ಕರ್ನಾಟಕ

karnataka

ETV Bharat / entertainment

ಪ್ರಿಯಾಮಣಿ, ಸನ್ನಿ ಲಿಯೋನ್ ಅಭಿನಯದ ಕೊಟೇಶನ್ ಗ್ಯಾಂಗ್​ ಟ್ರೇಲರ್ ರಿಲೀಸ್ - Quotation Gang Trailer - QUOTATION GANG TRAILER

ಕಾಲಿವುಡ್​ನಲ್ಲಿ ನಿರ್ಮಾಣವಾಗುತ್ತಿರುವ 'ಕೊಟೇಶನ್ ಗ್ಯಾಂಗ್' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.

Priyamani and  Sunny Leone
ಪ್ರಿಯಾಮಣಿ, ಸನ್ನಿ ಲಿಯೋನ್ (ANI)

By ETV Bharat Karnataka Team

Published : Jun 29, 2024, 6:47 AM IST

ಪ್ರಿಯಾಮಣಿ ಮತ್ತು ಸನ್ನಿ ಲಿಯೋನ್ ಬಗ್ಗೆ ಪ್ರೇಕ್ಷಕರಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಪ್ರಿಯಾಮಣಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಛಾಪು ಮೂಡಿಸಲು ಮುಂದಾಗಿದ್ದರೆ, ಸನ್ನಿ ಲಿಯೋನ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಹವಾ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಇವರಿಬ್ಬರೂ ಒಟ್ಟಿಗೆ ನಟಿಸಿರುವ ಸಿನಿಮಾ 'ಕೊಟೇಶನ್ ಗ್ಯಾಂಗ್'.

ಕಾಲಿವುಡ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಅನೌನ್ಸ್​​ಮೆಂಟ್, ಪಾತ್ರಗಳ ರಿವೀಲ್ ಜೊತೆಗೆ ಪೋಸ್ಟರ್​​ಗಳು ಅನಾವರಣಗೊಂಡಿತ್ತು. ಆದರೆ ನಂತರ ಯಾವುದೇ ಅಪ್​ಡೇಟ್ಸ್ ಇರಲಿಲ್ಲ. ಬಹಳ ದಿನಗಳ ನಂತರವೀಗ ಟ್ರೇಲರ್ ಬಿಡುಗಡೆಯಾಗಿದೆ. ಜಾಕಿ ಶ್ರಾಫ್, ಪ್ರಿಯಾಮಣಿ, ಸನ್ನಿ ಲಿಯೋನ್ ಮತ್ತು ಸಾರಾ ಅರ್ಜುನ್ ಈ ಚಿತ್ರದಲ್ಲಿದ್ದಾರೆ. ಹಳ್ಳಿಗಾಡಿನ ನೋಟದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಇಡೀ ಚಿತ್ರ ಗ್ಯಾಂಗ್ ವಾರ್ ಹಿನ್ನೆಲೆಯಲ್ಲಿ ಸಾಗಲಿದೆ. ಸುಫಾರಿ ಹತ್ಯೆ ಮಾಡುವ ತಂಡದಲ್ಲಿ ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ ಕೂಡ ಇದ್ದಾರೆ. ಅವರೆಲ್ಲರೂ ಹಣಕ್ಕಾಗಿ ಕೊಲೆ ಮಾಡುತ್ತಾರೆ. ದೊಡ್ಡ ದರೋಡೆಕೋರನನ್ನು ಕೊಂದ ನಂತರ ಅವರ ಜೀವನವು ಹೇಗೆ ತಿರುವು ಪಡೆಯಿತು ಎಂಬುದೇ ಈ ಚಿತ್ರದ ಕಥೆ.

ಇದನ್ನೂ ಓದಿ:'ಚೌಕಿದಾರ್' ಪೃಥ್ವಿ ಅಂಬಾರ್​ಗೆ ಜೋಡಿಯಾದ ದೊಡ್ಮನೆ ಚೆಲುವೆ ಧನ್ಯಾ ರಾಮ್​ಕುಮಾರ್ - Dhanya Ramkumar chowkidar movie

ಪ್ರಿಯಾಮಣಿ ಮತ್ತು ಸನ್ನಿ ಲಿಯೋನ್ ಕೊಲೆಗಾರರಾಗಿ ಭಯಾನಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳ್ಳಿತೆರೆಯಲ್ಲಿ ಗ್ಲ್ಯಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಈ ಚೆಲುವೆಯರು ವಿಭಿನ್ನ ನೋಟದಲ್ಲಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಚಿತ್ರ ಮುಂದಿನ ತಿಂಗಳು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿವೇಕ್ ಕುಮಾರ್ ಕಣ್ಣನ್ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದಾರೆ. ವಿವೇಶ್ ಕುಮಾರ್ ಕಣ್ಣನ್ ಜೊತೆಗೆ ಗಾಯತ್ರಿ ಸುರೇಶ್ ಸೇರಿ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡ್ರಮ್ಸ್ ಶಿವಮಣಿ ಸಂಗೀತ ಸಂಯೋಜಿಸಿದ್ದಾರೆ. ವೆಂಕಟರಮಣನ್ ಸಂಕಲನಕಾರರಾಗಿ ಚಿತ್ರದ ಭಾಗವಾಗಿದ್ದಾರೆ. ಸನ್ನಿ ಲಿಯೋನ್ ಹಾಗೂ ಪ್ರಿಯಾಮಣಿ ಹಲವು ಪ್ರಾಜೆಕ್ಟ್​ಗಳನ್ನು ಹೊಂದಿದ್ದಾರೆ. ಸದ್ಯ ಈ ಕೊಟೇಶನ್ ಗ್ಯಾಂಗ್ ಮೇಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಡಿಎಂಕೆ ಸರ್ಕಾರದ ವಿರುದ್ಧ ದಳಪತಿ ವಿಜಯ್​ ವಾಗ್ದಾಳಿ.. ಯಾವ ಕಾರಣಕ್ಕೆ ಟೀಕೆ ಗೊತ್ತಾ? - Vijay Slams DMK govt

ABOUT THE AUTHOR

...view details