಮುನಿ ಗೆಟಪ್​​​​ನಲ್ಲಿ ನಟ ಕೋಮಲ್: 'ಯಲಾಕುನ್ನಿ' ಟೀಸರ್​​ಗೆ ಮೆಚ್ಚುಗೆ - Yela Kunni Teaser

By ETV Bharat Karnataka Team

Published : Sep 17, 2024, 12:32 PM IST

'ಯಲಾಕುನ್ನಿ' ಶೀರ್ಷಿಕೆಯಡಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾವೊಂದು ನಿರ್ಮಾಣ ಆಗುತ್ತಿರೋದು ನಿಮಗೆ ತಿಳಿದಿರುವ ವಿಚಾರವೇ. ಬಹುನಿರೀಕ್ಷಿತ ಚಿತ್ರದ ಟೀಸರ್​​ ಅನಾವರಣಗೊಂಡಿದ್ದು, ವಜ್ರಮುನಿ ಗೆಟಪ್​​​​ನಲ್ಲಿ ನಟ ಕೋಮಲ್ ಕುಮಾರ್​ ಗಮನ ಸೆಳೆದಿದ್ದಾರೆ.

Komal Kumar in Vajramuni Getup
ವಜ್ರಮುನಿ ಗೆಟಪ್​​​​ನಲ್ಲಿ ನಟ ಕೋಮಲ್ (ETV Bharat)

'ಯಲಾಕುನ್ನಿ', ಈ ಫೇಮಸ್​​ ಡೈಲಾಗ್ ಅನ್ನು ಮರೆಯೋದು ತಾನೇ ಹೇಗೆ ಹೇಳಿ. ಖಳನಟರ ಖಳನಟ ದಿ. ವಜ್ರಮುನಿ ಅವರ ಪಾಪ್ಯುಲರ್​ ಡೈಲಾಗ್​​. ಇದು ಇಂದಿಗೂ ಅಷ್ಟೇ ಫೇಮಸ್​​. 'ಯಲಾಕುನ್ನಿ' ಶೀರ್ಷಿಕೆಯಡಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾವೊಂದು ನಿರ್ಮಾಣ ಆಗುತ್ತಿರೋದು ನಿಮಗೆ ತಿಳಿದಿರುವ ವಿಚಾರವೇ. ಇದೀಗ ಈ ಬಹುನಿರೀಕ್ಷಿತ ಚಿತ್ರದ ಟೀಸರ್​​ ಅನಾವರಣಗೊಂಡಿದ್ದು, ಸಂಪೂರ್ಣ ಸಿನಿಮಾ ನೋಡುವ ಕುತೂಹಲವನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

ಕೋಮಲ್ ಕುಮಾರ್, ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಕಾಮಿಡಿ ಮಾಡುತ್ತಾ ಗುರುತಿಸಿಕೊಂಡಿರುವ ನಟ. ಹಾಸ್ಯನಟನೆ ಜೊತೆ ಜೊತೆಗೆ ನಾಯಕ ನಟ ಆದವರ ಪೈಕಿ ಕೋಮಲ್ ಕುಮಾರ್ ಕೂಡಾ ಒಬ್ಬರು. ದಿ. ಡಾ.ವಿಷ್ಣುವರ್ಧನ್, ಶಿವರಾಜ್​​ಕುಮಾರ್, ದಿ. ಪುನೀತ್ ರಾಜ್‍ಕುಮಾರ್, ಜಗ್ಗೇಶ್, ರಮೇಶ್ ಅರವಿಂದ್ ಹೀಗೆ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಜೊತೆ ಕಾಮಿಡಿ ಮಾಡಿ ಬಳಿಕ ಹೀರೋ ನಟ ಕೋಮಲ್ ಕುಮಾರ್ ಸದ್ಯ ಯಲಾಕುನ್ನಿ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ.

