ಕರ್ನಾಟಕ

karnataka

ETV Bharat / entertainment

ಬಾಕ್ಸ್​​ ಆಫೀಸ್​ನಲ್ಲಿ ಯುಐ ಕಲೆಕ್ಷನ್​ ಅಬ್ಬರ! ಉಪ್ಪಿ ಸಿನಿಮಾ ಮೇಲೆ ಕಿಚ್ಚನ ಮ್ಯಾಕ್ಸ್​ ಎಫೆಕ್ಟ್​​​? - UI COLLECTION

ಯುಐ ಕಲೆಕ್ಷನ್​ ಉತ್ತಮವಾಗಿ ಸಾಗಿದ್ದು, ಕಿಚ್ಚನ ಮ್ಯಾಕ್ಸ್​ ಬಾಕ್ಸ್​ ಆಫೀಸ್​ನಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ.

UI, Max Poster
ಯುಐ, ಮ್ಯಾಕ್ಸ್ ಪೋಸ್ಟರ್ (Photo: Film posters)

By ETV Bharat Entertainment Team

Published : Dec 25, 2024, 2:00 PM IST

ಸುಮಾರು ಒಂಭತ್ತು ವರ್ಷಗಳ ಅಂತರದ ನಂತರ ಕನ್ನಡದ ಖ್ಯಾತ ನಟ-ನಿರ್ದೇಶಕ ಉಪೇಂದ್ರ ಡೈರೆಕ್ಷನ್​ ಮತ್ತು ನಟನೆಯ ಹೊಸ ಸಿನಿಮಾ ಕಳೆದ ವಾರ ತೆರೆಗಪ್ಪಳಿಸಿತು. ತಮ್ಮ ಹಿಂದಿನ ಕೆಲಸಗಳಂತೆಯೇ ಅನಿರೀಕ್ಷಿತ ಕಥಾಹಂದರದೊಂದಿಗೆ ಉಪ್ಪಿ ಮರಳಿದ್ದಾರೆ. ಬುದ್ಧಿವಂತ ನಿರ್ದೇಶಿಸಿದ್ದಲ್ಲದೇ ಮುಖ್ಯಪಾತ್ರಕ್ಕೆ ಜೀವ ತುಂಬಿರುವ 'ಯುಐ' ಸಿನಿಮಾ ತನ್ನ ಕಥಾಹಂದರ, ಕಥೆ ಹೇಳುವಿಕೆ ಮತ್ತು ನೂತನ ಪ್ರಯೋಗದಿಂದಾಗಿ ಸಖತ್​ ಸದ್ದು ಮಾಡಿದೆ. ವಿಭಿನ್ನ ಕಥೆಗಳುಳ್ಳ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಉಪೇಂದ್ರ ಎಂದಿನಂತೆ ಈ ಪ್ರಾಜೆಕ್ಟ್​ನಲ್ಲೂ ತಮ್ಮ ಸಿಗ್ನೇಚರ್ ಸ್ಟೈಲ್‌ಗೆ ಬದ್ಧರಾಗಿದ್ದಾರೆ. ನಿರೀಕ್ಷಿಸಿದಂತೆ 'ಯುಐ' ಪ್ರೇಕ್ಷಕರಿಗೆ ರೋಮಾಂಚನಕಾರಿ ಮತ್ತು ಅದ್ಭುತ ಸಿನಿಮೀಯ ಅನುಭವ ಒದಗಿಸುವಲ್ಲಿ ಯಶಸ್ಸು ಕಂಡಿದೆ.

'ಯುಐ'ಗೆ ಪ್ರೇಕ್ಷಕರ ಸಂಖ್ಯೆ ಇಳಿಕೆಯಾಗಿಲ್ಲ​​​: ಪುಷ್ಪ 2: ದಿ ರೂಲ್, ಮುಫಾಸಾ: ದಿ ಲಯನ್ ಕಿಂಗ್ ಮತ್ತು ವಿದುತಲೈ 2ನಂತಹ ಸಿನಿಮಾಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಮುಂದುವರಿಸಿವೆ. ಇಂದು ಅಭಿನಯ ಚಕ್ರವರ್ತಿ ಸುದೀಪ್​​ ಮುಖ್ಯಭೂಮಿಕೆಯ ಮ್ಯಾಕ್ಸ್​​, ಮತ್ತು ಬಾಲಿವುಡ್​ ಸೂಪರ್​ ಸ್ಟಾರ್​ ವರುಣ್​ ಧವನ್​, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್​ ನಟನೆಯ ಬೇಬಿ ಜಾನ್​ ಬಿಡುಗಡೆ ಆಗಿವೆ. ಈ ಎಲ್ಲಾ ಸಿನಿಮಾಗಳ ನಡುವೆ ಬುದ್ಧಿವಂತಹ ಯುಐ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಹುನಿರೀಕ್ಷಿತ ಚಿತ್ರಗಳ ಭಾರಿ ಸ್ಪರ್ಧೆಯ ಹೊರತಾಗಿಯೂ, ಯುಐ ಪ್ರೇಕ್ಷಕರ ಸಂಖ್ಯೆ ಇಳಿಕೆಯಾಗಿಲ್ಲ. ವಿಭಿನ್ನ ಸಿನಿಮಾದ ಬಾಕ್ಸ್​ ಆಫೀಸ್​ ಪ್ರಯಾಣ ಉತ್ತಮವಾಗಿದೆ.

