ಕರ್ನಾಟಕ

karnataka

ETV Bharat / entertainment

ಸೈಮಾ ಪ್ರಶಸ್ತಿ: ಐಶ್ವರ್ಯಾ ರೈ ಬಚ್ಚನ್​ ಸೇರಿದಂತೆ ಸಂಪೂರ್ಣ ವಿಜೇತರ ಪಟ್ಟಿ ಇಲ್ಲಿದೆ - SIIMA 2024 Winners - SIIMA 2024 WINNERS

ಸೆಪ್ಟೆಂಬರ್ 14-15 ರಂದು ದುಬೈನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್​ನ್ಯಾಷನಲ್ ಮೂವೀ ಅವಾರ್ಡ್ಸ್ ಈವೆಂಟ್​ನಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.

SIIMA 2024: Full List of Winners
ಸೈಮಾ ಪ್ರಶಸ್ತಿ ವಿಜೇತರ ಪಟ್ಟಿ (Photo: ANI/ ETV Bharat)

By ETV Bharat Karnataka Team

Published : Sep 16, 2024, 3:17 PM IST

ಹೈದರಾಬಾದ್: ಶನಿವಾರ ಮತ್ತು ಭಾನುವಾರದಂದು (ಸೆಪ್ಟೆಂಬರ್ 14-15) ದುಬೈನಲ್ಲಿ ಸೌತ್ ಇಂಡಿಯನ್ ಇಂಟರ್​ನ್ಯಾಷನಲ್ ಮೂವೀ ಅವಾರ್ಡ್ಸ್ (SIIMA) 2024 ಬಹಳ ಅದ್ಧೂರಿಯಾಗಿ ಜರುಗಿತು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಅಸಾಧಾರಣ ಪ್ರತಿಭೆಗಳನ್ನು ಈ ವೇದಿಕೆಯಲ್ಲಿ ಗೌರವಿಸಲಾಯಿತು. ಶನಿವಾರ ತೆಲುಗು ಮತ್ತು ಕನ್ನಡ ಸಿನಿಮಾಗಳ ಸಂಭ್ರಮ ನಂತರ ಭಾನುವಾರದಂದು ತಮಿಳು ಮತ್ತು ಮಲಯಾಳಂ ಚಿತ್ರರಂಗದ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎರಡು ದಿನಗಳ ಈವೆಂಟ್​​​ನಲ್ಲಿ ದಕ್ಷಿಣ ಭಾರತ ತಾರೆಯರು ಒಂದೇ ಸೂರಿನಡಿ ಕಾಣಿಸಿಕೊಂಡರು.

SIIMA 2024 - ವಿಜೇತರ ಸಂಪೂರ್ಣ ಪಟ್ಟಿ (ತಮಿಳು ಚಿತ್ರರಂಗ):

