ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್' ತೆರೆಕಂಡು ಇಂದಿಗೆ ಒಂದು ವಾರವಾಗಲಿದೆ. ಕಳೆದ ಬುಧವಾರ ತೆರೆಕಂಡ ಚಿತ್ರ ವಾರದೊಳಗೆ 30 ಕೋಟಿ ರೂಪಾಯಿ ದಾಟುವಲ್ಲಿ ಯಶಸ್ವಿಯಾಗಿದೆ. ಸಿನಿಪ್ರಿಯರಿಂದ ಬಹುತೇಕ ಮೆಚ್ಚುಗೆಯನ್ನೇ ಗಳಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ತನ್ನ ಮೊದಲ ದಿನ ಚಿತ್ರ 2.50 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
ಮ್ಯಾಕ್ಸ್ ಬಾಕ್ಸ್ ಆಫೀಸ್ ಕಲೆಕ್ಷನ್ ಡೇ 6: ವಿಜಯ್ ಕಾರ್ತಿಕೇಯ ನಿರ್ದೇಶನದ 'ಮ್ಯಾಕ್ಸ್' ಡಿಸೆಂಬರ್ 25ರಂದು ತೆರೆಗಪ್ಪಳಿಸಿತು. ಕ್ರಿಸ್ಮಸ್ ರಜಾದಿನವನ್ನು ಸದುಪಯೋಗಪಡಿಸಿಕೊಂಡ ಚಿತ್ರ ತನ್ನ ಮೊದಲ ದಿನ ಬರೋಬ್ಬರಿ 8.7 ಕೋಟಿ ರೂಪಾಯಿ ಕಲೆಕ್ಷನ್ ಮಾಡೋ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಅದ್ಧೂರಿ ಸ್ವಾಗತ ಸ್ವೀಕರಿಸಿದ್ದ ಸಿನಿಮಾ ತನ್ನ ಎರಡನೇ ದಿನ 3.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ:ದರ್ಶನ್ಗೂ ನಂಗೂ ಯಾವುದೇ ಸಮಸ್ಯೆಯಿಲ್ಲ: 'ಬಾಸಿಸಮ್ ಕೇಕ್' ವಿವಾದದ ಬಗ್ಗೆ ಸುದೀಪ್ ಸ್ಪಷ್ಟನೆ
ಶುಕ್ರವಾರದಂದು ಸಿನಿಮಾದ ಗಳಿಕೆ ಏರಿಕೆ ಕಂಡಿತು. ಹೌದು, ತನ್ನ ಮೂರನೇ ದಿನ 4.7 ಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು. ವಾರದ ದಿನದ ಗಳಿಕೆಯಲ್ಲಿ ಕೊಂಚ ಏರಿಳಿತ ಕಂಡುಬಂತಾದರೂ, ವಾರಾಂತ್ಯದಲ್ಲಿ ಕಲೆಕ್ಷನ್ ಅತ್ಯುತ್ತಮವಾಗಿತ್ತು. ಹೌದು, ಚಿತ್ರ ತನ್ನ ನಾಲ್ಕನೇ ದಿನ, ಮೊದಲ ಶನಿವಾರದಂದು 4.75 ಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು. ಭಾನುವಾರ ಮತ್ತಷ್ಟು ಏರಿಕೆ ಕಂಡ ಗಳಿಕೆ, 5.65 ಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು. ಫೈನಲಿ ಚಿತ್ರ ತನ್ನ ಮೊದಲ ಸೋಮವಾರದಂದು 2.50 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ತನ್ನ 6 ದಿನಗಳಲ್ಲಿ 30.15 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
ದಿನ | ಕಲೆಕ್ಷನ್ |
ಮೊದಲ ದಿನ (ಬುಧವಾರ) | 8.7 ಕೋಟಿ ರೂಪಾಯಿ. |
ಎರಡನೇ ದಿನ (ಗುರುವಾರ) | 3.85 ಕೋಟಿ ರೂಪಾಯಿ. |
ಮೂರನೇ ದಿನ (ಶುಕ್ರವಾರ) | 4.7 ಕೋಟಿ ರೂಪಾಯಿ. |
ನಾಲ್ಕನೇ ದಿನ (ಶನಿವಾರ) | 4.75 ಕೋಟಿ ರೂಪಾಯಿ. |
ಐದನೇ ದಿನ (ಭಾನುವಾರ) | 5.65 ಕೋಟಿ ರೂಪಾಯಿ. |
ಆರನೇ ದಿನ (ಸೋಮವಾರ) | 2.50 ಕೋಟಿ ರೂಪಾಯಿ. |
ಒಟ್ಟು | 30.15 ಕೋಟಿ ರೂಪಾಯಿ. |