ಹೈದರಾಬಾದ್: ಬಾಲಿವುಡ್ನ ಪ್ರಣಯದ ಜೋಡಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಸಾಮಾಜಿಕ ಜಾಲತಾಣ, ಸಾರ್ವಜನಿಕ ತಾಣದಲ್ಲಿ ಅಭಿಮಾನಿಗಳನ್ನು ಮೋಡಿ ಮಾಡುವಲ್ಲಿ ಸದಾ ಮುಂದಿರುತ್ತಾರೆ. ತಮ್ಮ ಸ್ಟೈಲಿಶ್ ಲುಕ್ನಿಂದ ಹಿಡಿದು ಪ್ರತಿಯೊಂದು ಅಂಶದಲ್ಲೂ ಅವರು ಗಮನ ಸೆಳೆಯುತ್ತಾರೆ. ಇದೇ ರೀತಿ ಈ ಜೋಡಿ ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ.
ತಮ್ಮ ರಜೆ ಸಮಯವನ್ನು ಕಳೆದುಕೊಂಡು ಮುಂಬೈನ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಪ್ಯಾಪರಾಜಿಗಳಿಗೆ ಸೆರೆ ಸಿಕ್ಕಿದ್ದಾರೆ. ಅವರು ಬ್ಯುಸಿನೆಸ್ ಜೊತೆಗೆ ವೈಯಕ್ತಿಕ ಸಮಯದಲ್ಲಿ ಕಾಲ ಕಳೆಯುವುದಕ್ಕೆ ಮುಂಬೈ ತೊರೆದಿದ್ದರು. ಇದೀಗ ಮರಳಿದ ಅವರು ವಿಮಾನ ನಿಲ್ದಾಣದಿಂದ ತಮ್ಮ ಕಾರಿನತ್ತ ಹೆಜ್ಜೆ ಹಾಕಿದ ಇವರಿಬ್ಬರು ಹಸಿರು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಹತ್ತಿ ಮುನ್ನಡೆಯುವ ಮುನ್ನ ಪ್ಯಾಪರಾಜಿಗಳತ್ತ ಇಬ್ಬರು ಕೈಬೀಸಿ ಹೂವಿನ ನಗೆ ಬೀರಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಿದ್ದಾರ್ಥ್ ಮತ್ತು ಕಿಯಾರಾ ಹಸಿರು ಮತ್ತು ಬಿಳಿ ಬಣ್ಣದ ಕ್ಯಾಶುವಲ್ ಲುಕ್ನಲ್ಲಿ ಅಂದವಾಗಿ ಕಂಡಿದ್ದಾರೆ. ಕಿಯಾರಾ ಬಿಳಿ ಜೀನ್ಸ್, ಬಿಳಿ ಟೀ ಶರ್ಟ್ ಮೇಲೆ ಹಸಿರು ಶ್ರಗ್ ಜೊತೆಗೆ ಐಗ್ಲಾಸ್ ಹಾಗೂ ಸ್ಲಿಂಗ್ ಬ್ಯಾಗ್ನಲ್ಲಿ ಮನಮೋಹಕವಾಗಿ ಕಂಡರೆ, ನಟ ಸಿದ್ದಾರ್ಥ್ ಬಿಳಿ ಟೀಶರ್ಟ್ಗೆ ಆಲಿವ್ ಹಸಿರಿನ ಜಾಕೆಟ್ಗೆ ಕಪ್ಪು ಬಣ್ಣದ ಟ್ರಾಕ್ ಪ್ಯಾಂಟ್ ಧರಿಸಿದ್ದರು.