ಕರ್ನಾಟಕ

karnataka

ETV Bharat / entertainment

ಹೊಸ ಪ್ರತಿಭೆಗಳ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್​ - ಅರುಣ್ ಅಮುಕ್ತ

ಮೋಷನ್​ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರತಂಡ ಸಿನಿಮಾದ ಕಲಾವಿದರನ್ನು ಪರಿಸಚಯಿಸಿದೆ.

Vidyarthi Vidyarthiniyare movie actors
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಕಲಾವಿದರು

By ETV Bharat Karnataka Team

Published : Mar 2, 2024, 9:18 AM IST

ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿಬಂದಿರುವ "ವಿದ್ಯಾರ್ಥಿ ವಿದ್ಯಾರ್ಥಿನಿಯರೇ" ಚಿತ್ರವು ಶೂಟಿಂಗ್​ ಆರಂಭವಾದಂದಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅತ್ಯಂತ ಕ್ರಿಯಾಶೀಲವಾಗಿ ಪ್ರೇಕ್ಷಕರನ್ನು ತಲುಪುವ ನಿಟ್ಟಿನಲ್ಲಿ ನಿರ್ದೇಶಕರ ಪಟ್ಟುಗಳೆಲ್ಲವೂ ಫಲ ಕೊಟ್ಟಿವೆ. ಇದೀಗ ಚಿತ್ರತಂಡವು ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಕಲಾವಿದರು

ಅಮರ್, ಭಾವನಾ, ಮಾನಸಿ ಹಾಗೂ ವಿವಾನ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಶೀರ್ಷಿಕೆ ಕೇಳಿದಾಕ್ಷಣ ಒಟ್ಟಾರೆ ಕಥಾನಕದ ಬಗೆಗೊಂದು ಸುಳಿವು ಸಿಗುತ್ತದೆ. ಆದರೆ, ಅಂತಹ ಯಾವ ಅಂದಾಜಿಗೂ ನಿಲುಕದ ಸ್ವರೂಪದಲ್ಲಿ ಈ ಸಿನಿಮಾವನ್ನು ರೂಪಿಸಿರುವ ಭರವಸೆ ನಿರ್ದೇಶಕ ಅರುಣ್ ಅಮುಕ್ತ ಅವರದ್ದಾಗಿದೆ. ಈ ಹಿಂದೆ ಟೈಟಲ್ ಲಾಂಚ್ ಕೂಡ ಪ್ರೇಕ್ಷಕರ ಗಮನ ಸೆಳೆಯುವ ರೀತಿಯಲ್ಲಿ ಮಾಡಿದ್ದ ಚಿತ್ರತಂಡ, ಇದೀಗ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಇದರ ಸುತ್ತ ಈಗೊಂದಷ್ಟು ನಿರೀಕ್ಷೆ ಮತ್ತು ಚರ್ಚೆ ಹುಟ್ಟಿಕೊಂಡಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ನಿರ್ದೇಶಕರು

ಇದುವರೆಗೂ ಈ ಸಿನಿಮಾದ ಪಾತ್ರವರ್ಗ ಕಾಣಿಸಿರಲಿಲ್ಲ. ಈಗ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಕೆಲ ಪಾತ್ರಗಳನ್ನು ರಿವೀಲ್​ ಮಾಡಲಾಗಿದೆ. ಇದರಲ್ಲಿ ಚಂದನ್ ಶೆಟ್ಟಿ, ಭಾವನಾ ಅಪ್ಪು, ಅಮರ್, ಮನಸ್ವಿ, ವಿವಾನ್ ಸುನಿಲ್ ಪುರಾಣಿಕ್, ಅರವಿಂದ ರಾಜ್ ಹಾಗೂ ಪ್ರಶಾಂತ್ ಸಂಬರ್ಗಿ ಮುಂತಾದವರು ನಟಿಸಿದ್ದಾರೆ. ಇದರಲ್ಲಿನ ನಾಲ್ಕು ಪಾತ್ರಗಳು ಈ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿವೆ. ಅಂದಹಾಗೆ ಇದೊಂದು ಟೀನೇಜ್ ಕಲ್ಟ್ ಸಿನಿಮಾ. ಈಗಾಗಲೇ ಕಾಲೇಜು ಕೇಂದ್ರಿತವಾದ ಒಂದಷ್ಟು ಸಿನಿಮಾಗಳು ತೆರೆಕಂಡು ಗೆದ್ದಿವೆ. ಆ ಸಾಲಿಗೆ ಈ ಚಿತ್ರವನ್ನೂ ಸೇರಿಸುವ ನಿಟ್ಟಿನಲ್ಲಿ ಚಿತ್ರತಂಡ ಶ್ರಮ ವಹಿಸುತ್ತಿದೆ.

ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಿಶೇಷವೆಂದರೆ, ಚಂದನ್ ಶೆಟ್ಟಿ ಪಾತ್ರವನ್ನು ಗೌಪ್ಯವಾಗಿಡಲಾಗಿದೆ. ಶಿವರಾತ್ರಿಯಂದು ಚಂದನ್ ಶೆಟ್ಟಿ ಪಾತ್ರವನ್ನು ಪರಿಚಯಿಸುವ ಮೋಷನ್ ಪೋಸ್ಟರ್ ಲಾಂಚ್ ಆಗಲಿದೆ.

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಪೋಸ್ಟರ್​

ಸುಬ್ರಹ್ಮಣ್ಯ ಕುಕ್ಕೆ ಮತ್ತು ಶಿವಲಿಂಗೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಸಿನಿಮಾದ ಚಿತ್ರೀಕರಣವು ಅಂತಿಮ ಹಂತದಲ್ಲಿದೆ.

ಇದನ್ನೂ ಓದಿ:'ದೃಶ್ಯಂ ಅಜಯ್​ ದೇವ್​ಗನ್​ ಸಿನಿಮಾ': ರೊಚ್ಚಿಗೆದ್ದ ಮೋಹನ್​ಲಾಲ್​ ಫ್ಯಾನ್ಸ್

ABOUT THE AUTHOR

...view details