ಕರ್ನಾಟಕ

karnataka

ETV Bharat / entertainment

'ನಾನು ಉಪೇಂದ್ರರ ದೊಡ್ಡ ಅಭಿಮಾನಿ': ಬಾಲಿವುಡ್​ ಮಿಸ್ಟರ್​ ಪರ್ಫೆಕ್ಷನಿಸ್ಟ್ ಅಮೀರ್​ ಖಾನ್​​

ಹಿಂದಿ ಚಿತ್ರರಂಗದ ಖ್ಯಾತ ನಟ ಅಮೀರ್​ ಖಾನ್​ ಸೌತ್​ ಸೂಪರ್ ಸ್ಟಾರ್​​ ಉಪೇಂದ್ರ ಅವರ 'ಯು ಐ - ವಾರ್ನರ್​' ಗ್ಲಿಂಪ್ಸ್​​ ಗುಣಗಾನ ಮಾಡಿ, ಸಿನಿಮಾ ಯಶಸ್ಸಿಗೆ ಹಾರೈಸಿದ್ದಾರೆ.

Aamir Khan wishes Upendra
ಅಮೀರ್​ ಖಾನ್​, ಉಪೇಂದ್ರ (Photo: ANI, ETV Bharat)

By ETV Bharat Entertainment Team

Published : 6 hours ago

'ಮಿಸ್ಟರ್​ ಪರ್ಫೆಕ್ಷನಿಸ್ಟ್ ಆಫ್ ಬಾಲಿವುಡ್' ಖ್ಯಾತಿಯ ಅಮೀರ್​ ಖಾನ್​ ಕನ್ನಡ ಚಿತ್ರರಂಗದ 'ಬುದ್ಧಿವಂತ' ನಟ - ನಿರ್ದೇಶಕ ಖ್ಯಾತಿಯ ಉಪೇಂದ್ರ ಅವರನ್ನು ಹಾಡಿ ಹೊಗಳಿದ್ದಾರೆ. ರಿಯಲ್​ ಸ್ಟಾರ್​ ನಟಿಸಿ, ನಿರ್ದೇಶಿಸಿರೋ 2024ರ ಬಹುನಿರೀಕ್ಷಿತ ಸಿನಿಮಾ 'ಯು ಐ' ಬಿಡುಗಡೆ ಹೊಸ್ತಿಲಿನಲ್ಲಿದ್ದು, ಪ್ರಚಾರ ಶುರುವಾಗಿದೆ. ಸಿನಿಮಾ ರಿಲೀಸ್​​​ಗೆ ಇನ್ನೊಂದು ವಾರವಷ್ಟೇ ಬಾಕಿ ಇರುವ ಹೊತ್ತಲ್ಲಿ ಬಾಲಿವುಡ್​ ಸೂಪರ್​ ಸ್ಟಾರ್ ಅಮೀರ್​ ಖಾನ್​ ಅವರ ಸಾಥ್​ ಸಿಕ್ಕಿದೆ. ಹಿರಿಯ ಪ್ರತಿಭಾನ್ವಿತ ನಟ 'ಯು ಐ - ವಾರ್ನರ್​' ಗ್ಲಿಂಪ್ಸ್​​ಗೆ ಕ್ಲೀನ್​ ಬೋಲ್ಡ್​ ಆಗಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಿಸ್ಟರ್​ ಪರ್ಫೆಕ್ಷನಿಸ್ಟ್ ಅಮೀರ್​ ಖಾನ್​ ಹೇಳಿದ್ದಿಷ್ಟು: ಪದ್ಮಶ್ರೀ, ಪದ್ಮಭೂಷಣದಂತಹ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅತ್ಯಂತ ಜನಪ್ರಿಯ ನಟ ಅಮೀರ್​ ಖಾನ್​ ಮಾತನಾಡಿ, ''ಎಲ್ಲರಿಗೂ ನಮಸ್ಕಾರ. ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ ಆಗಿದ್ದು ಇಂದು ಅವರೊಂದಿಗಿದ್ದೇನೆ. ಅವರ ಸಿನಿಮಾ ಇದೇ ಡಿಸೆಂಬರ್​ 20ರಂದು ಬಿಡುಗಡೆ ಆಗುತ್ತಿದೆ. ಗ್ಲಿಂಪ್ಸ್​ ಅದ್ಭುತವಾಗಿದೆ'' ಎಂದು ತಿಳಿಸಿದ್ದಾರೆ. ನಂತರ ಇದೇ ವಿಡಿಯೋದಲ್ಲಿ ನನ್ನ ಸ್ನೇಹಿತ ಉಪೇಂದ್ರ ಎಂದು ಉಲ್ಲೇಖಿಸಿ, ರಿಯಲ್​ ಸ್ಟಾರ್​​ನನ್ನು ಪರಿಚಯಿಸಿದ್ದಾರೆ. 'ಉಪೇಂದ್ರ ನೀವು ಮಾಡಿದ ಟ್ರೇಲರ್ ಅದ್ಭುತ' ಎಂದು ತಿಳಿಸಿದ್ದಾರೆ. ಅನ್​ಬಿಲೀವೆಬಲ್​, ಈ ಸಿನಿಮಾ ದೊಡ್ಡ ಮಟ್ಟಿನ ಯಶಸ್ಸು ಕಾಣಲಿದೆ. ಹಿಂದಿ ಪ್ರೇಕ್ಷಕರು ಸಹ ಈ ಸಿನಿಮಾವನ್ನು ಪ್ರೀತಿಸಲಿದ್ದಾರೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಟ್ರೇಲರ್​ ನೋಡಿದಾಗ ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಇದೊಂದು ಅಮೇಂಜಿಂಗ್​ ಟ್ರೇಲರ್​. ನಿಮಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಬಾಲಿವುಡ್​ ಮಿಸ್ಟರ್​ ಪರ್ಫೆಕ್ಷನಿಸ್ಟ್ ಕನ್ನಡ ಸಿನಿಮಾಗೆ ಹಾರೈಸಿದ್ದಾರೆ.

