ಕರ್ನಾಟಕ

karnataka

ETV Bharat / entertainment

ಅಬ್ಬಬ್ಬಾ, ಮೊದಲ ದಿನವೇ 126 ಕೋಟಿ ರೂ. ಕಲೆಕ್ಷನ್​​​ ಮಾಡಿದ ದಳಪತಿ ವಿಜಯ್ ಅಭಿನಯದ 'ಗೋಟ್' - Greatest of All Time Collection - GREATEST OF ALL TIME COLLECTION

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (ಗೋಟ್) ತಮ್ಮ ಮೊದಲ ದಿನದ ಕಲೆಕ್ಷನ್​ ಮೂಲಕ ಎಲ್ಲರ ಹುಬ್ಬೇರಿಸಿದೆ. ವಿಶ್ವಾದ್ಯಂತ 100 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿರುವ ಈ ಚಿತ್ರದ ಕಲೆಕ್ಷನ್ ಭಾರತದಲ್ಲಿ​​​ 44 ಕೋಟಿ ರೂ. ಆಗಿದೆ.

GOAT Box Office Collection
ಗೋಟ್ ಬಾಕ್ಸ್​ ಆಫೀಸ್​ ಕಲೆಕ್ಷನ್​ (Film poster)

By ETV Bharat Karnataka Team

Published : Sep 6, 2024, 6:50 PM IST

ಹೈದರಾಬಾದ್: ಸೌತ್​ ಸೂಪರ್​​ ಸ್ಟಾರ್​ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (ಗೋಟ್) ನಿನ್ನೆಯಷ್ಟೇ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ತೆರೆ ಕಂಡ ಮೊದಲ ದಿನ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿಯೆಬ್ಬಿಸಿದೆ. ಬಾಕ್ಸ್​ ಆಫೀಸ್​ ವಿಚಾರದಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ವೆಂಕಟ್ ಪ್ರಭು ನಿರ್ದೇಶನದ ಈ ಸೈನ್ಸ್ ಫಿಕ್ಷನ್​​ ಆ್ಯಕ್ಷನ್​ ಸಿನಿಮಾ ತೆರೆಕಂಡ ಮೊದಲ ದಿನವೇ ಜಾಗತಿಕವಾಗಿ 100 ಕೋಟಿ ರೂಪಾಯಿಗೂ ಅಧಿಕ ಸಂಪಾದನೆ ಮಾಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಭಾರತದಲ್ಲಿ ಈ ಚಿತ್ರದ ಕಲೆಕ್ಷನ್​​​ 44 ಕೋಟಿ ರೂ. ಆಗಿದೆ.

'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಹಿಂದಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ ಎಜಿಎಸ್​​ ಎಂಟರ್​ಟೈನ್ಮೆಂಟ್​​ ಇಂದು ತನ್ನ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ಸಿನಿಮಾದ ಪೋಸ್ಟರ್ ಜೊತೆಗೆ ಕಲೆಕ್ಷನ್​ ಮಾಹಿತಿಯನ್ನೂ ಹಂಚಿಕೊಂಡಿದೆ. ''ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್) ತೆರೆಗಪ್ಪಳಿಸಿದ ದಿನ ವಿಶ್ವಾದ್ಯಂತ 126.32 ಕೋಟಿ ರೂ.ಗಳನ್ನು ಸಂಪಾದಿಸಿದೆ'' ಎಂದು ಬಹಿರಂಗಪಡಿಸಿದೆ. ಇದು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ತೆರೆಕಂಡ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸಿನಿಮಾ ಪ್ರೊಡಕ್ಷನ್ ಹೌಸ್ ಇಂದು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಹೆಸರಾಂತ ನಟ ವಿಜಯ್ ಅವರು ಸಖತ್​ ಪವರ್​ಫುಲ್​ ಪೋಸ್​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳುತ್ತಾ ಪ್ರೊಡಕ್ಷನ್ ಹೌಸ್, "G.O.A.T ಬಾಕ್ಸ್ ಆಫೀಸ್‌ನಲ್ಲಿ ತನ್ನ ಮೊದಲ ದಿನ ವಿಶ್ವಾದ್ಯಂತ 126.32 ಕೋಟಿಗಳಷ್ಟು ಸಂಗ್ರಹಿಸಿ ಉನ್ನತ ಸ್ಥಾನದಲ್ಲಿ ನಿಂತಿದೆ. ಗೋಟ್​ ಬ್ಲಾಕ್​ಬಸ್ಟರ್, ಮ್ಯಾಜಿಕಲ್" ಎಂದು ಬರೆದುಕೊಂಡಿದೆ. ಗೋಟ್​ ಬ್ಲಾಕ್​ಬಸ್ಟರ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ, ಅಭಿಮಾನಿಗಳು ಮತ್ತು ಚಿತ್ರರಂಗದವರು ಸಿನಿಮಾದ ದಾಖಲೆಯ ಆರಂಭವನ್ನು ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ:ಕೇರಳದ ಹೇಮಾ ಸಮಿತಿಯಂತೆ ಕನ್ನಡದಲ್ಲೂ ಕಮಿಟಿ ರಚನೆಗೆ ಮನವಿ: ನಟ ರಕ್ಷಿತ್​​ ಶೆಟ್ಟಿಗೆ ವಿಷಯ ಗೊತ್ತಿಲ್ವೇ? - Rakshit Shetty

ಕಲ್ಪತಿ ಎಸ್ ಸುರೇಶ್, ಕಲ್ಪತಿ ಎಸ್ ಗಣೇಶ್ ಮತ್ತು ಕಲ್ಪತಿ ಅಘೋರಂ ನಿರ್ಮಾಣದ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾ. ಇದು ವಿಜಯ್ ವೃತ್ತಿಜೀವನದಲ್ಲಿ ದೊಡ್ಡ ಮತ್ತು ಪ್ರಮುಖ ಸಿನಿಮಾವಾಗಿದೆ. ಸಾಹಸ ದೃಶ್ಯಗಳು ದೊಡ್ಡ ಮಟ್ಟದಲ್ಲಿದೆ. ವರದಿಗಳ ಪ್ರಕಾರ ವೆಂಕಟ್ ಪ್ರಭು ನಿರ್ದೇಶನ ಈ ಚಿತ್ರವನ್ನು 400 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾಗಿದ್ದು, ಈ ವರ್ಷದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಗೋಟ್​ ಕೂಡಾ ಒಂದಾಗಿದೆ.

ಇದನ್ನೂ ಓದಿ:'ಸಂಜು ವೆಡ್ಸ್ ಗೀತಾ' ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಡಿಸಿಪಿ ಹೇಳಿದ್ದಿಷ್ಟು! - Director Nagashekar Car Accident

ಚಿತ್ರದಲ್ಲಿ ಪ್ರಶಾಂತ್, ಪ್ರಭುದೇವ, ಮೋಹನ್, ಮೀನಾಕ್ಷಿ ಚೌಧರಿ, ಯೋಗಿ ಬಾಬು, ಅಜ್ಮಲ್ ಅಮೀರ್, ಜಯರಾಮ್, ವೈಭವ್, ಸ್ನೇಹಾ, ಲೈಲಾ, ಪ್ರೇಮ್ಗಿ ಅಮರೇನ್, ಯುಗೇಂದ್ರನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details