ಕರ್ನಾಟಕ

karnataka

ETV Bharat / entertainment

'ಸ್ತ್ರೀ 2' ನಂಬರ್ ಒನ್​ ಹಿಂದಿ ಚಿತ್ರ: ಶಾರುಖ್​ ಜವಾನ್​​, ರಣ್​​ಬೀರ್​ ಅನಿಮಲ್​ ದಾಖಲೆ ಉಡೀಸ್​​ - Stree 2 Box Office Record - STREE 2 BOX OFFICE RECORD

Stree 2 Box Office Record: ಐದು ವಾರಗಳಲ್ಲಿ 560 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ 'ಸ್ತ್ರೀ 2' ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾರರ್-ಕಾಮಿಡಿ ಚಿತ್ರ ಶಾರುಖ್ ಖಾನ್ ಅವರ ಜವಾನ್ ಅನ್ನು ಹಿಂದಿಕ್ಕಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಅಗ್ರ ಸ್ಥಾನಕ್ಕೇರಿದೆ.

Stree 2 Record
'ಸ್ತ್ರೀ 2' ಬಾಕ್ಸ್​ ಆಫೀಸ್​ ದಾಖಲೆ (Film Poster/ ETV Bharat)

By ETV Bharat Karnataka Team

Published : Sep 18, 2024, 5:43 PM IST

ಹೈದರಾಬಾದ್: ಬಾಲಿವುಡ್​ ಬೆಡಗಿ ಶ್ರದ್ಧಾ ಕಪೂರ್ ಹಾಗೂ ಜನಪ್ರಿಯ ನಟ ರಾಜ್‌ಕುಮಾರ್ ರಾವ್ ನಟನೆಯ ಸ್ತ್ರೀ 2 ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. 34 ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 560 ಕೋಟಿ ರೂಪಾಯಿ ಸಂಪಾದಿಸೋ ಮೂಲಕ ''ನಂಬರ್ 1 ಹಿಂದಿ'' ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರ 2018ರಲ್ಲಿ ಬಿಡುಗಡೆಯಾದ ಹಿಟ್ 'ಸ್ತ್ರೀ' ಸಿನಿಮಾದ ಸೀಕ್ವೆಲ್​​​. ಬಾಲಿವುಡ್​​ ಸೂಪರ್​​ ಸ್ಟಾರ್ ರಣ್​​​​ಬೀರ್ ಕಪೂರ್ ಅಭಿನಯದ ಸೂಪರ್ ಹಿಟ್ 'ಅನಿಮಲ್' ಮತ್ತು ಕಿಂಗ್​ ಖಾನ್​​ ಶಾರುಖ್ ಅಭಿನಯದ 'ಜವಾನ್' ಹಿಂದಿಕ್ಕಿ ಅಗ್ರಸ್ಥಾನ ತಲುಪುವಲ್ಲಿ ಯಶಸ್ವಿಯಾಗಿದೆ.

ತಮ್ಮ ಮಹತ್ತರ ಸಾಧನೆಯನ್ನು ಚಿತ್ರ ತಯಾರಕರಿಂದು ಸೋಷಿಯಲ್​ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಶೇರ್ ಮಾಡಿದ ತಂಡ, "ವೋ ಸ್ತ್ರೀ ಹೈ ಔರ್ ಉಸ್ನೆ ಆಖೀರ್ ಕರ್ ದಿಖಾಯಾ. ಹಿಂದೂಸ್ತಾನ್ ಕಿ ಸಬ್ ಸೆ ಸರ್ವಶ್ರೇಷ್ಠ್, ಆಲ್​​​ ಟೈಮ್​​ ನಂಬರ್ 1 ಹಿಂದಿ ಚಿತ್ರ! ಫ್ಯಾನ್ಸ್ ಕೊ ಬಹುತ್ ಬಹುತ್ ಧನ್ಯವಾದ್. ಸ್ತ್ರೀ 2 ಇನ್ನೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಥಿಯೇಟರ್ ಆವೋ, ಕುಚ್ ಔರ್ ನಯೇ ರೆಕಾರ್ಡ್ಸ್ ರಚಾತೇ ಹೈ!" ಎಂದು ಬರೆದುಕೊಂಡಿದೆ. (ಅವಳು ಸ್ತ್ರೀ, ಸಾಧನೆ ಮಾಡೇ ಬಿಟ್ಟಳು. ಹಿಂದೂಸ್ತಾನದ ಸರ್ವಶ್ರೇಷ್ಠ, ಸಾರ್ವಕಾಲಿಕ ನಂಬರ್ 1 ಹಿಂದಿ ಚಿತ್ರ. ಅಭಿಮಾನಿಗಳಿಗೆ ಬಹಳ ಧನ್ಯವಾದಗಳು. ಚಿತ್ರಮಂದಿರಗಳಿಗೆ ಬನ್ನಿ, ಇನ್ನೊಂದಿಷ್ಟು ದಾಖಲೆಗಳನ್ನು ಬರೆಯೋಣ).

