'ಮಂಜುಮ್ಮೆಲ್ ಬಾಯ್ಸ್' ಮಾಲಿವುಡ್ ಇಂಡಸ್ಟ್ರಿಯ 2024ರ ಸೂಪರ್ ಡೂಪರ್ ಹಿಟ್ ಸಿನಿಮಾ. ಭಾಷೆ ಗಡಿ ಮೀರಿ ವಿಶ್ವದಾದ್ಯಂತದ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು 'ಮಂಜುಮ್ಮೆಲ್ ಬಾಯ್ಸ್' ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾತ್ರಧಾರಿಗಳು, ಕಥಾಹಂದರ, ನಿರ್ದೇಶನ ಶೈಲಿ ಸೇರಿದಂತೆ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಚಿಂಚೂ ಮಾತನಾಡುತ್ತಿದ್ದಾರೆ. ಒಂದಿಲ್ಲೊಂದು ವಿಚಾರವಾಗಿ 'ಮಂಜುಮ್ಮೆಲ್ ಬಾಯ್ಸ್' ಸಖತ್ ಸದ್ದು ಮಾಡುತ್ತಿದೆ.
ಇದೇ ವೇಳೆ ಡಾಟರ್ ಆಫ್ ಪಾರ್ವತಮ್ಮ, ವೀರಂ, ಶುಗರ್ ಲೆಸ್ ಚಿತ್ರಗಳನ್ನು ನಿರ್ಮಾಣ ಮಾಡಿ, ಶುಗರ್ ಲೆಸ್ಗೆ ಆ್ಯಕ್ಷನ್ ಕಟ್ ಹೇಳಿದ್ದ ಸ್ಯಾಂಡಲ್ವುಡ್ನ ಶಶಿಧರ್ ಅವರು ಮಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಮಲಯಾಳಂನಲ್ಲಿ ತಮ್ಮ ಚೊಚ್ಚಲ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. ಮಲಯಾಳಂ ಚಿತ್ರದ ಮೂಲಕ ಶಶಿಧರ್ ತಮ್ಮ ಸಿನಿಜರ್ನಿಯ ಎರಡನೇ ಡೈರೆಕ್ಷನ್ಗೆ ಅಣಿಯಾಗಿದ್ದಾರೆ.
'ಸಿಬಿಲ್ ಸ್ಕೋರ್'ನಲ್ಲಿ ಶ್ರೀನಾಥ್ ಭಾಸಿ: ಹೌದು, ಮಂಜುಮ್ಮೆಲ್ ಬಾಯ್ಸ್ ಸಿನಿಮಾದ ಪಾತ್ರಧಾರಿ ಶ್ರೀನಾಥ್ ಭಾಸಿ ಅವರು ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಾಲಿವುಡ್ ಸ್ಟಾರ್ ನಟ. ನಮ್ಮ ಕನ್ನಡದ ನಿರ್ಮಾಪಕ-ನಿರ್ದೇಶಕ ಶಶಿಧರ್ ಕೆ.ಎಮ್ ನಿರ್ದೇಶನ ಮಾಡ್ತಿರೋ ಚೊಚ್ಚಲ ಮಲಯಾಳಂ ಸಿನಿಮಾ 'ಸಿಬಿಲ್ ಸ್ಕೋರ್'ನಲ್ಲಿ ಶ್ರೀನಾಥ್ ಭಾಸಿ ನಾಯಕ ನಟನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಹಿನ್ನೆಲೆ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.