ETV Bharat / entertainment

ಸೈಫ್ ಪ್ರಕರಣ: ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ; ಕರೀನಾ ನಿವಾಸದ ಭದ್ರತೆ ಹೆಚ್ಚಳ - SAIF ALI KHAN CASE

ನಟ ಸೈಫ್ ಅಲಿ ಖಾನ್​ಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್​ ಕಸ್ಟಡಿಯಲ್ಲಿದ್ದ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Saif Ali Khan
ನಟ ಸೈಫ್ ಅಲಿ ಖಾನ್ (Photo: ANI)
author img

By ETV Bharat Entertainment Team

Published : Jan 29, 2025, 7:12 PM IST

ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ನನ್ನು ಇಂದು ಮುಂಬೈ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖೆ ಪೂರ್ಣಗೊಂಡಿದೆ ಎಂದು ತೋರುತ್ತಿದೆ, ಹೆಚ್ಚಿನ ಕಸ್ಟಡಿಗೆ ಯಾವುದೇ ಹೊಸ ಕಾರಣಗಳಿಲ್ಲ ಎಂದು ಹೇಳಿ ಆರೋಪಿಯ ಪೊಲೀಸ್​ ಕಸ್ಟಡಿಯನ್ನು ಎರಡು ದಿನಗಳ ಕಾಲ ವಿಸ್ತರಿಸುವಂತೆ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜೊತೆಗೆ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಳೆದ ಭಾನುವಾರ ಮುಂಬೈನ ಥಾಣೆ ನಗರದಲ್ಲಿ ಅರೆಸ್ಟ್ ಆದ ಆರೋಪಿಯು ವಿಜಯ್ ದಾಸ್ ಎಂದು ತನ್ನ ಗುರುತನ್ನು ಬದಲಾಯಿಸಿಕೊಂಡು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂದು ವರದಿಯಾಗಿದೆ. ಜನವರಿ 16ರ ಮುಂಜಾನೆ ಬಾಂದ್ರಾದ ಅಪಾರ್ಟ್​​ಮೆಂಟ್​ ಒಂದರಲ್ಲಿರುವ ಸೈಫ್ ಅಲಿ ಖಾನ್ ಅವರ 12ನೇ ಮಹಡಿಯ ನಿವಾಸಕ್ಕೆ ನುಗ್ಗಿದ್ದ ಆರೋಪಿ ನಟನಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

54ರ ಹರೆಯದ ನಟನನ್ನು ಆ ಕೂಡಲೇ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು. ಐದು ದಿನಗಳ ನಂತರ ನಟನನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಮಾಧ್ಯಮಗೋಷ್ಟಿ ನಡೆಸಿ, ಬಂಧಿತ ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಪವಿತ್ರ ಸ್ನಾನದ ನಕಲಿ ಫೋಟೋ: ಹರಿಬಿಟ್ಟವರ ವಿರುದ್ಧ ದೂರು ದಾಖಲು

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ತಮ್ಮ ನಿವಾಸವಾದ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಸತ್ಗುರು ಶರಣ್‌ ಅಪಾರ್ಟ್​​ಮೆಂಟ್​ನ 12ನೇ ಮಹಡಿಯಲ್ಲಿರುವ ತಮ್ಮ ಮನೆಯ ಬಾಲ್ಕನಿಯಲ್ಲಿ ವೈರಿಂಗ್‌ನಿಂದ ತಡೆ ನಿರ್ಮಿಸುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್​ ಆಗುತ್ತಿವೆ.

ಇದನ್ನೂ ಓದಿ: ಭೋಪಾಲ್‌ನಲ್ಲಿ 15,000 ಕೋಟಿ ಮೌಲ್ಯದ ಆಸ್ತಿ ಕಳೆದುಕೊಳ್ತಾರಾ ಸೈಫ್ ಅಲಿ ಖಾನ್?

ನಟಿ ಕರೀನಾ ಕಪೂರ್​ ಖಾನ್​ ಅವರ ತಂಡ ಇತ್ತೀಚೆಗೆ ಮಾಧ್ಯಮ ಮಿತ್ರರನ್ನು ಭೇಟಿಯಾಗಿ, ದಂಪತಿಯ ಗೌಪ್ಯತೆಯನ್ನು ಗೌರವಿಸುವಂತೆ ಪಾಪರಾಜಿಗಳಲ್ಲಿ ಕೇಳಿಕೊಂಡಿದೆ. ಛಾಯಾಗ್ರಾಹಕರು ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರ ಫೋಟೋಗಳನ್ನು ಗಾರ್ಡನ್​, ಬರ್ತ್​ಡೇ ಪಾರ್ಟಿ ಅಥವಾ ಸ್ಪೋರ್ಟ್ ಸೆಂಟರ್​ಗಳಂತಹ ಖಾಸಗಿ ಸ್ಥಳಗಳಲ್ಲಿ ಫೋಟೋ ವಿಡಿಯೋಗಳನ್ನು ಕ್ಲಿಕ್ ಮಾಡದಂತೆ ತಂಡ ವಿನಂತಿಸಿದೆ. ಅಧಿಕೃತ ಕಾರ್ಯಕ್ರಮಗಳಲ್ಲಿ ಕುಟುಂಬದ ಫೋಟೋಗಳನ್ನು ಸೆರೆಹಿಡಿಯಲು ಮಾಧ್ಯಮಗಳಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.