ಭೈರತಿ ರಣಗಲ್ ಮಾಸ್ ಟೈಟಲ್ನಿಂದಲೇ ಟಾಕ್ ಆಗುತ್ತಿರುವ ಕನ್ನಡ ಸಿನಿಮಾ. ಭೈರತಿ ರಣಗಲ್ ಆಗಿ ಶಿವಣ್ಣ ಬೆಳ್ಳಿತೆರೆ ಮೇಲೆ ಹೇಗೆ ಅಬ್ಬರಿಸುತ್ತಾರೆ ಅನ್ನೋದು ಅವರ ಅಭಿಮಾನಿ ಬಳಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹುಟ್ಟಿರುವ ನಿರೀಕ್ಷೆ. ಇಂದು ಯುಗಾದಿ ಹಬ್ಬದ ಸಲುವಾಗಿ ಚಿತ್ರದ ಹೊಸ ಪೋಸ್ಟರ್ ರಿವೀಲ್ ಆಗಿದೆ.
ಮಫ್ತಿ ಮುಂದುವರಿದ ಭಾಗ 'ಭೈರತಿ ರಣಗಲ್' ರಿಲೀಸ್‌ಗೆ ರೆಡಿ ಆಗುತ್ತಿದೆ. ಇಂದು ರಿವೀಲ್ ಆಗಿರುವ ಪೊಸ್ಟರ್ ನೋಡಿದ ಕನ್ನಡ ಸಿನಿಮಾ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಭಾಗಶಃ ಪೂರ್ಣಗೊಂಡಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಭೈರತಿ ರಣಗಲ್ ನೋಡಿ ಎಂಜಾಯ್ ಮಾಡೋಕೆ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ತಂಡ ಕೂಡ ಇದಕ್ಕೆ ತಕ್ಕ ತಯಾರಿ ಮಾಡಿಕೊಳ್ಳುತ್ತಿದೆ.