ಗಲ್ಲಾಪೆಟ್ಟಿಗೆ ಸಂಗ್ರಹದ ಬಗ್ಗೆ ಗಮನಿಸೋದಾದ್ರೆ, ಈ ಹಾರರ್-ಕಾಮಿಡಿ ಸೀಕ್ವೆಲ್ ಒಂದು ಮೈಲಿಗಲ್ಲನ್ನು ಸಾಧಿಸಿದೆ. ಹಿಂದಿನ ದಾಖಲೆಗಳನ್ನು ಪುಡಿಗಟ್ಟಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ (ಸರ್ವಕಾಲಕ್ಕೂ) ಹೊರಹೊಮ್ಮಿದೆ. ಮೊದಲ ದಿನ 55.4 ಕೋಟಿ ರೂ.ಗಳೊಂದಿಗೆ ಬಾಕ್ಸ್​ ಆಫೀಸ್​ ಪ್ರಯಾಣ ಆರಂಭಿಸಿದ 'ಸ್ತ್ರೀ 2' ತನ್ನ ಮೊದಲ ವಾರಾಂತ್ಯ 204 ಕೋಟಿ ರೂ. ಗಳಿಸಿತ್ತು. ಚಿತ್ರ ಐದು ವಾರಗಳಲ್ಲಿ 560.35 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ:ಡಾಲಿ ಧನಂಜಯ್​​, ಸತ್ಯದೇವ್ ಸಿನಿಮಾ 'ಜೀಬ್ರಾ' ಬಿಡುಗಡೆಗೆ ದಿನ ನಿಗದಿ - Zebra Release Date

ಮಂಗಳವಾರ ಚಿತ್ರ ಶೇ.16.67ರಷ್ಟು ಕುಸಿತ ಕಂಡಿತು. 2.5 ಕೋಟಿ ರೂ. ಗಳಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂ.ನ ಗಡಿ ಸಮೀಪಿಸಿದೆ. ಪಂಕಜ್ ತ್ರಿಪಾಠಿ ಮತ್ತು ಅಭಿಷೇಕ್ ಬ್ಯಾನರ್ಜಿಯವರಂತಹ ಪ್ರತಿಭಾವಂತ ಕಲಾವಿದರನ್ನು ಒಳಗೊಂಡಿರುವ ಚಿತ್ರ ಅಮೋಘ ಅಭಿನಯದ ಜೊತೆಗೆ ಕಾಮಿಡಿ ಹಾರರ್ ಅಂಶಗಳನ್ನು ಒಳಗೊಂಡಿದ್ದೇ ಚಿತ್ರದ ಯಶಸ್ಸಿಗೆ ಕಾರಣವೆಂದು ಹೇಳಬಹುದು. ಅಮರ್ ಕೌಶಿಕ್ ನಿರ್ದೇಶನದ ಸ್ತ್ರೀ 2 ವಿಕ್ಕಿ ಮತ್ತು ಅವನ ಸ್ನೇಹಿತರು ಚಂದೇರಿಯಲ್ಲಿ ಭಯಾನಕ ಸರ್ಕಟಾವನ್ನು ಎದುರುಗೊಳ್ಳುವ ಕಥೆಯನ್ನು ಒಳಗೊಂಡಿದೆ.

ಇದನ್ನೂ ಓದಿ:ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಅನು ಪ್ರಭಾಕರ್: 'ಹಗ್ಗ' ಟ್ರೇಲರ್​ ರಿಲೀಸ್ ಈವೆಂಟ್​ನಲ್ಲಿ ಹರ್ಷಿಕಾ ಪೂಣಚ್ಚ ಸೀಮಂತ - Hagga Event

ABOUT THE AUTHOR

...view details