ETV Bharat / entertainment

ನಾಳೆ 'ಯುಐ' ರಿಲೀಸ್​​: ಉಪ್ಪಿ ಸಿನಿಮಾ ಏಕೆ ನೋಡಬೇಕು? ಇಲ್ಲಿದೆ ಬಹುನಿರೀಕ್ಷಿತ ಚಿತ್ರದ ವಿಶೇಷತೆಗಳು - UPENDRA U I

ರಿಯಲ್​ ಸ್ಟಾರ್ ಉಪೇಂದ್ರ ಸಾರಥ್ಯದ ಬಹುನಿರೀಕ್ಷಿತ 'ಯು ಐ' ಚಿತ್ರ ನಾಳೆ ತೆರೆಕಾಣುತ್ತಿದ್ದು, ಸಿನಿಮಾದ ವಿಶೇಷತೆಗಳ ಬಗ್ಗೆ ತಿಳಿಯೋಣ..

Upendra U I film
ಉಪೇಂದ್ರ ಸಾರಥ್ಯದ ಯು ಐ ನಾಳೆ ರಿಲೀಸ್​ (Photo: ETV Bharat)
author img

By ETV Bharat Entertainment Team

Published : 3 hours ago

ದಕ್ಷಿಣ ಚಿತ್ರರಂಗದ 'ಬುದ್ಧಿವಂತ ನಟ-ನಿರ್ದೇಶಕ' ಖ್ಯಾತಿಯ ರಿಯಲ್​ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸಿನಿಮಾ 'ಯು ಐ' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಉಪ್ಪಿ ಸಾರಥ್ಯದ ವಿಭಿನ್ನ ಶೀರ್ಷಿಕೆಯ ಪ್ರಾಜೆಕ್ಟ್​​ ಶುಕ್ರವಾರ ಬೆಳಗ್ಗೆ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ.

9 ವರ್ಷಗಳ ಬಳಿಕ ಬರುತ್ತಿರುವ ಉಪ್ಪಿ ನಿರ್ದೇಶನದ ಸಿನಿಮಾ: ಉಪೇಂದ್ರ ನಿರ್ದೇಶನದ ಕೊನೆ ಚಿತ್ರ 'ಉಪ್ಪಿ 2'. 2015ರ ಆಗಸ್ಟ್​ 14ರಂದು ಚಿತ್ರ ತೆರೆಗಪ್ಪಳಿಸಿ, ಯಶಸ್ವಿಯಾಗಿತ್ತು. ಏಳೆಂಟು ವರ್ಷಗಳ ಬಳಿಕ 'ಯು ಐ' ಸಿನಿಮಾಗಾಗಿ ಉಪ್ಪಿ ಮತ್ತೊಮ್ಮೆ ಡೈರೆಕ್ಟರ್​​ ಕ್ಯಾಪ್​ ಧರಿಸಿದ್ರು. ಫೈನಲಿ 9 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನದ ಸಿನಿಮಾ ಬಿಡುಗಡೆಯಾಗುತ್ತಿದೆ. ರಿಯಲ್​ ಸ್ಟಾರ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ ಅಂದ್ರೆ ಸಾಮಾನ್ಯ ಸಿನಿಮಾವನ್ನೊಂತೂ ನಿರೀಕ್ಷಿಸೋಕಾಗಲ್ಲ. ಈವರೆಗೆ ಅವರ ನಿರ್ದೇಶನದಲ್ಲಿ ಬಂದಿರುವ ಸೂಪರ್​, ಉಪೇಂದ್ರ, ಎ, ಆಪರೇಷನ್​ ಅಂತ, ಓಂ, ಶ್​ ಸಿನಿಮಾಗಳು ವಿಭಿನ್ನ ಸಿನಿ ಅನುಭವವನ್ನು ಪ್ರೇಕ್ಷಕರಿಗೆ ಒದಗಿಸಿದ್ದವು. ಹಾಗಾಗಿ, ಯು ಐ ಕೂಡಾ ಸಖತ್ ಡಿಫ್ರೆಂಟ್​ ಸ್ಟೋರಿಯೊಂದಿಗೆ ಬರುತ್ತಿದೆ ಅನ್ನೋದು ಅಭಿಮಾನಿಗಳ ನಂಬಿಕೆ. ಸದ್ಯ ಅನಾವರಣಗೊಂಡಿರುವ ಸಾಂಗ್, ಪೋಸ್ಟರ್​, ಗ್ಲಿಂಪ್ಸ್​ ಕೂಡಾ ಅದನ್ನೇ ಸಾಬೀತುಪಡಿಸಿವೆ.

