ಸ್ಯಾಂಡಲ್ವುಡ್ನಲ್ಲಿ ಫನ್ ಆ್ಯಂಡ್ ರೊಮ್ಯಾಂಟಿಂಕ್ ಸಿನಿಮಾಗಳನ್ನೇ ಮಾಡುತ್ತಾ ತಮ್ಮದೇ ಆದ ಸ್ಟಾರ್ಡಮ್ ಹೊಂದಿರುವ ನಟ ದೂದ್ ಪೇಡಾ ದಿಗಂತ್. ಗಾಳಿಪಟ 2 ಚಿತ್ರದ ಬಳಿಕ ದಿಗಂತ್ ಮಂಚಾಲೆ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಪೌಡರ್'. ಸದ್ಯ ಟ್ರೇಲರ್ನಿಂದ ಕನ್ನಡ ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ 'ಪೌಡರ್' ನಟ ದಿಗಂತ್ ಅವರಿಗೆ ಮತ್ತಷ್ಟು ಸ್ಟಾರ್ ವ್ಯಾಲ್ಯೂ ತಂದುಕೊಡುವ ಲಕ್ಷಣಗಳಿವೆ. ಪೌಡರ್ ಸಿನಿಮಾ ಜಪಿಸುತ್ತಿರುವ ಇವರು ತಮ್ಮ ಸಿನಿಮಾ ಮತ್ತು ಕೆಲ ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ತಿಳಿಸಿದ್ದಾರೆ.
ಒಂದು ಕಾಲದಲ್ಲಿ ದಿಗಂತ್ ಅವರಿಗೆ ಸಿಕ್ಕಾಪಟ್ಟೆ ಹೆಣ್ಮಕ್ಕಳು ಫ್ಯಾನ್ಸ್ ಇದ್ರು ಎಂಬ ಮಾತು ಎದುರಾಗುತ್ತಿದ್ದಂತೆ, ''ಈಗಿಲ್ಲ, ನೀವು ಕಣ್ಣು ಹಾಕಿರೋದೇ ಅದಕ್ಕೆ ಕಾರಣ'' ಎಂದು ಹಾಸ್ಯಚಟಾಕಿ ಹಾರಿಸಿದರು. ನಂತರ, ಸಿನಿಮಾ ಪೌಡರ್ ಒಂದರ ಸುತ್ತುವ ಕಥೆ. ಸಖತ್ ಥ್ರಿಲ್ಲಿಂಗ್ ಆಗಿದೆ. ಈ ಸಿನಿಮಾದ ಕಥೆಗಾರ ದೀಪಕ್ ಅವರು ಈ ಪಾತ್ರಕ್ಕೆ ದಿಗಂತ್ ಚೆನ್ನಾಗಿ ಸೂಟ್ ಆಗ್ತಾರೆಂದು ತಂಡಕ್ಕೆ ಸಲಹೆ ಕೊಟ್ಟಿದ್ದರು. ಆಗ ಕೆಆರ್ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಒಂದು ಕಥೆ ಬಗ್ಗೆ ಹೇಳಿದ್ದು, ನಾನು ಒಪ್ಪಿಕೊಂಡೆ. ಇದೊಂದು ಪಕ್ಕಾ ಔಟ್ ಆ್ಯಂಡ್ ಔಟ್ ಕಾಮಿಡಿ. ರಂಗಾಯಣ ರಘು, ರವಿಶಂಕರ್ ಗೌಡ, ಗೋಪಾಲ ಕೃಷ್ಣ ದೇಶಪಾಂಡೆ, ಅನಿರುದ್ಧ್ ಆಚಾರ್ಯ, ನಾಗಭೂಷಣ್ ಅವರಂತಹ ಕಾಮಿಡಿ ಸ್ಟಾರ್ಗಳ ಜೊತೆ ಅಭಿನಯಿಸಿರುವ ಖುಷಿ ಇದೆ" ಎಂದು ತಿಳಿಸಿದರು.
