ಮಾರ್ಚ್ 19, ಮಂಗಳವಾರ ಸಂಜೆ ಮುಂಬೈನಲ್ಲಿ ಜರುಗಿದ 'ಪ್ರೈಮ್ ವಿಡಿಯೋ' ಈವೆಂಟ್ನಲ್ಲಿ ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಕಬೀರ್ ಸಿಂಗ್ ನಾಯಕ ಶಾಹಿದ್ ಕಪೂರ್ ಉತ್ತಮ ಕ್ಷಣ ಕಳೆದಿದ್ದಾರೆ. ಸ್ಟಾರ್ - ಸ್ಟಡ್ ಈವೆಂಟ್ನಲ್ಲಿ ಶಾಹಿದ್ ಮತ್ತು ವಿಜಯ್ ಪರಸ್ಪರ ