ಕರ್ನಾಟಕ

karnataka

ETV Bharat / entertainment

ಸಿನಿಪ್ರಿಯರೇ, ಈ ವಾರ ಬಿಡುಗಡೆಯಾಗಿರುವ ಚಿತ್ರಗಳಿವು - New Movies - NEW MOVIES

ಇಂದು ತೆರೆಕಂಡಿರುವ ಸಿನಿಮಾ, ಒಟಿಟಿ ಪ್ರಾಜೆಕ್ಟ್​ಗಳು ಇಲ್ಲಿವೆ ನೋಡಿ.

Fresh Releases
ಈ ವಾರ ಬಿಡುಗಡೆಯಾಗಿರುವ ಚಿತ್ರಗಳಿವು (ETV Bharat)

By ETV Bharat Karnataka Team

Published : May 31, 2024, 5:30 PM IST

ಶುಕ್ರವಾರ ಬಂತೆಂದರೆ ಸಿನಿಪ್ರಿಯರಿಗೆ ಹಬ್ಬ. ವಾರಾಂತ್ಯದ ಮೋಜಿಗಾಗಿ ಸಿದ್ಧರಾಗಿದ್ದರೆ, ಈ ವಾರ ಚಿತ್ರಮಂದಿರ ಮತ್ತು ವಿವಿಧ ಓಟಿಟಿ ಪ್ಲಾಟ್​​ಫಾರ್ಮ್​​​ಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳ್ಯಾವುವು? ಎಂಬುದನ್ನು ನೋಡೋಣ ಬನ್ನಿ. ಈ ಶುಕ್ರವಾರ ಬಿಗ್​​ ಸ್ಕ್ರೀನ್​ ಮೇಲೆ ಅತ್ಯಾಕರ್ಷಕ ಪ್ರೊಜೆಕ್ಟ್​​ಗಳು ಬಂದಿದೆ. ರೊಮ್ಯಾಂಟಿಕ್​ ಡ್ರಾಮಾಗಳಿಂದ ಹಿಡಿದು ಆ್ಯಕ್ಷನ್​ ಸಿನಿಮಾಗಳವರೆಗೆ ವಿವಿಧ ವರ್ಗಗಳ ಪ್ರೇಕ್ಷಕರಿಗೆ ಸಿನಿಮಾ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ.

  • ಜಾಹ್ನವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ನಟನೆಯ ಮಿಸ್ಟರ್ ಆ್ಯಂಡ್​ ಮಿಸೆಸ್ ಮಾಹಿ ಚಿತ್ರ ಬಿಡುಗಡೆ ಆಗಿದೆ. ಇದು ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಈ ಕಲಾವಿದರ ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ನಾಳೆ ಬೆಳಗ್ಗೆ ಸಿಗುವ ಬಾಕ್ಸ್ ಆಫೀಸ್​ ಸಂಖ್ಯೆ ತಿಳಿಸಲಿದೆ. ಸುಂದರ ಪ್ರೇಮ್​​ಕಹಾನಿ ಮತ್ತು ಜೋಡಿ ನಡುವೆ ಬರುವ ಏರಿಳಿತಗಳನ್ನು ಈ ಸಿನಿಮಾ ಒಳಗೊಂಡಿದೆ.
  • ಮಕ್ಕಳಿಗಾಗಿ, ಹಿಂದಿ 'ಛೋಟಾ ಭೀಮ್ ಅಂಡ್​​​​ ದಿ ಕರ್ಸ್ ಆಫ್​ ದಮ್ಯಾನ್​​' ಚಿತ್ರ ಬಿಡುಗಡೆಗೊಂಡಿದೆ. ಭೀಮ್ ಮತ್ತು ಸ್ನೇಹಿತರ ರೋಮಾಂಚಕ ಅನಿಮೇಟೆಡ್ ಪ್ರೊಜೆಕ್ಟ್​ ಇದು.
  • 'ಸವಿ: ಎ ಬ್ಲಡಿ ಹೌಸ್‌ವೈಫ್' ಹಿಂದಿ ಸಿನಿಮಾ ಕೂಡ ಇಂದೇ ತೆರೆಕಂಡಿದೆ. ತನ್ನ ಗಂಡನನ್ನು ರಕ್ಷಿಸುವ ಧೈರ್ಯಶಾಲಿ ಗೃಹಿಣಿಯ ಕಥಾಹಂದರದೊಂದಿಗೆ ನಿಮ್ಮನ್ನು ಸೆಳೆಯುವ ಭರವಸೆ ಈ ಸಿನಿಮಾ ನೀಡಿದೆ.

