ಕರ್ನಾಟಕ

karnataka

ETV Bharat / entertainment

ನಾನು ಸಿಂಗಲ್​ ಆಗಿರುತ್ತೇನೆಂದು ಅನಿಸುತ್ತದೆಯೇ? ಲವ್​ ಲೈಫ್​ ಬಗ್ಗೆ ಬಾಯ್ಬಿಟ್ಟ ವಿಜಯ್​ ದೇವರಕೊಂಡ - VIJAY DEVERAKONDA LOVE

ಸೌತ್​ ಸೂಪರ್​ ಸ್ಟಾರ್ ವಿಜಯ್​ ದೇವರಕೊಂಡ 'ಲವ್​​ ಲೈಫ್​' ಬಗ್ಗೆ ಬಾಯ್ಬಿಟ್ಟಿದ್ದಾರೆ.

Vijay Deverakonda, Rashmika Mandanna
ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ (Photo: ANI)

By ETV Bharat Entertainment Team

Published : Nov 21, 2024, 4:38 PM IST

ಅರ್ಜುನ್ ರೆಡ್ಡಿ ಮತ್ತು ಡಿಯರ್ ಕಾಮ್ರೇಡ್ ಅಂತಹ ಹಿಟ್ ಸಿನಿಮಾಗಳ​ ಪಾತ್ರಗಳಿಂದ ಹೆಸರುವಾಸಿಯಾಗಿರುವ ಸೌತ್​ ಸೂಪರ್​ ಸ್ಟಾರ್ ವಿಜಯ್ ದೇವರಕೊಂಡ ಅವರ ಮಹಿಳಾ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಟಾಲಿವುಡ್​ನ ಮೋಸ್ಟ್​​ ಎಲಿಜೆಬಲ್​​ ಬ್ಯಾಚುಲರ್‌ ಆಗಿ ಗುರುತಿಸಿಕೊಂಡಿರುವ ಇವರ ಹೆಸರು ಆಗಾಗ್ಗೆ ಕನ್ನಡತಿ ರಶ್ಮಿಕಾ ಮಂದಣ್ಣ ಅವರ ಜೊತೆ ಕೇಳಿಬರುತ್ತದೆ.

ಸಂದರ್ಶನಗಳಲ್ಲಿ ಪ್ರಾಮಾಣಿಕತೆಯ ಮಾತುಗಳ ಹೊರತಾಗಿಯೂ, ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗೇ ಇಟ್ಟುಕೊಂಡಿದ್ದಾರೆ. ವಿಶೇಷವಾಗಿ ಅವರ ರಿಲೇಶನ್​​ಶಿಪ್​​ ವಿಷಯ ಬಂದಾಗ ಗೌಪ್ಯತೆಗೆ ಮೊದಲ ಆದ್ಯತೆ ನೀಡುತ್ತಾರೆ. ಅದಾಗ್ಯೂ, ಇತ್ತೀಚೆಗೆ ನಟ ತಮ್ಮ ಲವ್ ಲೈಫ್​ ಬಗ್ಗೆ ಮಾತನಾಡಿದ್ದಾರೆ.​​​ ಸಂಬಂಧದಲ್ಲಿದ್ದೇನೆ ಎಂಬ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಸಹನಟಿ ರಶ್ಮಿಕಾ ಮಂದಣ್ಣ ಅವರ ಜೊತೆ ವಿಜಯ್​ ರಿಲೇಶನ್​ಶಿಪ್​​ ಬಗ್ಗೆ ವದಂತಿಗಳು ಹರಡಿಕೊಂಡಿರೋದು ನಿಮಗೆ ತಿಳಿದಿರುವ ವಿಷಯ. ಈ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿ ಮತ್ತು ಆಫ್-ಸ್ಕ್ರೀನ್ ಕ್ಲೋಸ್​​ನೆಸ್​​ ಬಗ್ಗೆ ಊಹಾಪೋಹಗಳು ನಿರಂತರವಾಗಿವೆ. ಈ ವದಂತಿಗಳ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿಲ್ಲವಾದರೂ, ವಿಜಯ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ರಿಲೇಶನ್​ಶಿಪ್​​ ಬಗ್ಗೆ​ ಮಾತನಾಡಿದ್ದಾರೆ​​.