ಯಲಾಕುನ್ನಿ ಚಿತ್ರತಂಡ (ETV Bharat)

'ಯಲಾಕುನ್ನಿ ಮೇರಾ ನಾಮ್ ವಜ್ರಮುನಿ' ಶೂಟಿಂಗ್​​​ ಪೂರ್ಣಗೊಂಡಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್​​ ಕೆಲಸದಲ್ಲಿ ಬ್ಯುಸಿಯಾಗಿದೆ. ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿರೋ ಚಿತ್ರದ ಟೀಸರ್ ಇತ್ತೀಚೆಗೆ ಅನಾವರಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಿರಿಯ ನಟ ವಜ್ರಮುನಿ ಅವರ ಗೆಟಪ್​ನಲ್ಲಿ ಕೋಮಲ್​ ಕುಮಾರ್​ ಕಾಣಿಸಿಕೊಂಡಿದ್ದು, ಸಿನಿಪ್ರೇಮಿಗಳಿಂದ ಭೇಷ್ ಅನ್ನಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:'ನಟಿಯರಿಗೆ ಸಮಸ್ಯೆಗಳಿವೆ, ಆದ್ರೆ ಹೇಳಿಕೊಂಡಿಲ್ಲ': ನಟಿ ನೀತು ಶೆಟ್ಟಿ, ನಿರ್ದೇಶಕಿ ಕವಿತಾ ಲಂಕೇಶ್ - Film Chamber Meeting Reactions

ಸದ್ಯ ಅನಾವರಣಗೊಂಡಿರುವ ಯಲಾಕುನ್ನಿ ಚಿತ್ರದ ಟೀಸರ್​​ನಲ್ಲಿ ಕೋಮಲ್ ಕುಮಾರ್​​ ಎರಡು ಶೇಡ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಎಲ್ಲಾ ವಿಲನ್​​ಗಳಿಗೂ ಅಪ್ಪ ಎಂದು ಹೇಳುವ ಡೈಲಾಗ್​ನಲ್ಲಿ ಕೋಮಲ್ ಅಬ್ಬರಿಸಿದ್ದಾರೆ. ವಜ್ರಮುನಿ ಅವರ ಗೆಟಪ್​​​ ನೋಡುಗರ ಗಮನ ಸೆಳೆದಿದೆ. 'ಮೇರಾ ನಾಮ್ ವಜ್ರಮುನಿ' ಎಂಬ ಅಡಿಬರಹ ಹಾಗೂ "ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ" ಎಂಬ ಬರಹದೊಂದಿಗೆ "ಯಲಾಕುನ್ನಿ" ಚಿತ್ರ ಮೂಡಿಬರಲಿದೆ. ನವರಸನಾಯಕ ಜಗ್ಗೇಶ್ ಅವರ ಮಗ ಯತಿರಾಜ್ ಮತ್ತು ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.

ಇದನ್ನೂ ಓದಿ:'10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೇನೇ ಲೆಕ್ಕ, ಇದು ಹೊಸ ಅಧ್ಯಾಯ': 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್​​​ಗೆ ಸುದೀಪೇ ಬಾಸ್​!! - Kannada Bigg Boss

'ಯಲಾಕುನ್ನಿ' ಸಿನಿಮಾವನ್ನು ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ನಿರ್ಮಿಸಿದ್ದಾರೆ. ಹೊಸ ಪ್ರತಿಭೆ ಎನ್​ಅರ್​​ ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ರಿವೀಲ್ ಆಗಿರುವ ಯಲಾಕುನ್ನಿ ಟೀಸರ್ ಕೋಮಲ್ ಅವರಿಗೆ ಮತ್ತೆ ಒಳ್ಳೆ ಹೆಸರು ತಂದುಕೊಡುವ ಸುಳಿವನ್ನು ನೀಡಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಮಾಡುವ ತಯಾರಿಯಲ್ಲಿ ಚಿತ್ರತಂಡವಿದೆ.

ABOUT THE AUTHOR

...view details