ಹೈದರಾಬಾದ್: ವಿಶೇಷ ಪಾತ್ರಗಳ ಮೂಲಕವೇ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ತಮ್ಮ ಬಹುಕಾಲದ ಗೆಳೆಯ ಮಥಿಯಾಸ್ ಬೋ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಹೆಚ್ಚು ಸದ್ದಿಲ್ಲದೇ ಕೇವಲ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಉದಯಪುರದಲ್ಲಿ ಮದುವೆ ಆಗಿದ್ದಾರೆ. ಈ ಖಾಸಗಿ ವಿವಾಹ ಸಮಾರಂಭದಲ್ಲಿ ಪಾವೈಲ್ ಗುಲಾಟಿ ಮತ್ತು ಅನುರಾಗ್ ಕಶ್ಯಪ್ ಭಾಗಿಯಾಗಿದ್ದರು.
ತಾಪ್ಸಿ- ಮಧಿಯಾಸ್ ವಿವಾಹ ಮಾರ್ಚ್ 23ರಂದೇ ನಡೆದಿದೆ. ಮಾರ್ಚ್ 20 ರಿಂದಲೇ ಈ ಮದುವೆ ಪೂರ್ವ ಸಮಾರಂಭದ ಸಿದ್ದತೆ ಆರಂಭವಾಗಿದ್ದವು. ಕುಟುಂಬಸ್ಥರು ಮತ್ತು ಸ್ನೇಹಿತರು ಬುಧವಾರದಿಂದಲೇ ಮದುವೆ ಸಿದ್ದತೆಯಲ್ಲಿ ಭಾಗಿಯಾಗಿದ್ದರು ಎಂದು ನ್ಯೂಸ್ ವೈರ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉದಯಪುರದಲ್ಲಿ ಖಾಸಗಿ ಸಮಾರಂಭ ನಡೆದಿದೆ. ಈ ಜೋಡಿಗಳು ತಮ್ಮ ಈ ವಿಶೇಷ ದಿನಕ್ಕೆ ಮಾಧ್ಯಮದ ಯಾವುದೇ ಪ್ರಚಾರ ಬೇಡ ಎಂದು ನಿರ್ಧರಿಸಿದ್ದರು. ಈ ಮದುವೆ ವಿಚಾರ ಕುರಿತು ಇಬ್ಬರೂ ಖಾಸಗಿತನ ಬಯಸಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ, ಈ ಮದುವೆ ಕಾರ್ಯಕ್ರಮದಲ್ಲಿ ಕೆಲವೇ ಬಾಲಿವುಡ್ ಸೂಪರ್ಸ್ಟಾರ್ಗಳು ಭಾಗಿಯಾಗಿದ್ದರು. ಮೂಲಗಳ ಪ್ರಕಾರ, ತಾಪ್ಸಿ ಅವರ 'ತಪ್ಪಡ್' ಚಿತ್ರದ ಸಹ ನಟಿ 'ಪಾವೈಲ್ ಗುಲಾಟಿ' ಮದುವೆ ಸಮಾರಂಭದಲ್ಲಿ ಹಾಜರಿದ್ದರು. ತಾಪ್ಸಿ ಜೊತೆಗೆ 'ಮನ್ಮಾರ್ಜಿಯನ್' ಮತ್ತು 'ದುಬಾರಾ' ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಅನುರಾಗ್ ಕಶ್ಯಪ್ ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.