ಕರ್ನಾಟಕ

karnataka

ETV Bharat / entertainment

'ಬಘೀರ' ಚಿತ್ರದಲ್ಲಿ 'ರುಧಿರ'ನಾಗಿ ಎಂಟ್ರಿ ಕೊಟ್ಟ ರೋರಿಂಗ್ ಸ್ಟಾರ್ ಶ್ರೀಮುರಳಿ - BAGHEERA MOVIE

ಶ್ರೀಮುರಳಿ ನಟನೆಯ 'ಬಘೀರ' ಚಿತ್ರದ ಮೊದಲ ಹಾಡು 'ರುಧಿರ ಧಾರ ...' ಇಂದು ಬಿಡುಗಡೆಯಾಗಿದೆ. ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡು ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

BAGHEERA MOVIE
ರೋರಿಂಗ್ ಸ್ಟಾರ್ ಶ್ರೀಮುರಳಿ (ETV Bharat)

By ETV Bharat Karnataka Team

Published : Oct 17, 2024, 6:25 PM IST

'ಮದಗಜ' ನಂತರ ಬಿಡುಗಡೆಯಾಗುತ್ತಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ 'ಬಘೀರ' ಚಿತ್ರದ ಮೊದಲ ಹಾಡು 'ರುಧಿರ ಧಾರ ...' ಬಿಡುಗಡೆ ಆಗಿದೆ. ಇಂದು ಬೆಳಗ್ಗೆ ಮೊದಲ ಹಾಡನ್ನು ರಿಲೀಸ್‌ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್‌ ತನ್ನ ಅಧಿಕೃತ ಜಾಲತಾಣದಲ್ಲಿ ಹೇಳಿಕೊಂಡಿತ್ತು.

ಬಿಡುಗಡೆಯಾಗಿರುವ 'ರುಧಿರ ಧಾರ ...' ಶೀರ್ಷಿಕೆ ಗೀತೆಗೆ ಅನಿರುದ್ಧ ಶಾಸ್ತ್ರಿ ಸಾಹಿತ್ಯ ಬರೆಯುವುದರ ಜೊತೆಗೆ ಹಾಡಿಗೂ ಧ್ವನಿ ನೀಡಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ ಮಾಡಿದ್ದು, ಹೊಸ ಬಗೆಯ ಸಂಗೀತ ಕೇಳುಗರಿಗೆ ವಿಶೇಷ ಎನಿಸುತ್ತಿದೆ.

ಇದೊಂದು ಗ್ಯಾಂಗ್ ಸ್ಟಾರ್ ಕಥೆಯಾಗಿದ್ದು, ಶ್ರೀಮುರಳಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಹಾಡನ್ನು ಸೂಕ್ಷ್ಮವಾಗಿ ಗಮನಿಸಿದರೆ ಶ್ರೀಮುರಳಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರಾ ಎಂಬ ಕುತೂಹಲ ಮೂಡುತ್ತದೆ.

ಶ್ರೀಮುರಳಿ ಜೋಡಿಯಾಗಿ ಚಂದನವನದ ಬಹುಬೇಡಿಕೆಯ ನಟಿ ರುಕ್ಮಿಣಿ ವಸಂತ್‌ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಪ್ರಕಾಶ್‌ ರಾಜ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಗರುಡ ರಾಮ್ ಸೇರಿ ಹತ್ತಾರು ಕಲಾವಿದರು ನಟಿಸಿದ್ದಾರೆ.

ಚಿತ್ರದ ಪೋಸ್ಟರ್​ (Cinema Team)

ಈ ಹಿಂದೆ ಲಕ್ಕಿ ಸಿನಿಮಾ ಮಾಡಿದ್ದ ಡಾ.ಸೂರಿ ಈ ಚಿತ್ರದ ನಿರ್ದೇಶನ ಮಾಡಿದ್ದರೆ. ಉಗ್ರಂ, ಕೆಜಿಎಪ್ ಹಾಗೂ ಸಲಾರ್ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಎ.ಜೆ.ಶೆಟ್ಟಿ ಅವರ ಕ್ಯಾಮರಾ ಕೈಚಳಕವಿದೆ. ಪ್ರಣವ್‌ ಶ್ರೀ ಪ್ರಸಾದ್‌ ಸಂಕಲನ ನಿರ್ವಹಿಸಿದ್ರೆ, ರವಿ ಸಂತೆಹಕ್ಲು ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಆ್ಯಕ್ಷನ್‌ ಸಿನಿಮಾಗೆ ಚೇತನ್‌ ಡಿಸೋಜ್‌ ಸಾಹಸ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಪೋಸ್ಟರ್​ (Cinema Team)

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್‌ ಕಿರಗಂದೂರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್​ ನಂತಹ ಬ್ಲಾಕ್​​ಬಸ್ಟರ್‌ ಹಿಟ್‌ ನೀಡಿದ್ದ ಈ ಸಂಸ್ಥೆಯ ಬತ್ತಳಿಕೆಯಿಂದ ಅಕ್ಟೋಬರ್ 31ರಂದು ಬಘೀರ ಚಿತ್ರಪ್ರೇಕ್ಷಕರಿಗೆ ದರ್ಶನ ಕೊಡಲಿದೆ.

ಇದನ್ನೂ ಓದಿ:ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಶೀಘ್ರದಲ್ಲೇ ಒಟಿಟಿಗೆ

ABOUT THE AUTHOR

...view details