ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಡಂಕಿ ಸಿನಿಮಾ 2023ರ ಕೊನೆಯಲ್ಲಿ ತೆರೆಕಂಡು ಯಶಸ್ವಿ ಆಗಿದೆ. ದಕ್ಷಿಣ ಚಿತ್ರರಂಗದ ಜನಪ್ರಿಯ, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅವರ ಪುತ್ರ ಅಲ್ಲು ಅಯಾನ್ 'ಡಂಕಿ'ಯ ಲುಟ್ ಪುಟ್ ಗಯಾ ಹಾಡನ್ನು ಹಾಡಿ, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು. ಇತ್ತೀಚೆಗೆ ಅಲ್ಲು ಅಯಾನ್ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿತ್ತು.
ಇದೀಗ ಸ್ವತಃ ಶಾರುಖ್ ಅವರೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ಅಲ್ಲು ಅರ್ಜುನ್ ಮಗನನ್ನು ಶ್ಲಾಘಿಸಿದ್ದಾರೆ. ಅಯಾನ್ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಪುಷ್ಪ ಚಿತ್ರದ ಅಲ್ಲು ಅರ್ಜುನ್ ಅವರ ಹಿಟ್ ಸಾಂಗ್ ಶ್ರೀವಲ್ಲಿ ಹಾಡನ್ನು ಅಭ್ಯಾಸ ಮಾಡಲು ನನ್ನ ಮಕ್ಕಳನ್ನು ಪ್ರೋತ್ಸಾಹಿಸುತ್ತೇನೆಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಕುಮಾರ್ ಹಿರಾನಿ ನಿರ್ದೇಶನದ ಮತ್ತು ಎಸ್ಆರ್ಕೆ ಅಭಿನಯದ ಡಂಕಿ ಕಳೆದ ಡಿಸೆಂಬರ್ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಯಿತು. ಈ ಚಿತ್ರ ಪ್ರೀತಮ್ ಅವರ ಸಂಗೀತವನ್ನು ಒಳಗೊಂಡಿತ್ತು. ಅರಿಜಿತ್ ಸಿಂಗ್ ಹಾಡಿದ ಜನಪ್ರಿಯ ಗೀತೆ 'ಲುಟ್ ಪುಟ್ ಗಯಾ'ದ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದರು.
ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋವೊಂದರಲ್ಲಿ, ಅಲ್ಲು ಅಯಾನ್ ಲುಟ್ ಪುಟ್ ಗಯಾ ಹಾಡನ್ನು ಬಹಳ ಮೋಜು ಮಸ್ತಿಯಿಂದ ಹಾಡಿದ್ದಾನೆ. ಶಾರುಖ್ ಖಾನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡು, ಅಯಾನ್ಗೆ ಧನ್ಯವಾದ ತಿಳಿಸಿದ್ದಾರೆ. ಪುಟ್ಟ ಬಾಲಕನ ಪ್ರತಿಭೆಯನ್ನು ಗುಣಗಾನ ಮಾಡಿದರು. "ಫ್ಲವರ್ ಮತ್ತು ಫೈಯರ್" ಎರಡರ ಸಂಯೋಜನೆ ಎಂದು ಕೂಡ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಅವರ ಸೂಪರ್ ಹಿಟ್ ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡನ್ನು ತಮ್ಮ ಮಕ್ಕಳಿಂದ ಹಾಡಿಸಲು ಪ್ರಯತ್ನಿಸುವುದಾಗಿ ಹಾಸ್ಯಮಯವಾಗಿ ತಿಳಿಸಿದರು.
ಇದನ್ನೂ ಓದಿ:ಕ್ರೀಡಾಂಗಣದಲ್ಲಿ ಎಸ್ಆರ್ಕೆಯ 'ಕಲ್ ಹೋ ನಾ ಹೋ' ಟೈಟಲ್ ಟ್ರ್ಯಾಕ್ ನುಡಿಸಿದ ವಿದೇಶಿಗ: ವಿಡಿಯೋ
ಶಾರುಖ್ ಅವರ ಟ್ವೀಟ್ಗೆ ಅಲ್ಲು ಅರ್ಜುನ್ ಕೃತಜ್ಞತೆಯಿಂದ ವ್ಯಕ್ತಪಡಿಸಿದ್ದಾರೆ. ಸಿಹಿ ಸಂದೇಶಕ್ಕಾಗಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. "ಶಾರುಖ್ ಜಿ.. ಸೋ ಸ್ವೀಟ್ ಆಫ್ ಯೂ. ಲಾಟ್ಸ್ ಆಫ್ ಲವ್'' ಎಂದು ಬರೆದುಕೊಂಡಿದ್ದಾರೆ. ಡಂಕಿ ಇತ್ತೀಚೆಗೆ ನೆಟ್ಫ್ಲಿಕ್ಸ್ ಇಂಡಿಯಾದಲ್ಲಿ ಪ್ರೀಮಿಯರ್ ಆಗಿದೆ. ಪಠಾಣ್ ಮತ್ತು ಜವಾನ್ ನಂತರ ಶಾರುಖ್ ಖಾನ್ ಅವರ 2023ರ ಮೂರನೇ ಹಿಟ್ ಸಿನಿಮಾ. ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಹಲವರು ಕಾಣಿಸಿಕೊಂಡಿರುವ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದೆ. ಶಾರುಖ್ ಖಾನ್ ಅವರ ಮುಂದಿನ ಸಿನಿಮಾ ಪಠಾಣ್ 2. ಡಿಸೆಂಬರ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಅಲ್ಲು ಅರ್ಜುನ್ ತಮ್ಮ ಪುಷ್ಪ 2 ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:100 ಕೋಟಿ ಆಫರ್ ಕೂಡ ಒಪ್ಪಿರಲಿಲ್ವಂತೆ ನಟಿ; ಆ ಸಿನಿಮಾಗೆ ಒಲ್ಲೆ ಎಂದಿದ್ದೇಕೆ ನಯನತಾರಾ?