ನೀವು ನೀವಿದ್ದಲ್ಲೇ ಕುಳಿತು ಸಿನಿಮಾ ನೋಡಲಿಚ್ಛಿಸಿದರೆ, ಚಿಂತಿಸಬೇಡಿ. ಇಂದು ವಿವಿಧ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಹಲವು ಶೋ, ಸಿನಿಮಾಗಳು ಬಿಡುಗಡೆಗೊಂಡಿವೆ.

  • ನೆಟ್‌ಫ್ಲಿಕ್ಸ್​ನಲ್ಲಿ ಎರಿಕ್​​ ಶೋ ಮತ್ತು ಎ ಪಾರ್ಟ್ ಆಫ್ ಯು ಪ್ರದರ್ಶನ ಪ್ರಾರಂಭಿಸಿದೆ.
  • ಅಲ್ಲದೇ, ಹೌ ಟು ರೂಯಿನ್ ಲವ್ ಕಾಮಿಡಿ ಶೋ ಕೂಡ ಬಿಡುಗಡೆ ಆಗಿದೆ.
  • ಜಿಯೋ ಸಿನಿಮಾದಲ್ಲಿ ದೇದ್ ಬಿಘಾ ಜಮೀನ್ ಸಿನಿಮಾ ಬಿಡುಗಡೆ ಆಗಿದೆ. ನ್ಯಾಯ ಮತ್ತು ಸ್ಥಿತಿಸ್ಥಾಪಕತ್ವದಂತಹ ನಿರೂಪಣೆಯೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆ ನೀಡಿದೆ.
  • ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ, ಜಿಮ್ ಹೆನ್ಸನ್ ಐಡಿಯಾ ಮ್ಯಾನ್‌ ರಿಲೀಸ್​ ಆಗಿದೆ. ಜೊತೆಗೆ, ಕ್ಲಾಸಿಕ್ ಚಿತ್ರ ದಿ ಓಮೆನ್‌ನ ಪ್ರೀಕ್ವೆಲ್​ ದಿ ಫಸ್ಟ್ ಓಮೆನ್‌ ವೀಕ್ಷಿಸಲು ಸಿದ್ಧರಾಗಿ.
  • ಅಮೆಜಾನ್ ಪ್ರೈಮ್ ವಿಡಿಯೋ, ಪಂಚಾಯತ್ ಸೀಸನ್ 3 ಮೂಲಕ ನಗು ಮತ್ತು ಜೀವನದ ಪಾಠಗಳನ್ನು ನಿಮಗಾಗಿ ಮರಳಿ ತಂದಿದೆ. ಉತ್ತರ ಪ್ರದೇಶದ ಕಾಲ್ಪನಿಕ ಹಳ್ಳಿಯ ಹೃದಯಸ್ಪರ್ಶಿ ಕ್ಷಣಗಳನ್ನು ನೀಡುತ್ತದೆ.

ಇದನ್ನೂ ಓದಿ:'ಪ್ರೇಮ್​ ಪರ್ಫೆಕ್ಷನಿಸ್ಟ್': ಕನ್ನಡ ನಿರ್ದೇಶಕನ ಕೊಂಡಾಡಿದ ಶಿಲ್ಪಾ ಶೆಟ್ಟಿ; ಸ್ಪೆಷಲ್​​ ವಿಡಿಯೋ ರಿವೀಲ್ - Shilpa Shetty

ಚಿತ್ರಮಂದಿರಗಳಿಗೆ ಹೋಗಿ ಅಥವಾ ಮನೆಯಲ್ಲಿ ಆರಾಮವಾಗಿ ಕುಳಿತು ಈ ವಾರಾಂತ್ಯ ನೋಡಬಹುದಾದ ಚಿತ್ರಗಳಿವು. ಈ ಪ್ರೊಜೆಕ್ಟ್​ಗಳು ನಿಮಗೆ ಅದ್ಭುತ ಮನರಂಜನೆ ನೀಡಲು ಸಜ್ಜಾಗಿದೆ.

ABOUT THE AUTHOR

...view details