ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ಚಿತ್ರ 'ಯು ಐ' ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. 9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿರುವ ಹಿನ್ನೆಲೆ, ಯು ಐ ಸಾಕಷ್ಟು ಸದ್ದು ಮಾಡಿತ್ತು. ಅದೇ ಸದ್ದಿನೊಂದಿಗೆ ಇಂದು ಸಿನಿಮಾ ಗ್ರ್ಯಾಂಡ್ ವೆಲ್ಕಮ್ ಪಡೆದುಕೊಂಡಿದೆ.
ಮೊದಲ ದಿನ ಕಲೆಕ್ಷನ್ ಅಂದಾಜು: ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆ.ವಿ.ಎನ್ ಪ್ರೊಡಕ್ಷನ್ಸ್ ವಿತರಣೆ ಮಾಡಿರುವ 'ಯುಐ' ತನ್ನ ಮೊದಲ ದಿನ ಎಷ್ಟು ವ್ಯವಹಾರ ನಡೆಸಬಹುದು ಎಂದು ಜನಸಾಮಾನ್ಯರಿಂದ ಹಿಡಿದು ಚಿತ್ರರಂಗದ ಗಣ್ಯರು ಕೂಡಾ ಕುತೂಹಲ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಉಪೇಂದ್ರ ಸಾರಥ್ಯದ 'ಯು ಐ' ಭಾರತದಲ್ಲಿ ತನ್ನ ಮೊದಲ ದಿನ 1.11 ಕೋಟಿ ರೂ. ಕಲೆಕ್ಷನ್ ಮಾಡಬಹುದು. ಈ ಅಂಕಿ - ಅಂಶ ಏರುವ ಸಾಧ್ಯತೆಗಳಿವೆ.
ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ, ಬಹುತೇಕ ಮೆಚ್ಚುಗೆಯೇ ವ್ಯಕ್ತ: ಆರಂಭಿಕವಾಗಿ ಸಿನಿಮಾಗೆ ಬಹುತೇಕ ಮೆಚ್ಚುಗೆಯೇ ವ್ಯಕ್ತವಾಗಿದೆ. ಎಕ್ಸ್ (ಟ್ವಿಟರ್) ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ''ಎಂಥಾ ಸಿನಿಮಾ ಸರ್! ಮೈಂಡ್ಬ್ಲೋಯಿಂಗ್! ರೇಟಿಂಗ್ 4.5/5'' ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವರು ಕಾಮೆಂಟ್ ಮಾಡಿ, 'ಎಂಥ ಅದ್ಭುತ ಚಿತ್ರ ಸರ್! ಆ್ಯಬ್ಸುಲೂಟ್ಲಿ ಬ್ರೀಥ್ಟೇಕಿಂಗ್! ಎ ಥ್ರಿಲ್ಲಿಂಗ್ ಮಾಸ್ಟರ್ಪೀಸ್!' ಎಂದು ಗುಣಗಾನ ಮಾಡಿದ್ದಾರೆ.
ಅಭಿಮಾನಿಯೋರ್ವರು ಸಿನಿಮಾವನ್ನು ಐಕಾನಿಕ್ ಎಂದಿದ್ದಾರೆ. ''ದಿ ಮೋಸ್ಟ್ ಐಕಾನಿಕ್ ಆ್ಯಂಡ್ ಇಂಟಲಿಜೆಂಟ್ ಶೋ ಆಫ್ ದ ಇಯರ್'' ಎಂದು ಪ್ರಶಂಸಿಸಿದ್ದಾರೆ.
ಇನ್ನೂ ನೀವು ಇಂಟಲಿಜೆಂಟ್ ಆಗಿದ್ದರೆ ನೀವು ಈಗಲೇ ಥಿಯೇಟರ್ನಿಂದ ಹೊರಡಿ ಎಂದು ಸ್ಕ್ರೀನ್ ಮೇಲೆ ಬರೆದಿರುವ ಫೋಟೋಗಳು ವ್ಯಾಪಕವಾಗಿ ವೈರಲ್ ಆಗಿದೆ. ಇದು ಸಿನಿಪ್ರಿಯರ ತಲೆಗೆ ಹುಳ ಬಿಟ್ಟಿದೆ.
ಈ ಸಿನಿಮಾ ನೋಡಿ ನಾವು ರಿವ್ಯೂವ್ ಮಾಡೋದಲ್ಲ, ಈ ಸಿನಿಮಾ ನಮ್ಮನ್ನು ನೋಡಿ ವಿಮರ್ಶೆ ಮಾಡುತ್ತೆ, ಯುಐ ಕೇವಲ ಒಂದು ಚಲನಚಿತ್ರವಲ್ಲ ಇದು ಮಾನವರ ಚಿಂತನೆಯಾಗಿದ್ದು, ಪ್ರತೀ ವಿಷಯಗಳನ್ನು ಡೀಕೋಡ್ ಮಾಡಲು ಉನ್ನತ ಮಟ್ಟದ ಯುನಿವರ್ಸಲ್ ಇಂಟೆಲಿಜೆನ್ಸ್ನ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾನ ಬಳಕೆದಾರರೋರ್ವರು ಬರೆದುಕೊಂಡಿದ್ದಾರೆ.