ಹೈದರಾಬಾದ್: 'ಸ್ಕ್ವಿಡ್ ಗೇಮ್'ನ 2ನೇ ಸೀಸನ್ ಜನಪ್ರಿಯ ಒಟಿಟಿ ಪ್ಲಾಟ್ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಸಾಲಿನ ಡಿಸೆಂಬರ್ 26ರಂದು ಪ್ರಾರಂಭಗೊಳ್ಳಲಿದೆ. ಮೂರನೇ ಮತ್ತು ನಾಲ್ಕನೇ (ಕೊನೆಯ) ಸೀಸನ್ ಮುಂದಿನ ವರ್ಷ 2025ರಲ್ಲಿ ಬಿಡುಗಡೆ ಆಗಲಿದೆ. 2020ರಲ್ಲಿ ಈ ಥ್ರಿಲ್ಲರ್ ಡ್ರಾಮಾ ಒಟಿಟಿ ವೇದಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿತ್ತು. ಮೂರು ವರ್ಷಗಳ ಬ್ರೇಕ್ ಬಳಿಕ ತನ್ನ ಹೊಸ ಸೀಸನ್ನೊಂದಿಗೆ ಮರಳಿದೆ. ಇಂದು ಅಧಿಕೃತ ಘೋಷಣೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಸಂತಸ, ಉತ್ಸಾಹ ಹಂಚಿಕೊಳ್ಳುತ್ತಿದ್ದಾರೆ..
ಸೀರಿಸ್ನ ಕಾರ್ಯನಿರ್ವಾಹಕ ನಿರ್ಮಾಪಕ, ಬರಹಗಾರ ಮತ್ತು ನಿರ್ದೇಶಕ ಹ್ವಾಂಗ್ ಡಾಂಗ್ ಹ್ಯುಕ್ ಅವರಿಂದು ಈ ಗುಡ್ ನ್ಯೂಸ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಎರಡನೇ ಸೀಸನ್ನ ಅನೌನ್ಸ್ಮೆಂಟನ್ನು ಟ್ರ್ಯಾಕ್ ರೇಸ್ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಅದು ಮೆಡಲ್ಗಾಗಿ ಅಲ್ಲ- ಬದಲಿಗೆ, ಅದು ಕೇವಲ ಉಳಿವಿಗಾಗಿ ಎಂದು ನಂಬಲಾಗಿದೆ. ಅಪ್ಡೇಟ್ಸ್ ಹಂಚಿಕೊಳ್ಳುತ್ತಾ, ''ರಿಯಲ್ ಗೇಮ್ ಶುರುವಾಗಲಿದೆ. ಸ್ಕ್ವಿಡ್ ಗೇಮ್ನ ಸೀಸನ್ 2 ಡಿಸೆಂಬರ್ 26ರಂದು ನಿಮ್ಮ ಮುಂದೆ ಬರಲಿದೆ, ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ. ಫೈನಲ್ ಸೀಸನ್ 2025ರಲ್ಲಿ ಬರಲಿದೆ" ಎಂದು ಬರೆದುಕೊಂಡಿದ್ದಾರೆ.
ಅನೌನ್ಸ್ಮೆಂಟ್ಗೆ ಪ್ರತಿಕ್ರಿಯಿಸಿದ ಸೋಷಿಯಲ್ ಮೀಡಿಯಾ ಬಳಕೆದಾರರೋರ್ವರು, "ಇದು ಕ್ರಿಸ್ಮಸ್ನ ನಂತರದ ದಿನ ಪ್ರಥಮ ಪ್ರದರ್ಶನಗೊಳ್ಳಲಿದೆ. ಬೆಸ್ಟ್ ಲೇಟ್ ಕ್ರಿಸ್ಮಸ್ ಗಿಫ್ಟ್ ಬಗ್ಗೆ ಮಾತನಾಡೋಣ ಬನ್ನಿ'' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರ ಕಾಮೆಂಟ್ ಮಾಡಿದ್ದು, "ಫನ್ ಈಗ ಶುರುವಾಗುತ್ತದೆ" ಎಂದು ತಿಳಿಸಿದ್ದಾರೆ. ಸೀರಿಸ್ನ ಇನ್ನೋರ್ವ ಅಭಿಮಾನಿ ಪ್ರತಿಕ್ರಿಯಿಸಿ, "ಲೆಟ್ಸ್ ಗೋ'' ಎಂದು ತಿಳಿಸಿದ್ದಾರೆ. ಹೀಗೆ ಅಭಿಮಾನಿಗಳಿಂದ ಸರಣಿ ಕಾಮೆಂಟ್ಗಳು ಹರಿದುಬರುತ್ತಿವೆ. ಈ ಸರಣಿಯ ಜನಪ್ರಿಯತೆ ಮತ್ತು ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದೆ ಎಂಬುದಕ್ಕೆ ಕಾಮೆಂಟ್‌ಗಳೇ ಸಾಕ್ಷಿ.