  • ಅತ್ಯುತ್ತಮ ಚಲನಚಿತ್ರ: ಜೈಲರ್ (ಸನ್ ಪಿಕ್ಚರ್ಸ್, ನೆಲ್ಸನ್ ದಿಲೀಪ್‌ಕುಮಾರ್)
  • ಅತ್ಯುತ್ತಮ ನಿರ್ದೇಶಕ: ನೆಲ್ಸನ್ ದಿಲೀಪ್‌ಕುಮಾರ್ (ಜೈಲರ್)
  • ಅತ್ಯುತ್ತಮ ನಟಿ: ನಯನತಾರಾ (ಅನ್ನಪೂರಣಿ)
  • ಅತ್ಯುತ್ತಮ ನಟ: ವಿಕ್ರಮ್ (ಪೊನ್ನಿಯಿನ್ ಸೆಲ್ವನ್: II)
  • ಅತ್ಯುತ್ತಮ ಚೊಚ್ಚಲ ನಿರ್ದೇಶಕ: ವಿಘ್ನೇಶ್ ರಾಜ (ಪೋರ್ ತೊಝಿಲ್)
  • ಅತ್ಯುತ್ತಮ ಚೊಚ್ಚಲ ನಟಿ: ಪ್ರೀತಿ ಅಂಜು ಅಸ್ರಾನಿ (ಅಯೋತಿ)
  • ಅತ್ಯುತ್ತಮ ಚೊಚ್ಚಲ ನಟ: ಹ್ರಿಧು ಹರೂನ್ (ಥಗ್ಸ್)
  • ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್): ಅರುಣ್ ಕುಮಾರ್ ಸೋನೈಮುತ್ತು (ಚಿತ್ತಾ)
  • ಅತ್ಯುತ್ತಮ ನಟಿ (ಕ್ರಿಟಿಕ್ಸ್): ಐಶ್ವರ್ಯಾ ರೈ ಬಚ್ಚನ್ (ಪೊನ್ನಿಯಿನ್ ಸೆಲ್ವನ್: II)
  • ಅತ್ಯುತ್ತಮ ನಟ (ಕ್ರಿಟಿಕ್ಸ್): ಶಿವಕಾರ್ತಿಕೇಯನ್ (ಮಾವೀರನ್)
  • ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಸರಿತಾ (ಮಾವೀರನ್)
  • ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ವಸಂತ್ ರವಿ (ಜೈಲರ್)
  • ಅತ್ಯುತ್ತಮ ಖಳನಾಯಕ: ಅರ್ಜುನ್ (ಲಿಯೋ)
  • ಅತ್ಯುತ್ತಮ ಛಾಯಾಗ್ರಾಹಕ: ತೇನಿ ಈಶ್ವರ್ (ಮಾಮಣ್ಣನ್)
  • ಅತ್ಯುತ್ತಮ ಗೀತೆರಚನೆಕಾರ: ವಿಘ್ನೇಶ್ ಶಿವನ್ (ಜೈಲರ್‌ನ ರಥಮಾರೆ)
  • ಅತ್ಯುತ್ತಮ ಹಿನ್ನೆಲೆ ಗಾಯಕ: ಸೀನ್ ರೋಲ್ಡನ್ (ಗುಡ್ ನೈಟ್‌ ಸಿನಿಮಾದ ನಾನ್ ಗಾಳಿ)
  • ಅತ್ಯುತ್ತಮ ಹಾಸ್ಯ ನಟ: ಯೋಗಿ ಬಾಬು (ಜೈಲರ್)
  • ರೈಸಿಂಗ್ ಸ್ಟಾರ್: ಸಂದೀಪ್ ಕಿಶನ್
  • ವರ್ಷದ ಎಕ್ಸ್​​ಟ್ರಾಡಿನರಿ ಪರ್ಫಾಮರ್​​: ಎಸ್‌ಜೆ ಸೂರ್ಯ
  • ಭರವಸೆಯ ನಟ: ಕವಿನ್, ದಾದಾ
  • ವರ್ಷದ ಉದಯೋನ್ಮುಖ ನಿರ್ಮಾಪಕ: ತಿಟ್ಟಕುಡಿ ಕಣ್ಣನ್ ರವಿ, ರಾವಣ ಕೊಟ್ಟಂ.

ಇದನ್ನೂ ಓದಿ:ಸೈಮಾ ಅವಾರ್ಡ್​ 2024: ಸ್ಯಾಂಡಲ್​ವುಡ್​ಗೆ ಸಾಲು ಸಾಲು ಪ್ರಶಸ್ತಿ - SIIMA 2024

SIIMA 2024 - ವಿಜೇತರ ಸಂಪೂರ್ಣ ಪಟ್ಟಿ (ಮಲಯಾಳಂ ಚಿತ್ರರಂಗ):

