ಕರ್ನಾಟಕ

karnataka

ETV Bharat / entertainment

ಯುವ ಪ್ರತಿಭೆಗಳ ಜೊತೆ ಸಿಂಪಲ್ ಸುನಿ ಹೊಸ ಪಯಣ: ಚಿತ್ರದ ಟೈಟಲ್ 'ದೇವರು ರುಜು ಮಾಡಿದನು' - SIMPLE SUNI

ಯುವ ಪ್ರತಿಭೆಗಳ ಜೊತೆ 'ದೇವರು ರುಜು ಮಾಡಿದನು' ಸಿನಿಮಾ ಮೂಲಕ ಬೆಳ್ಳಿ ಪರದೆಯಲ್ಲಿ ಮತ್ತೊಂದು ಮ್ಯಾಜಿಕ್ ಮಾಡಲು ಸಿಂಪಲ್ ಸುನಿ ರೆಡಿಯಾಗಿದ್ದಾರೆ.

ದೇವರು ರುಜು ಮಾಡಿದನು ಮುಹೂರ್ತ ವೇಳೆ ಚಿತ್ರ ತಂಡ
'ದೇವರು ರುಜು ಮಾಡಿದನು' ಮುಹೂರ್ತ ಕಾರ್ಯಕ್ರಮದಲ್ಲಿ ಚಿತ್ರತಂಡ (ETV Bharat)

By ETV Bharat Karnataka Team

Published : Oct 21, 2024, 4:08 PM IST

ರೊಮ್ಯಾಂಟಿಕ್ ಚಿತ್ರಗಳಿಂದ ಸ್ಯಾಂಡಲ್​ವುಡ್​​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಿರ್ದೇಶಕ ಸಿಂಪಲ್‌ ಸುನಿ. ಇವರು ಮತ್ತೊಂದು ವಿಭಿನ್ನ ಕಥೆಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಮುಹೂರ್ತ ಕೂಡ ಮಾಡಿದ್ದಾರೆ. 'ದೇವರು ರುಜು ಮಾಡಿದನು' ಎಂಬುದು ಚಿತ್ರದ ಟೈಟಲ್. ಗ್ರೀನ್ ಹೌಸ್ ಮಾಲೀಕ ವಾಸು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ನಾಯಕ ವೀರಾಜ್ ಅಜ್ಜಿ ಕ್ಯಾಮೆರಾಗೆ ಚಾಲನೆ ನೀಡಿದರು. ಈ ಚಿತ್ರದ ಮೂಲಕ ಯುವ ವೀರಾಜ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ದೇವರು ರುಜು ಮಾಡಿದನು ಎಂಬ ಕ್ಯಾಚಿ ಟೈಟಲ್​​ನ ಟೀಸರ್ ಬಿಟ್ಟು ನಿರೀಕ್ಷೆಯನ್ನು ಸುನಿ ಇಮ್ಮಡಿಗೊಳಿಸಿದ್ದಾರೆ. ಸಂಗೀತವೇ ಉಸಿರೆಂದು ಜೀವಿಸುವ ಇಬ್ಬರು ನಾಯಕಿಯರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಸೊಗಸಾದ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆ ಹೇಳಹೊರಟಿದ್ದಾರೆ ಸುನಿ. ದೇವರು ರುಜು ಮಾಡಿದನು ಟೀಸರ್ ಬಹಳ ಇಂಪ್ರೆಸಿವ್ ಆಗಿದೆ. ಕ್ಯಾಮೆರಾ ವರ್ಕ್, ಅದ್ಭುತ ಸಂಗೀತ, ನಾಯಕ ವೀರಾಜ್, ನಾಯಕಿಯರಾದ ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ಅಭಿನಯಕ್ಕೆ ಟೀಸರ್ ತೂಕ ಹೆಚ್ಚಿಸಿದೆ.

ನಾಯಕ ವೀರಾಜ್ (ETV Bharat)

ಮುಹೂರ್ತದ ಬಳಿಕ ಮಾತನಾಡಿದ ಯುವ ನಟ ವೀರಾಜ್, "ಈ ಮುಹೂರ್ತ ಸಮಾರಂಭ ನನ್ನ ಜೀವನದ ಒಂದಲ್ಲ, ಎರಡಲ್ಲ ಎಷ್ಟೋ ವರ್ಷದ ಕನಸು. ಚಿಕ್ಕವನಿದ್ದಾಗಿನಿಂದಲೂ ನಟನಾಗಬೇಕು ಎಂಬ ಆಸೆ ಇತ್ತು. ಸ್ಕೂಲ್ ಟೀಚರ್ಸ್ ಡ್ಯಾನ್ಸ್, ಆ್ಯಕ್ಟಿಂಗ್ ಮಾಡು ಎಂದು ಹೇಳುತ್ತಿದ್ದರು. ನಾನು ಆಗ ಮಾಡುತ್ತಿದ್ದೆ. ಆಗ ನನ್ನ ಫ್ರೆಂಡ್ಸ್ ಚಪ್ಪಾಳೆ ತಟ್ಟುತ್ತಿದ್ದರು. ಆಗ ಇದೇನೂ ಕಿಕ್ ಇದೆಯಲ್ಲ, ಸಖತ್ ಇದೆ ಎನಿಸುವುದು. ಕಲಾವಿದರಿಗೆ ಇದೆ ಬೇಕಿರುವುದು. ಜನ ಕೊಡುವ ರೆಸ್ಪಾನ್ಸ್ ಅದ್ಭುತ. ಅಂದಿನಿಂದ ನನ್ನ ಪಯಣ ಶುರುವಾಯ್ತು. ಜನರಿಗೆ ಏನಾದರೂ ಮಾಡಬೇಕು. ನನಗೆ ಇಷ್ಟವಾಗಿದ್ದನ್ನು ಮಾಡಬೇಕು ಅಂತನಿಸಿತು. ನಟನೆಗೆ ತರಬೇತಿ ಪಡೆದೆ. ನಾಟಕ ಮಾಡಿಕೊಂಡು ಬಂದಿದ್ದೇನೆ. ಇಂಡಸ್ಟ್ರಿಗೆ ನಾನು ಹೊಸಬ" ಎಂದರು‌.

ದೇವರು ರುಜು ಮಾಡಿದನು ಚಿತ್ರದ ನಾಯಕಿ (ETV Bharat)

ಗ್ರೀನ್ ಹೌಸ್ ಮೂವೀಸ್ ಅಡಿಯಲ್ಲಿ ಸಿನಿಮಾವನ್ನು ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಗೆ ಜೆಜೆ, ಜೇಡ್ ಸ್ಯಾಂಡಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ರೈ ಪತಾಜೆ ಕ್ಯಾಮರಾ ಹಿಡಿದಿದ್ದಾರೆ. ಸದ್ಯದಲ್ಲೇ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆ.

ದೇವರು ರುಜು ಮಾಡಿದನು ಚಿತ್ರದ ಮುಹೂರ್ತ (ETV Bharat)

ಇದನ್ನೂ ಓದಿ: ಶೋಭಿತಾ-ನಾಗ ಚೈತನ್ಯ ಪ್ರೀ ವೆಡ್ಡಿಂಗ್‌ ಜೋರು: ಮದುವೆ ದಿನದ ಗುಟ್ಟು ಬಿಡದ ಕುಟುಂಬ

ABOUT THE AUTHOR

...view details