ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಡಬಲ್ ಇಸ್ಮಾರ್ಟ್ ಥಿಯೇಟ್ರಿಕಲ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಉಸ್ತಾದ್ ರಾಮ್ ಪೋತಿನೇನಿ ಮತ್ತು ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
ಡಬಲ್ ಇಸ್ಮಾರ್ಟ್ ಚಿತ್ರತಂಡ (ETV Bharat) ಇದೇ ಜೋಶ್ನಲ್ಲಿರೋ ಚಿತ್ರತಂಡ ಬಿಗ್ ಬುಲ್ ಎಂಬ ವಿಶೇಷ ಹಾಡನ್ನು ಬಿಡುಗಡೆ ಮಾಡಿದೆ. ಪೂರಿ ಜಗನ್ನಾಥ್ ಅವರು ಖಳನಾಯಕರನ್ನು ಅಷ್ಟೇ ಶಕ್ತಿಶಾಲಿ ಪಾತ್ರಗಳಲ್ಲಿ ಪ್ರಸ್ತುತಪಡಿಸಲು ಹೆಸರುವಾಸಿಯಾಗಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ, ಅವರು ಡಬಲ್ ಇಸ್ಮಾರ್ಟ್ ನಲ್ಲಿ ಮುಖ್ಯ ಖಳನಾಯಕನ ಮೇಲೆ ಹಾಡನ್ನು ತಯಾರಿಸಿದ್ದಾರೆ. ಬಿಗ್ ಬುಲ್ ಪಾತ್ರವನ್ನು ಸಂಜಯ್ ದತ್ ಮಾಡಿದ್ದು, ವಿಶೇಷವಾಗಿ ಈ ಹಾಡನ್ನ ಸ್ಪೆಷಲ್ ಡೆಡಿಕೇಟ್ ಮಾಡಲಾಗಿದೆ.
ಡಬಲ್ ಇಸ್ಮಾರ್ಟ್ ಚಿತ್ರ ನಾಯಕ (ETV Bharat) ಭಾಸ್ಕರಭಟ್ಲ ರವಿಕುಮಾರ್ ಅವರ ಸಾಹಿತ್ಯವು ಬಿಗ್ ಬುಲ್ ಪಾತ್ರವನ್ನು ಪರಿಚಯಸಿದೆ. ಪೃಧ್ವಿ ಚಂದ್ರ ಮತ್ತು ಸಂಜನಾ ಕಲ್ಮಂಜೆ ಅವರ ಗಾಯನವು ಹಾಡಿಗೆ ಮತ್ತಷ್ಟು ಶಕ್ತಿಯನ್ನು ತುಂಬಿದೆ. ಮಣಿ ಶರ್ಮಾ ಸಂಗೀತ ಒದಗಿಸಿದ್ದಾರೆ.
ಸಂಜಯ್ ದತ್, ಉಸ್ತಾದ್ ರಾಮ್ ಪೋತಿನೇನಿ, ಪುರಿ ಜಗನ್ನಾಥ್ ಇದ್ದಾರೆ. (ETV Bharat) ಡಬಲ್ ಇಸ್ಮಾರ್ಟ್ ಚಿತ್ರ ಪುರಿ ಕನೆಕ್ಟ್ಸ್ ಬ್ಯಾನರ್ ಅಡಿ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸಿದ್ದಾರೆ. ಸ್ಯಾಮ್ ಕೆ. ನಾಯ್ಡು ಮತ್ತು ಗಿಯಾನಿ ಗಿಯಾನ್ನೆಲಿ ಕ್ಯಾಮೆರಾ ಹಿಡಿದಿದ್ದಾರೆ. ಸ್ವಾತಂತ್ರ್ಯ ದಿನದಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಂಜಯ್ ದತ್ ಮಾತು (ETV Bharat) ಇದನ್ನೂ ಓದಿ:ಡ್ರಗ್ಸ್ ಮಾಫಿಯಾ ಮೇಲೆ ಬೆಳಕು ಚೆಲ್ಲಿದ 'ಭೀಮ': ದುನಿಯಾ ವಿಜಯ್ ಸಿನಿಮಾಗೆ ಪ್ರೇಕ್ಷಕರ ರಿಯಾಕ್ಷನ್ ಹೀಗಿದೆ - ವಿಡಿಯೋ - Bheema Movie Reactions