ಸಿನಿಮಾ ಎಂಬ ಗ್ಲ್ಯಾಮರ್ ಲೋಕದಲ್ಲಿ ಶೈನ್ ಆಗಬೇಕೆನ್ನೋ ಕನಸು ಹಲವರದ್ದು. ಆದ್ರೆ ಚಿತ್ರರಂಗಕ್ಕೆ ಪ್ರವೇಶ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಕ್ಷೇತ್ರದಲ್ಲಿ ಸಾಧನೆಯ ಕುರಿತು ಆಲೋಚಿಸಿದಾಗ ಮೊದಲು ತಲೆಗೆ ಬರೋದು ಚಿತ್ರರಂಗದಲ್ಲಿ ತಮ್ಮ ಪರಿಚಿತರು ಯಾರಿದ್ದಾರೆ ಅನ್ನೋದು. ಸಹಾಯ ಸಿಕ್ಕರೂ, ಪರಿಶ್ರಮವಿದ್ದರೂ, ಎಲ್ಲರ ಬದುಕಲ್ಲಿ ಅದೃಷ್ಟ ಸಾಥ್ ಕೊಡೋದಿಲ್ಲ. ಮತ್ತೊಂದೆಡೆ, ನೆಪೋಟಿಸಂ ಎಂಬ ಸಮಸ್ಯೆಯೂ ಅಲ್ಲಿರುತ್ತದೆ.
ಇಲ್ಲೋರ್ವ ಪ್ರತಿಭೆಯ ತಂದೆ ಚಲನಚಿತ್ರೋದ್ಯಮದವರಾಗಿದ್ದರೂ, ಅವರಿಗೆ ಅವಕಾಶಗಳು ಅಷ್ಟು ಸುಲಭವಾಗಿ ಸಿಗಲಿಲ್ಲ. ತಮ್ಮ 14ನೇ ವಯಸ್ಸಿನಲ್ಲಿ ಹಿನ್ನೆಲೆ ನರ್ತಕನಾಗಿ ಕೆಲಸ ಮಾಡಿದ್ರು. 75 ರೂಪಾಯಿ ಸಂಭಾವನೆ ಪಡೆದಿದ್ರು. ಚಲನಚಿತ್ರಗಳನ್ನು ಪ್ರವೇಶಿಸಿದ ನಂತರವೂ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು. ಸಣ್ಣ ಪಾತ್ರಗಳೊಂದಿಗೆ ದೊಡ್ಡ ನಟನಾಗಬಹುದು ಮತ್ತು ನಿಮ್ಮನ್ನು ನೀವು ಸಾಬೀತುಪಡಿಸುವ ಮೂಲಕ ಉನ್ನತ ಮಟ್ಟಕ್ಕೆ ಏರಬಹುದು ಎಂಬುದನ್ನು ಈ ಪ್ರತಿಭೆ ಸಾಬೀತುಪಡಿಸಿದ್ದಾರೆ.
ಹೌದು, ನಾವೀಗ ಹೇಳ ಹೊರಟಿರುವುದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಗ್ಗೆ. ಈ ಹ್ಯಾಂಡ್ಸಂ ಹಂಕ್ ಬಗ್ಗೆ ತಿಳಿದಿಲ್ಲದವರು ಬಹುಶಃ ಯಾರೂ ಇಲ್ಲ. ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಚಿತ್ರ ಕಥೆಗಾರ ಮತ್ತು ನಿರ್ಮಾಪಕರು. ಆದಾಗ್ಯೂ, ಸಲ್ಮಾನ್‌ಗೆ ಸಿನಿಮಾ ಅವಕಾಶಗಳು ಸುಲಭವಾಗಿ ಸಿಗಲಿಲ್ಲ. ತಮ್ಮ 14ನೇ ವಯಸ್ಸಿನಲ್ಲಿ, ತಾಜ್ ಹೋಟೆಲ್‌ನಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಪ್ರದರ್ಶನ ನೀಡಿದ್ರು. ಅವರಿಗೆ 75 ರೂ. ಸಂಭಾವನೆ ಸಿಕ್ಕಿತ್ತು. ಅದಾದ ನಂತರ, 'ಬಿವಿ ಹೋ ತೋ ಐಸಿ' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಪೋಷಕ ಪಾತ್ರದಲ್ಲಿ ನಟಿಸಿದ್ರು.