ಕರ್ನಾಟಕ

karnataka

ETV Bharat / entertainment

ಚಿತ್ರೀಕರಣದ ವೇಳೆ ಅಪಘಾತಕ್ಕೊಳಗಾಗಿದ್ದ ನಟ ಅಜಿತ್ ಕಾರು: ವಿಡಿಯೋ ವೈರಲ್ - Ajith Car Accident - AJITH CAR ACCIDENT

Ajith Car Accident: 2023ರ ನವೆಂಬರ್​ನಲ್ಲಾದ ಶೂಟಿಂಗ್ ವೇಳೆ ತಮಿಳು ನಟ ಅಜಿತ್ ಕಾರು ಅಪಘಾತಕ್ಕೊಳಗಾಗಿತ್ತು.

ಅಜಿತ್ ಕಾರು ಅಪಘಾತ
Ajith Car Accident

By ETV Bharat Karnataka Team

Published : Apr 5, 2024, 9:45 AM IST

Updated : Apr 5, 2024, 10:03 AM IST

ತಮಿಳು ನಟ ಅಜಿತ್ ಕಳೆದ ವರ್ಷ ಅಝೆರ್‌ಬೈಜಾನ್‌ನಲ್ಲಿ ತಮ್ಮ ಮುಂದಿನ ಚಿತ್ರ 'ವಿದಾ ಮುಯಾರ್ಚಿ'ಯ (Vidaa Muyarchi) ಆ್ಯಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣದ ವೇಳೆ ಅಪಘಾತಕ್ಕೊಳಗಾಗಿದ್ದರು. ಅಜಿತ್ ಅವರ ಪ್ರಚಾರಕರಾದ ಸುರೇಶ್ ಚಂದ್ರ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಪಘಾತದ ಮೂರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 2023ರ ನವೆಂಬರ್​ನಲ್ಲಾದ ಶೂಟಿಂಗ್ ವೇಳೆ ನಡೆದ ಆಘಾತಕಾರಿ ಘಟನೆಯಿದು. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯಕ್ಕೊಳಗಾಗಿದ್ದಾರೆ.

ವೈರಲ್​ ವಿಡಿಯೋಗಳಲ್ಲಿ, ಅಜಿತ್ ಅವರ ಸಹ - ನಟನಾಗಿ 'ಬಿಗ್ ಬಾಸ್ ತಮಿಳು' ಖ್ಯಾತಿಯ ಆರವ್ ಕಿಜಾರ್‌ (Aarav Kizar) ಕೂಡ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯದಲ್ಲಿ ಅವರಿದ್ದ ಕಾರು ಪಲ್ಟಿಯಾಗಿದೆ. ಕಾರು ಅಪಘಾತ ಚಿತ್ರದ ಒಂದು ದೃಶ್ಯದಂತೆ ತೋರಿದ್ದು, ನೈಜವಾಗಿ ಮೂಡಿಬರುವಂತೆ ಚಿತ್ರೀಕರಿಸಲಾಗಿದೆ. ಡ್ರೋನ್‌ ಮೂಲಕ ಸೆರೆಹಿಡಿಯಲಾದ ಕಾರು ಪಲ್ಟಿ ಸೀನ್​ ಅನ್ನು ವಿವಿಧ ಆಯಾಮಗಳಲ್ಲಿ ತೋರಿಸಲಾಗಿದೆ. ಈ ದೃಶ್ಯ ನಟನೆ ಮೇಲಿನ ಕಲಾವಿದರ ಸಮರ್ಪಣೆಯನ್ನು ಸಾಬೀತುಪಡಿಸಿದೆ.