ಈ ವಿಡಿಯೋ ಸಂದೇಶವನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡ ನಾಯಕ ನಟ ಉಪೇಂದ್ರ, ''ಆತ್ಮೀಯ ಅಮೀರ್ ಸರ್, ನಿಮ್ಮನ್ನು ಭೇಟಿಯಾಗಿ ಯುಐ ದಿ ವಾರ್ನರ್ ಸಿನಿಮಾಗೆ ನಿಮ್ಮ ಆಶೀರ್ವಾದ ಪಡೆಯೋ ಕನಸು ನನಸಾದ ಕ್ಷಣವಿದು. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ' ಎಂದ 'U I' ಸೆನ್ಸಾರ್​ನಲ್ಲಿ ಪಾಸ್​: ಪರೀಕ್ಷೆಗೆ ಸಜ್ಜಾದ ಬುದ್ಧಿವಂತ, ಕಿಚ್ಚ

ಸೆನ್ಸಾರ್​ನಲ್ಲಿ ಪಾಸ್​: ಬಹುನಿರೀಕ್ಷಿತ ಸಿನಿಮಾ ಇತ್ತೀಚೆಗಷ್ಟೇ ಸೆನ್ಸಾರ್​ನಲ್ಲೂ ಪಾಸ್​​ ಆಗಿದೆ. ಕೆವಿಎನ್​ ಪ್ರೊಡಕ್ಷನ್​​ ತನ್ನ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ನಾಯಕ ನಟನ ಪವರ್​ಫುಲ್​ ಪೋಸ್ಟರ್​​ ಅನಾವರಾಣಗೊಳಿಸಿ U/A ಪ್ರಮಾಣ ಪತ್ರವನ್ನು ಪಡೆದುಕೊಂಡಿರುವ ವಿಚಾರವನ್ನು ಹಂಚಿಕೊಂಡಿದೆ.

ಇದನ್ನೂ ಓದಿ:ಬಿಗ್​ ಬಾಸ್​ನಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ: ಕಾರಣ ಪಾಸಿಟಿವಿಟಿ ಗೌತಮಿ.. ನಿಮ್ಮ ಅಭಿಪ್ರಾಯವೇನು?

ಡಿ.20ಕ್ಕೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ:ಇದು 100 ಕೋಟಿ ರೂಪಾಯಿಯ ಬಿಗ್​ ಬಜೆಟ್​​ ಸಿನಿಮಾ ಎಂದು ವರದಿಗಳಾಗಿವೆ. ಉಪೇಂದ್ರ ಅವರ ಜೊತೆ ರೀಷ್ಮಾ ನಾಣಯ್ಯ, ಸಾಧುಕೋಕಿಲ, ಆರ್ಮುಗ ರವಿಶಂಕರ್ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಇರುವ ಸಿನಿಮಾವನ್ನು ಕೆ.ಪಿ ಶ್ರೀಕಾಂತ್ ಹಾಗೂ ನವೀನ್ ಮನೋಹರ್ ನಿರ್ಮಿಸಿದ್ದು, ಚಿತ್ರ ಬಹುಭಾಷೆಗಳಲ್ಲಿ ಡಿಸೆಂಬರ್ 20ಕ್ಕೆ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

ABOUT THE AUTHOR

...view details