ಯುಐ ಬಾಕ್ಸ್​ ಆಫೀಸ್​ ಕಲೆಕ್ಷನ್​: ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿರುವ 'ಯುಐ' ಸಿನಿಮಾದ ಒಟ್ಟು ಇಂಡಿಯಾ ನೆಟ್​​ ಕಲೆಕ್ಷನ್​​​ 23.33 ಕೋಟಿ ರೂಪಾಯಿ ಆಗಿದೆ​​. ಕಳೆದ ಶುಕ್ರವಾರ, ಡಿಸೆಂಬರ್​ 20ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ ಸಿನಿಮಾ 6.95 ಕೋಟಿ ರೂಪಾಯಿ ಕಲೆಕ್ಷನ್​​​​ನೊಂದಿಗೆ ತನ್ನ ಬಾಕ್ಸ್​ ಆಫೀಸ್​​​ ಪ್ರಯಾಣ ಪ್ರಾರಂಭಿಸಿತು. ನಂತರ, ತನ್ನ ಮೊದಲ ವಾರಾಂತ್ಯ ಶನಿವಾರದಂದು 5.6 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಮೊದಲ ಭಾನುವಾರದ ವ್ಯವಹಾರ 5.95 ಕೋಟಿ ರೂಪಾಯಿ. ನಂತರ, ಚಿತ್ರ ತನ್ನ ಮೊದಲ ಸೋಮವಾರದಂದು 2.3 ಕೋಟಿ ರೂಪಾಯಿ, ಕಳೆದ ದಿನ ಮಂಗಳವಾರ 1.99 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇಂದಿನ ಕಲೆಕ್ಷನ್​ ಪೂರ್ಣ ಮಾಹಿತಿ ಸಿಗಬೇಕಿದೆ. ಈ ಅಂಕಿಅಂಶ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​​ ಸ್ಯಾಕ್ನಿಲ್ಕ್ ವರದಿಯನ್ನು ಆಧರಿಸಿದ್ದು, ಸಿನಿಪ್ರಿಯರು ಚಿತ್ರತಂಡದಿಂದ ಮಾಹಿತಿ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ:ಸುದೀಪ್​​ 'ಮ್ಯಾಕ್ಸ್​​'ಗೆ ಮಿಶ್ರ ಪ್ರತಿಕ್ರಿಯೆ: ಮೊದಲ ದಿನದ ಕಲೆಕ್ಷನ್​​ ಎಷ್ಟಾಗಬಹುದು ಗೊತ್ತಾ?

ಉಪ್ಪಿ ಸಿನಿಮಾ ಮೇಲೆ ಕಿಚ್ಚನ 'ಮ್ಯಾಕ್ಸ್'​ ಎಫೆಕ್ಟ್​​​? ರಿಯಲ್​ ಸ್ಟಾರ್​ ಉಪ್ಪಿ ನಿರ್ದೇಶನದ ಯುಐ ತನ್ನ ಆರನೇ ದಿನದ ಪ್ರದರ್ಶನ ಮುಂದುವರಿಸಿದೆ. ಇಂದು ಅಭಿನಯ ಚಕ್ರವರ್ತಿ ಸುದೀಪ್​ ಅವರ ಬಹುನಿರೀಕ್ಷಿತ ಮ್ಯಾಕ್ಸ್​ ಸಿನಿಮಾ ಅದ್ಧೂರಿಯಾಗಿ ತೆರೆಕಂಡು ಸಖತ್​ ಸದ್ದು ಮಾಡುತ್ತಿದೆ. ಮ್ಯಾಕ್ಸ್​ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಬಹುತೇಕ ಮೆಚ್ಚುಗೆ ಪಡೆದುಕೊಂಡಿರುವ ಮ್ಯಾಕ್ಸ್,​ ಉಪ್ಪಿ ಸಿನಿಮಾ ಶೋಗಳ ಮೇಲೆ ಪ್ರಭಾವ ಬೀರಲಿದೆಯಾ ಎಂಬ ಚರ್ಚೆ ಶುರುವಾಗಿದೆ. ಬಾಕ್ಸ್​ ಆಫೀಸ್​​ ಫೈಟ್​ ಪಕ್ಕಾ ಅಂತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ:ಶಿವರಾಜ್​ಕುಮಾರ್​ಗೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ABOUT THE AUTHOR

...view details