  • ಅತ್ಯುತ್ತಮ ಚಿತ್ರ: ನನ್ಪಕಲ್ ನೆರತು ಮಾಯಕ್ಕಂ
  • ಅತ್ಯುತ್ತಮ ನಿರ್ದೇಶಕ: ಜೂಡ್ ಆಂಥೋನಿ ಜೋಸೆಫ್ (2018 ಚಿತ್ರ)
  • ಅತ್ಯುತ್ತಮ ನಟಿ: ಅನಸ್ವರ ರಾಜನ್ (ನೆರು)
  • ಅತ್ಯುತ್ತಮ ನಟ: ಟೊವಿನೋ ಥಾಮಸ್ (2018)
  • ಅತ್ಯುತ್ತಮ ಚೊಚ್ಚಲ ನಿರ್ದೇಶಕ: ರೋಹಿತ್ ಎಂಜಿ ಕೃಷ್ಣನ್ (ಇರಟ್ಟ)
  • ಅತ್ಯುತ್ತಮ ಚೊಚ್ಚಲ ನಟಿ: ಅಂಜನಾ ಜಯಪ್ರಕಾಶ್ (ಪಚುವುಮ್ ಅತ್​ಬುತ ವಿಳಕ್ಕುಂ)
  • ಅತ್ಯುತ್ತಮ ಚೊಚ್ಚಲ ನಟ: ಸಿಜು ಸನ್ನಿ (ರೋಮಾಂಚಮ್)
  • ಅತ್ಯುತ್ತಮ ನಟ (ಕ್ರಿಟಿಕ್ಸ್): ಜೋಜು ಜಾರ್ಜ್ (ಇರಟ್ಟ)
  • ಅತ್ಯುತ್ತಮ ಖಳನಟ: ವಿಷ್ಣು ಅಗಸ್ತ್ಯ (ಆರ್​ಡಿಎಕ್ಸ್​​)
  • ಅತ್ಯುತ್ತಮ ಛಾಯಾಗ್ರಾಹಕ: ಅಖಿಲ್ ಜಾರ್ಜ್
  • ಅತ್ಯುತ್ತಮ ಸಂಗೀತ ನಿರ್ದೇಶಕ: ವಿಷ್ಣು ವಿಜಯ್ (ಸುಲೈಖಾ ಮಂಜಿಲ್)
  • ಅತ್ಯುತ್ತಮ ಗೀತರಚನೆಕಾರ: ಮನು ಮಂಜಿತ್, ನೀಲಾ ನಿಲವೆ (ಆರ್​​ಡಿಎಕ್ಸ್)
  • ಅತ್ಯುತ್ತಮ ಹಿನ್ನೆಲೆ ಗಾಯಕಿ (ಮಹಿಳೆ): ಆನಿ ಅಮಿ
  • ಅತ್ಯುತ್ತಮ ಹಿನ್ನೆಲೆ ಗಾಯಕ: ಕೆಎಸ್ ಹರಿಶಂಕರ್ (2018 ಚಿತ್ರದ ವೆಣ್ಮೇಘಂ)
  • ಹಾಸ್ಯ ಪಾತ್ರದಲ್ಲಿ ಅತ್ಯುತ್ತಮ ನಟ: ಅರ್ಜುನ್ ಅಶೋಕನ್ (ರೋಮಾಂಚಮ್)
  • ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಮಂಜು ಪಿಳ್ಳೈ (ಫಾಲಿಮಿ)
  • ಅತ್ಯುತ್ತಮ ಪೋಷಕ ನಟ: ಹಕ್ಕಿಮ್ ಶಾ (ಪ್ರಣಯ ವಿಲಾಸಂ)
  • ಅತ್ಯುತ್ತಮ ಚೊಚ್ಚಲ ನಿರ್ಮಾಪಕ: ಜಾನ್ ಪೌಲ್ ಜಾರ್ಜ್.

ಇದನ್ನೂ ಓದಿ:ದೇವಸ್ಥಾನದಲ್ಲಿ ಹಸೆಮಣೆಯೇರಿದ ನಟಿ ಅದಿತಿ ರಾವ್ ಹೈದರಿ - ನಟ ಸಿದ್ಧಾರ್ಥ್: ಮದುವೆಯ ಸುಂದರ ಫೋಟೋಗಳಿಲ್ಲಿವೆ - Siddharth Aditi Rao Hydari Marriage

ABOUT THE AUTHOR

...view details