2,000ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ರಿಲೀಸ್​​​: ಪೋಸ್ಟರ್, ಹಾಡು, ವಾರ್ನರ್ ಮೂಲಕ ಸಖತ್​ ಸದ್ದು ಮಾಡಿರುವ 'ಯು ಐ' ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ 2,000ಕ್ಕೂ ಅಧಿಕ ಸ್ಕ್ರೀನ್​​ಗಳಲ್ಲಿ ಬಿಡುಗಡೆಯಾಗುತ್ತಿದೆ. ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಉಪೇಂದ್ರ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

24 ಗಂಟೆಗಳಲ್ಲಿ 12.54K+ ಟಿಕೆಟ್‌ ಮಾರಾಟ: ಇತ್ತೀಚೆಗೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಓಪನ್​ ಆಗಿದೆ. ಅಡ್ವಾನ್ಸ್​ ಟಿಕೆಟ್​ ವಿಷಯದಲ್ಲೂ ಯುಐ ಸಖತ್​ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಗೊಳಿಸುತ್ತಿರುವ ಕೆವಿಎನ್​ ಪ್ರೊಡಕ್ಷನ್​​ ಇತ್ತೀಚೆಗೆ ಪೋಸ್ಟ್ ಒಂದನ್ನು ಶೇರ್ ಮಾಡಿ, ಬುಕ್​ ಮೈ ಶೋನಲ್ಲಿ ಕೇವಲ 24 ಗಂಟೆಗಳಲ್ಲಿ 12.54K+ ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ ಎಂದು ತಿಳಿಸಿತ್ತು.

ಅತಿ ಹೆಚ್ಚು ಅಡ್ವಾನ್ಸ್​ ಟಿಕೆಟ್​ ಮಾರಾಟ ಮಾಡಿದ ಕನ್ನಡ ಸಿನಿಮಾ: ಕೆವಿಎನ್​ ಪ್ರೊಡಕ್ಷನ್​​ ಇಂದು ಒಂದು ಪವರ್​ಫುಲ್​ ಪೋಸ್ಟರ್ ಶೇರ್ ಮಾಡಿದ್ದು, ''ಪ್ರತಿ ಕ್ಷಣವೂ ಇತಿಹಾಸ ಬರೆಯುತ್ತಿದೆ. 2024ರಲ್ಲಿ ಅತಿ ಹೆಚ್ಚು ಮುಂಗಡ ಟಿಕೆಟ್‌ಗಳನ್ನು ಮಾರಾಟ ಮಾಡಿದ ಕನ್ನಡ ಸಿನಿಮಾ. ಬುಕ್​ ಮೈ ಶೋನಲ್ಲಿ 60+ ಟಿಕೆಟ್​ ಮಾರಾಟ, ಈ ಅಂಕಿ ಅಂಶ ಏರುತ್ತಿದೆ'' ಎಂದು ಬರೆದುಕೊಂಡಿದ್ದಾರೆ.

ಬಹು ಕ್ಯಾಮರಾಗಳ ಬಳಕೆ: ಸ್ಕ್ರೀನ್​ ಮೇಲೆ ಮ್ಯಾಜಿಕ್​ ಮಾಡೋ ಸಲುವಾಗಿ 'ಯು ಐ' ತಂಡ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಹೊಸ ಹೊಸ ತಂತ್ರಜ್ಞಾನ ಬಳಕೆ ಮಾಡಿ ಶೂಟಿಂಗ್ ಮಾಡಿದ್ದಾರೆ. ಒಂದೇ ಸೀನ್​​ಗಾಗಿ 200 ಕ್ಯಾಮರಾಗಳನ್ನು ಬಳಸಲಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು.

100 ಕೋಟಿ ಬಜೆಟ್: ಪ್ಯಾನ್​ ಇಂಡಿಯಾ ಸಿನಿಮಾಗೆ ಲಹರಿ ಸಂಸ್ಥೆಯ ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಬರೋಬ್ಬರಿ 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣಗೊಂಡಿದೆ ಎಂದು ವರದಿಯಾಗಿದೆ.

ಹಂಗೇರಿಯಲ್ಲಿ ಸಂಗೀತ ಸಂಯೋಜನೆ: ಆಗಸ್ಟ್​​ನಲ್ಲಿ 'ಸೌಂಡ್​ ಆಫ್​ ಯಐ' ಶೀರ್ಷಿಕೆಯಡಿ ವಿಡಿಯೋವೊಂದನ್ನು ಚಿತ್ರತಂಡ ರಿವೀಲ್​ ಮಾಡಿತ್ತು. ಚಿತ್ರತಂಡ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಹಲವು ದಿನಗಳ ಕಾಲ ಇದ್ದು, ಅಲ್ಲೇ ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿದೆ. ವಿದೇಶದಲ್ಲಿ ಸಂಗೀತ ಸಂಯೋಜನೆಗೊಂಡಿದೆ ಅಂದರೆ ನೀವೇ ಊಹಿಸಿ ಸಿನಿಮಾ ಯಾವ ಮಟ್ಟದಲ್ಲಿ ಮೂಡಿ ಬರಲಿದೆಯೆಂದು.