ನಾನು ಹೀಗೆ ಸಿಂಗಲ್ ಆಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ?:35ರ ಹರೆಯದ ವಿಜಯ್ ಅವರಿಗೆ ಲವ್​ ಲೈಫ್​​ ಬಗ್ಗೆ ಪ್ರಶ್ನೆ ಎದುರಾದಾಗ, "ನಾನು ಹೀಗೆ ಸಿಂಗಲ್ ಆಗಿರುತ್ತೇನೆ ಎಂದು ನೀವು ಭಾವಿಸುತ್ತೀರಾ?" ಎಂದು ಪ್ರತಿಕ್ರಿಯಿಸಿದರು. ಅಲ್ಲದೇ ಅವರು ತಮ್ಮ ಸಹ - ನಟಿಯೊಂದಿಗೆ ಡೇಟಿಂಗ್ ಮಾಡಿರುವುದಾಗಿ ಖಚಿತಪಡಿಸಿದರು. ಇಷ್ಟಲ್ಲದೇ ನಟ ಪ್ರೀತಿಯನ್ನುದ್ದೇಶಿಸಿ ಮಾತನಾಡಿದ್ದಾರೆ. "ನನ್ನ ಪ್ರೀತಿ ನಿರೀಕ್ಷೆಗಳನ್ನೊಳಗೊಂಡಿರುತ್ತದೆ" ಎಂದು ತಿಳಿಸಿದರು. "ನನಗೆ ಅನ್​ಕಂಡೀಶನಲ್​ ಲವ್​ ಬಗ್ಗೆ ತಿಳಿದಿಲ್ಲ, ಏಕೆಂದರೆ ನನ್ನ ಪ್ರೀತಿಯು ನಿರೀಕ್ಷೆಗಳೊಂದಿಗೆ ಬರುತ್ತದೆ. ಹಾಗಾಗಿ, ನನ್ನ ಪ್ರೀತಿ ಅನ್​​ಕಂಡೀಶನಲ್​ ಆಗಿರುವುದಿಲ್ಲ. ನಾನು ಎಲ್ಲವನ್ನೂ ಅತಿಯಾಗಿ ರೊಮ್ಯಾಂಟಿಸೈಸ್ ಆಗಿ ಮಾಡಿದ್ದೇನೆ ಎಂದು ಭಾವಿಸುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ:'ಇಲ್ಲಿ ಕೀಳುಮಟ್ಟಕ್ಕಿಳಿದಿದ್ದಾರೆ, ನಾನು ಸಿಂಗಲ್​ ಸಿಂಹ': ಬಿಗ್ ಬಾಸ್​ನಲ್ಲಿ ಗುಡುಗಿದ ಚೈತ್ರಾ ಕುಂದಾಪುರ

ಮದುವೆಯ ಬಗ್ಗೆಯೂ ಪ್ರಶ್ನೆಗಳು ಎದುರಾದವು. ಓರ್ವರ ವೃತ್ತಿಜೀವನದ (ಗಂಡ ಅಥವಾ ಹೆಂಡತಿ) ಮೇಲೆ ಮದುವೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಕೇಳಿದಾಗ, ಪುರುಷರ ವೃತ್ತಿಜೀವನಕ್ಕೆ ಹೆಚ್ಚು ಅಡ್ಡಿಯಾಗದಿದ್ದರೂ, ಮಹಿಳೆಯರ ವೃತ್ತಿಜೀವನದ ಮೇಲೆ ಸವಾಲು ಬೀರಬಹುದು. ಇದು ಅವರ ವೃತ್ತಿಜೀವನದ ಸ್ವರೂಪವನ್ನು ಅವಲಂಬಿಸಿದೆ ಎಂದು ತಿಳಿಸಿದರು. ಇದು ಅವರ ಪ್ರಬುದ್ಧತೆ ಸಾಬೀತು ಪಡಿಸಿದೆ.

ಇದನ್ನೂ ಓದಿ:ಶ್ರೀಮುರಳಿಯ 'ಬಘೀರ' ವೀಕ್ಷಿಸಿಲ್ವೇ? ಹಾಗಾದ್ರೆ ಈ ಒಟಿಟಿಯಲ್ಲಿ ನೋಡಿ: ಈವರೆಗಿನ ಕಲೆಕ್ಷನ್​ ಮಾಹಿತಿ ನಿಮಗಾಗಿ

ಯಾವುದೇ ಸಂಬಂಧಕ್ಕೆ ಪರಸ್ಪರ ತಿಳಿವಳಿಕೆ ಮುಖ್ಯ:ಕುತೂಹಲಕಾರಿಯಾಗಿ, ವಿಜಯ್ ಡೇಟ್ಸ್ ಬಗ್ಗೆ ಮಾತನಾಡಿದ್ದಾರೆ. ಶೀಘ್ರ ಡೆಟ್​ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಬಹಿರಂಗಪಡಿಸಿದರು. ಅದರ ಬದಲಾಗಿ, ಯಾರೊಂದಿಗಾದರೂ ಮುಂದುವರಿಯುವ ಮುನ್ನ ಉತ್ತಮ ಸ್ನೇಹಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು. "ನಾನು ಯಾರ ಬಗ್ಗೆಯಾದರು ದೀರ್ಘ ಸಮಯದಿಂದ ತಿಳಿದ ನಂತರವೇ ಅವರೊಂದಿಗೆ ಹೋಗುತ್ತೇನೆ" ಎಂದು ಹೇಳಿದರು. ಯಾವುದೇ ಸಂಬಂಧಕ್ಕೆ ನಂಬಿಕೆ ಮತ್ತು ಪರಸ್ಪರ ತಿಳಿವಳಿಕೆ ಮುಖ್ಯವಾಗಿದೆ ಎಂಬುದನ್ನು ಅವರು ಸೂಚಿಸಿದ್ದಾರೆ.

ABOUT THE AUTHOR

...view details