ಶೇರ್ ಮಾಡಲಾಗಿರುವ ಮೂರು ವಿಡಿಯೋಗಳ ಪೈಕಿ ಒಂದರಲ್ಲಿ, ಕಾರಿನ ಒಳಭಾಗವನ್ನು ತೋರಿಸಲಾಗಿದೆ. ಮುಂಬದಿಯ ಒಂದು ಸೀಟ್​ನಲ್ಲಿ ಆರವ್ ಕೈಗಳನ್ನು ಕಟ್ಟಿಹಾಕಿ ಕೂರಿಸಲಾಗಿದೆ. ಅಜಿತ್ ಕಾರು ಚಾಲನೆ ಮಾಡುತ್ತಿದ್ದಾರೆ. ದೃಶ್ಯದಲ್ಲಿ ವಾಹನ ಹಠಾತ್ ಅಪಘಾತಕ್ಕೊಳಗಾದಂತೆ ತೋರಿದ್ದು, ಕ್ಯಾಮರಾ ಕೆಳಗೆ ಬಿದ್ದಿದೆ. ಕಾರು ಪಲ್ಟಿಯಾಗುತ್ತಿದ್ದಂತೆ ಅಜಿತ್ ಮತ್ತು ಆರವ್ ಇಬ್ಬರೂ ತಮ್ಮನ್ನು ರಕ್ಷಿಸಿಕೊಳ್ಳಲು ಹೆಣಗಾಡಿದ್ದಾರೆ. ಉಳಿದ ಎರಡು ವಿಡಿಯೋಗಳಲ್ಲಿ, ಕಾರು ಪಲ್ಟಿಯಾದೊಡನೆ ಚಿತ್ರತಂಡದವರು ಓಡೋಡಿ ಬಂದು ಈ ಇಬ್ಬರನ್ನೂ ರಕ್ಷಿಸುತ್ತಿರುವ ದೃಶ್ಯಗಳನ್ನು ಕಾಣಬಹುದು.

ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ನಲ್ಲಿ ವಿಡಿಯೋಗಳನ್ನು ಹಂಚಿಕೊಂಡ ಸುರೇಶ್ ಚಂದ್ರ, "ವಿದಾ ಮುಯಾರ್ಚಿ ಚಿತ್ರೀಕರಣ. ನವೆಂಬರ್ 2023" ಎಂದು ಬರೆದುಕೊಂಡಿದ್ದಾರೆ. ಇದೇ ವಿಡಿಯೋವನ್ನು ಮರುಹಂಚಿಕೊಂಡ ಆರವ್, ''ಫೈನಲಿ, ವಿಡಿಯೋ ಹೊರಬಿದ್ದಿದೆ. ನಾವಿಬ್ಬರೂ ಕೂದಲೆಳೆ ಅಂತರದಲ್ಲಿ ಪಾರಾದೆವು. ಎಂದೆಂದಿಗೂ ದೇವರಿಗೆ ಕೃತಜ್ಞರಾಗಿರುತ್ತೇವೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಷರತ್ತುಬದ್ಧ ಜಾಮೀನು - Sonu Srinivas Gowda

ಈ ವರ್ಷದ ಜನವರಿಯಲ್ಲಿ 'ವಿದಾ ಮುಯಾರ್ಚಿ'ಯ ಅಝೆರ್‌ಬೈಜಾನ್‌ ಶೆಡ್ಯೂಲ್​​ ಪೂರ್ಣಗೊಳಿಸಿರುವುದಾಗಿ ಅಜಿತ್ ಕುಮಾರ್ ತಿಳಿಸಿದ್ದಾರೆ. ಅಜಿತ್ ಜೊತೆ ತ್ರಿಶಾ, ಅರ್ಜುನ್ ಸರ್ಜಾ ಸೇರಿದಂತೆ ಇತರ ಪಾತ್ರವರ್ಗಗಳು ಅಝೆರ್‌ಬೈಜಾನ್‌ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ:ಹ್ಯಾಪಿ ಬರ್ತ್​ಡೇ ರಶ್ಮಿಕಾ: 'ಕಿರಿಕ್​ ಪಾರ್ಟಿ' ಬೆಡಗಿಯ ಸಿನಿಪಯಣ - HBD Rashmika Mandanna

ಲೈಕಾ ಪ್ರೊಡಕ್ಷನ್ಸ್‌ ಅಡಿ ಸುಬಾಸ್ಕರನ್ ಅಲ್ಲಿರಾಜ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಗಿಝಾ ತಿರುಮೇನಿ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತವಿರಲಿದೆ. ನೀರವ್ ಶಾ ಕ್ಯಾಮರಾ ಹಿಡಿದಿದ್ದಾರೆ. ಎನ್‌ಬಿ ಶ್ರೀಕಾಂತ್ ಸಂಕಲನ ನಿರ್ವಹಿಸಲಿದ್ದು, ಈ ವರ್ಷವೇ ಸಿನಿಮಾ ಬಿಡುಗಡೆ ಆಗಲಿದೆ.

Last Updated : Apr 5, 2024, 10:03 AM IST

ABOUT THE AUTHOR

...view details