ಯುಐ ಟ್ರೋಲ್​ ಸಾಂಗ್​: 'ಯುಐ' ಉಪೇಂದ್ರ ಅವರ ವೃತ್ತಿಜೀವನದಲ್ಲೇ ವಿಶಿಷ್ಟ ಸಿನಿಮಾ ಆಗುತ್ತೆ ಅನ್ನೋದಿಕ್ಕೆ 'ಟ್ರೋಲ್ ಸಾಂಗ್' ಮತ್ತು 'ವಾರ್ನರ್' ಶೀರ್ಷಿಕೆಯ ಗ್ಲಿಂಪ್ಸೇ ಸಾಕ್ಷಿ. ಟ್ರೋಲಿಗರನ್ನೇ ರೋಸ್ಟ್ ಮಾಡುವಂತಹ 'ಟ್ರೋಲ್ ಸಾಂಗ್' ರಾಜ್ಯಾದ್ಯಂತ ವ್ಯಾಪಕವಾಗಿ ಸದ್ದು ಮಾಡಿದೆ. ರಾಜ್ಯವೇ ಖುಷಿಪಡುವ ಸುದ್ದಿ, ನಾನು ನಂದಿನಿ, ನಾ ಡ್ರೈವರಾ, ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್ ಹೀಗೆ ಹಲವು ಟ್ರೋಲ್‌ ವಿಷಯಗಳು ಈ ಹಾಡಿನಲ್ಲಿದ್ದು, ಹೀಗೂ ಹಾಡೊಂದು ಬರಬಹುದಾ ಎಂದು ಪ್ರೇಕ್ಷಕರು ಹುಬ್ಬೇರಿಸಿದ್ದರು.

'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ': 2 ನಿಮಿಷ 16 ಸೆಕೆಂಡುಗಳುಳ್ಳ ವಾರ್ನರ್​ ಶೀರ್ಷಿಕೆಯ ಗ್ಲಿಂಪ್ಸ್​ನಲ್ಲಿರೋದು 'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ' ಅನ್ನೋ ಒಂದೇ ಒಂದು ಡೈಲಾಗ್​​. 2040ರಲ್ಲಿ ಭಾರತ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡು ಕಥೆ ಹೆಣೆದಿದ್ದಾರೆ. ನಾವೆಲ್ಲರೂ ನಿಜವಾಗಿಯೂ ಬೇಕಾದ್ದನ್ನು ಬಿಟ್ಟು ಬೇಡದೇ ಇರುವು ವಿಷಯಗಳ ಹಿಂದೆ ಬಿದ್ದಿದ್ದೇವೆ. ಮುಂಬರುವ ಕೆಲ ವರ್ಷಗಳಲ್ಲಿ ಪ್ರಪಂಚ ವಿನಾಶದತ್ತ ಸಾಗಲಿದೆ. ಇನ್ನೂ ಕೂಡಾ ಜಾತಿ, ಧರ್ಮ, ಮೊಬೈಲ್ ಗುಂಗಿನಲ್ಲೇ ಇದ್ದೇವೆ ಎಂಬ ವಿಷಯಗಳನ್ನು ಇಲ್ಲಿ ಅಳವಡಿಸಲಾಗಿದೆ. ವಿಷುವಲ್​ ಮತ್ತು ಆ ಒಂದು ಡೈಲಾಗ್​ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

ಸೆನ್ಸಾರ್​ನಲ್ಲಿ ಪಾಸ್​: ಬಹುನನಿರೀಕ್ಷಿತ ಚಿತ್ರ ಸೆನ್ಸಾರ್​ನಲ್ಲೂ ಪಾಸಾಗಿದೆ. ಕಳೆದ ವಾರ ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಚಿತ್ರತಂಡ ಪೋಸ್ಟ್ ಶೇರ್​ ಮಾಡಿತ್ತು. ಪೋಸ್ಟರ್​​ನೊಂದಿಗೆ, ''ಸರ್ಟಿಫೈಡ್​​​ 𝐔/𝐀 - ಅನ್​​​ಸ್ಟಾಪಬಲ್​ ಆ್ಯಕ್ಷನ್​​, ಯು ಐ ದಿ ಮೂವಿ ಫೈರ್ ಅಂಡ್ ಫ್ಯೂರಿಯೊಂದಿಗೆ ಬಿಗ್ ಸ್ಕ್ರೀನ್​​ ಮೇಲೆ ಅದ್ಭುತ ಹಬ್ಬ ನೀಡಲು ಬರುತ್ತಿದೆ, ಡಿಸೆಂಬರ್​​ 20ಕ್ಕೆ ಸಿನಿಮಾ ಬಿಡುಗಡೆ'' ಎಂದು ಬರೆದುಕೊಂಡಿತ್ತು.

