ಮುಂಬೈ, ಮಹಾರಾಷ್ಟ್ರ: ಬಾಲಿವುಡ್‌ನ ಹ್ಯಾಂಡ್ಸಮ್ ನಟ ಶಾಹಿದ್ ಕಪೂರ್ ಫೆಬ್ರವರಿ 25 ರಂದು ತಮ್ಮ 43 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಸೋಮವಾರ ಅವರ ಪತ್ನಿ ಮೀರಾ ರಜಪೂತ್ ರೊಮ್ಯಾಂಟಿಕ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮೀರಾ ರಜಪೂತ್ ಅವರು ಶಾಹಿದ್ ಕಪೂರ್ ಜೊತೆಗಿನ ಸುಂದರವಾದ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದರೊಂದಿಗೆ ಪ್ರೀತಿ ತುಂಬಿದ ಬರಹವನ್ನು ಸಹ ಬರೆದಿದ್ದಾರೆ. ಶಾಹಿದ್‌ನನ್ನು ಸೂರ್ಯ-ಚಂದ್ರ ಎಂದು ಬಣ್ಣಿಸಿರುವ ಮೀರಾ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮೀರಾ ರಜಪೂತ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಶಾಹಿದ್ ಕಪೂರ್ ಅವರ ಹುಟ್ಟುಹಬ್ಬದ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮೀರಾ ಮೂರು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಮೊದಲನೆಯದು ಗಂಡ ಮತ್ತು ಹೆಂಡತಿ ನಗುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಎರಡನೇ ಮತ್ತು ಮೂರನೇ ಚಿತ್ರದಲ್ಲಿ ಸುಂದರ ಸಂಜೆಯ ಒಂದು ನೋಟವೊಂದನ್ನು ಮೀರಾ ತೋರಿಸಿದ್ದಾರೆ. ಅದರಲ್ಲಿನ ಒಂದು ಫೋಟೋದಲ್ಲಿ ಚಂದ್ರ ಮತ್ತು ಸೂರ್ಯ ಒಟ್ಟಿಗೆ ಇರುವುದನ್ನು ಕಾಣಬಹುದಾಗಿದೆ. ನನ್ನ ಚಂದ್ರ ಮತ್ತು ಸೂರ್ಯನಿಗೆ ಜನ್ಮದಿನದ ಶುಭಾಶಯಗಳು, ಸುಂದರವಾದ ಮೀನ ಸೂರ್ಯ ಮತ್ತು ಪೂರ್ಣ ಕನ್ಯಾರಾಶಿ ಚಂದ್ರ... ಈ ವಿಶ್ವವು ನಿಮ್ಮೊಂದಿಗೆ ಹೊಳೆಯುತ್ತದೆ ಎಂದು ಅವರು ಅಡಿ ಬರಹವಾಗಿ ಬರೆದಿದ್ದಾರೆ. ಇಲ್ಲಿ ಮೀರಾ ಅವರಿಬ್ಬರ ರಾಶಿಗಳ ಬಗ್ಗೆ ಕೂಡಾ ಹೇಳಿದ್ದಾರೆ.