ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರೋ ಅಭಿನೇತ್ರಿ. ಆಗಾಗ್ಗೆ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಮಾತುಕತೆ ನಡೆಸುತ್ತಾರೆ. ಫ್ಯಾನ್ಸ್ಗಾಗಿಯೇ ಒಂದಿಷ್ಟು ಸಮಯ ಮೀಸಲಿಡುತ್ತಾರೆ. ಇದೀಗ ಫ್ಯಾನ್ಸ್ ಕ್ಲಬ್ ಶೇರ್ ಮಾಡಿರೋ ಪೋಸ್ಟ್ಗೆ ನಟಿ ಪ್ರತಿಕ್ರಿಯಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ರಶ್ಮಿಕಾ ಅವರ ಭಾವಿ ಪತಿ ಹೊಂದಿರಬೇಕಾದ ಗುಣಗಳ ಕುರಿತಾದ ಬರಹವನ್ನು ಹೊಂದಿರುವ ಪೋಸ್ಟ್ ಒಂದು ಫ್ಯಾನ್ಸ್ ಕ್ಷಬ್ನಿಂದ ಶೇರ್ ಆಗಿದೆ. ಇದರಲ್ಲಿ "VD"ಗೆ ಹೋಲುವ ಗುಣಗಳಿರಬೇಕು ಎಂದು ಪ್ರಸ್ತಾಪಿಸಿದ್ದಾರೆ. ವಿಡಿ ಎಂದರೆ 'ಅತ್ಯಂತ ಡೇರಿಂಗ್' ಎಂದು ಸಹ ವಿವರಿಸಲಾಗಿದೆ. ಅದಾಗ್ಯೂ, ಸೋಷಿಯಲ್ ಮೀಡಿಯಾ ಬಳಕೆದಾರರು "ವಿಡಿ" ಎಂದರೆ "ವೆರಿ ಡೇರಿಂಗ್" ಅಲ್ಲ, ಬದಲಾಗಿ ವಿಜಯ್ ದೇವರಕೊಂಡ ಎಂದು ಹೇಳುತ್ತಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ''ವಿಡಿ'' ಎಂದು ಜನಪ್ರಿಯರಾಗಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗಿನ ಡೇಟಿಂಗ್ ವದಂತಿ ನಿಮಗೆ ತಿಳಿದಿರುವ ವಿಚಾರವೇ. ಸದ್ಯ ನಟಿಯ ರಿಯಾಕ್ಷನ್ ವದಂತಿಗೆ ತುಪ್ಪ ಸುರಿದಂತಿದೆ.
ರಶ್ಮಿಕಾ ಫ್ಯಾನ್ಸ್ ಕ್ಲಬ್ ಪೋಸ್ಟ್ನಲ್ಲಿ, ರಶ್ಮಿಕಾ ಮಂದಣ್ಣ ಭಾವಿ ಪತಿ ಹೊಂದಿರಬೇಕಾದ ಗುಣಗಳ್ಯಾವುವು? ಎಂದು ಪ್ರಶ್ನೆ ಕೇಳಲಾಗಿದ್ದು, ಕೆಳಭಾಗದಲ್ಲಿ ಕೆಲ ಉತ್ತರಗಳನ್ನೂ ಬರೆಯಲಾಗಿದೆ. 'ಇವರು ಭಾರತದ ನ್ಯಾಷನಲ್ ಕ್ರಶ್. ಹಾಗಾಗಿ ಅವರ ಪತಿ ಬಹಳ ವಿಶೇಷವಾಗಿರಬೇಕು. ಅವರನ್ನು ಮದುವೆಯಾಗುವವರು ''VD''ಯಂತೆಯೇ ಇರಬೇಕು. ನಮ್ಮ ಮಾತಿನ ಅರ್ಥ, ಅವರನ್ನು ರಕ್ಷಿಸುವಷ್ಟು 'ವೆರಿ ಡೇರಿಂಗ್'. ನಾವು ಅವರನ್ನು ಕ್ವೀನ್ ಎಂದು ಕರೆಯುತ್ತೇವೆ. ಅವರನ್ನು ಕೈ ಹಿಡಿಯುವವರು ರಾಜನಂತೆ ಇರಬೇಕು' ಎಂದು ಬರೆಯಲಾಗಿದೆ.
ಈ ಪೋಸ್ಟ್ಗೆ ಅಭಿಮಾನಿಗಳು, ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಸ್ವತಃ ರಶ್ಮಿಕಾ ಮಂದಣ್ಣ ಕೂಡ ರಿಯಾಕ್ಟ್ ಮಾಡಿದ್ದಾರೆ. ಫ್ಯಾನ್ಸ್ ಕ್ಲಬ್ನಿಂದ ಶೇರ್ ಆದ ಪೋಸ್ಟ್ಗೆ, ಸ್ವತಃ ರಶ್ಮಿಕಾ ಅವರೇ "That's Very true" (ಅದು ನಿಜ) ಎಂದು ಕಾಮೆಂಟ್ ಮಾಡಿದ್ದಾರೆ. ಇದು ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ವದಂತಿಗಳನ್ನು ಹೆಚ್ಚಿಸಿದೆ.