"ಪೌಡರ್ ಅಂದಾಕ್ಷಣ ನನಗೆ ನಾನು ಪ್ರಾಥಮಿಕ ಶಾಲೆಯಿಂದ ಹೈಸ್ಕೂಲ್ಗೆ ಹೋದಾಗ ಯಾವುದೋ ಒಂದು ಬ್ರ್ಯಾಂಡೆಂಡ್ ಪೌಡರ್ ಹಾಕಿಕೊಂಡ ದಿನಗಳು ನೆನಪಾಗುತ್ತವೆ. ಅಪ್ಪನ ಬಳಿ ಪೌಡರ್ ಬೇಕೆಂದು ಕೇಳಿದಾಗ ಈ ವಯಸ್ಸಿಗೆ ನಿನಗೆ ಯಾಕೋ ಬೇಕು ಪೌಡರ್? ಎಂದು ಬೈದಿದ್ದರು. ನಂತರ, ಅವರಿಗೆ ಗೊತ್ತಿಲ್ಲದಂತೆ ಪೌಡರ್ ತೆಗೆದುಕೊಂಡು ಶರ್ಟ್ ಮೇಲೆ ಹಾಗೂ ಕತ್ತಿಗೆ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ" ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
"ಹೆಚ್ಚಾಗಿ ರೊಮ್ಯಾಂಟಿಂಕ್ ಕಾಮಿಡಿ ಸಿನಿಮಾಗಳಲ್ಲಿ ನನ್ನನ್ನು ಜನರು ಇಷ್ಟಪಟ್ಟಿದ್ದಾರೆ. ನಾನು ಅದೇ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದ್ರೆ ಲವರ್ ಬಾಯ್ ಜೊತೆಗೆ ಕಾಮಿಡಿ ಮಾಡೋದು ಚಾಲೆಂಜಿಂಗ್ ಆಗಿರುತ್ತದೆ" ಅಂತಾರೆ ದಿಗಂತ್.
"ಚಿತ್ರದಲ್ಲಿ ನಟಿಸಿರುವ ಧನ್ಯಾ ಬಗ್ಗೆ ಹೇಳಬೇಕಂದ್ರೆ ಈ ಹಿಂದೆ 'ಜಡ್ಜ್ಮೆಂಡ್' ಚಿತ್ರದಲ್ಲಿ ನಮ್ಮಿಬ್ಬರ ಸ್ನೇಹ ಶುರುವಾಯಿತು. ಆವಾಗ್ಲೇ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿತ್ತು. ಅದೇ ರೀತಿ ಪೌಡರ್ ಚಿತ್ರದಲ್ಲೂ ಧನ್ಯಾ ನೋಡಿ ನಾನು ಚಿಕ್ಕ ಮಕ್ಕಳಂತೆ ಅಭಿನಯಿಸಿದ್ದೇನೆ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ನಮ್ಮ ಕಡೆಯಿಂದ ಬಹಳ ಚೆನ್ನಾಗಿ ಅಭಿನಯ ಮಾಡಿಸಿದ್ದಾರೆ. ಧನ್ಯಾ ಕೂಡ ದೊಡ್ಡ ಸ್ಟಾರ್ ಕುಟುಂಬದಿಂದ ಬಂದಿದ್ದು, ಉತ್ತಮವಾಗಿ ಅಭಿನಯಿಸಿದ್ದಾರೆ" ಎಂದು ತಿಳಿಸಿದರು.
"ಸಿನಿಮಾದ ಕ್ಲೈಮಾಕ್ಸ್ ಶೂಟಿಂಗ್ನಲ್ಲಿ ನಾವೆಲ್ಲರೂ ರಿಸ್ಕ್ ತೆಗೆದುಕೊಂಡು ಅಭಿನಯಿಸಿದೆವು. ಕ್ಲೈಮ್ಯಾಕ್ಸ್ ಸೀನ್ ಟೈಮಲ್ಲಿ ಕಣ್ಣಿಗೆ ಕಾಣದ ಹಾಗೇ ಸ್ಲೋಕ್ ಹಾಕಿದ್ರು. ಶೂಟಿಂಗ್ ಮುಗಿದು ಎರಡು ದಿನಗಳ ಬಳಿಕ ಕಿವಿ ಮೂಗಿನಲ್ಲಿ ಏನೋ ಬರಲು ಶುರುವಾಯಿತ್ತು. ಆದ್ರೆ ಯಾರಿಗೂ ಸಮಸ್ಯೆ ಆಗಲಿಲ್ಲ. ಶೂಟಿಂಗ್ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ" ಎಂದು ತಿಳಿಸಿದರು.