ಅಮೀರ್​ ಖಾನ್​ ಗುಣಗಾನ: ಬಾಲಿವುಡ್​​ನ ಮಿಸ್ಟರ್​ ಪರ್ಫೆಕ್ಷನಿಷ್ಟ್ ಖ್ಯಾತಿಯ ನಟ ಅಮೀರ್​ ಖಾನ್​ ಕೂಡಾ ಉಪೇಂದ್ರ ಅವರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ''ನಮಸ್ಕಾರ. ನಾನು ಉಪೇಂದ್ರರ ದೊಡ್ಡ ಅಭಿಮಾನಿ. ಇಂದು ಅವರೊಂದಿಗಿದ್ದೇನೆ. ಅವರ ಸಿನಿಮಾ ಡಿ. 20ರಂದು ಬಿಡುಗಡೆ ಆಗುತ್ತಿದೆ. ಗ್ಲಿಂಪ್ಸ್​ ಅದ್ಭುತವಾಗಿದೆ'' ಎಂದು ತಿಳಿಸಿದ್ದರು. ಈ ವೇಳೆ ಉಪೇಂದ್ರ ಜೊತೆಗಿದ್ದರು.

ಇದನ್ನೂ ಓದಿ: 'ಮಂಜಣ್ಣನಿಗೆ ಬೇಜಾರ್​ ಆದ್ರೆ ನಿಮಗೂ ಫೀಲ್​ ಆಗುತ್ತೆ': ಗೌತಮಿ ಬಗ್ಗೆ ಮೋಕ್ಷಿತಾ ಹೇಳಿಕೆ ಒಪ್ಪುತ್ತೀರಾ?

ನನ್ನ ಸ್ನೇಹಿತ ಉಪೇಂದ್ರ ಎಂದು ಉಲ್ಲೇಖಿಸಿ, 'ಉಪೇಂದ್ರ ನೀವು ಮಾಡಿದ ಟ್ರೇಲರ್ ಅದ್ಭುತ'. ಅನ್​ಬಿಲೀವೆಬಲ್​. ಯುಐ ಈ ಬಿಗ್ ಹಿಟ್​ ಆಗಲಿದೆ. ಹಿಂದಿ ಪ್ರೇಕ್ಷಕರು ಸಹ ನಿಮ್ಮ ಈ ಸಿನಿಮಾವನ್ನು ಪ್ರೀತಿಸಲಿದ್ದಾರೆ. ಗ್ಲಿಂಪ್ಸ್​ ವೀಕ್ಷಿಸಿದಾಗ ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಇದೊಂದು ಅಮೇಂಜಿಂಗ್​ ವಿಡಿಯೋ. ನಿಮಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಪ್ರೀ ರಿಲೀಸ್ ಈವೆಂಟ್: ಇತ್ತೀಚೆಗಷ್ಟೇ ನಡೆದ 'ಯುಐ' ಚಿತ್ರದ ಪ್ರೀ ರಿಲೀಸ್ ಸಮಾರಂಭಕ್ಕೆ ಸ್ಯಾಂಡಲ್​ವುಡ್​ ಸ್ಟಾರ್ಸ್ ಸಾಕ್ಷಿಯಾಗಿದ್ದರು. ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಈ ಈವೆಂಟ್​ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: 'ಎಲ್ಲರನ್ನೂ ಮಿಸ್​ ಮಾಡಿಕೊಳ್ಳುತ್ತೇನೆ, ಜ.26ರಂದು ಸಿಗೋಣ': ಶಿವರಾಜ್​ಕುಮಾರ್​

ಲಹರಿ ಫಿಲ್ಮ್ಸ್​​​ ಹಾಗೂ ವೀನಸ್ ಎಂಟರ್‌ ಪ್ರೈಸಸ್ ಲಾಂಛನದಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣವಿದೆ. ಹಾಗೇ, ತುಳಸಿರಾಮ ನಾಯ್ಡು (ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹೆಸರಾಂತ ಕೆ. ವಿ. ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.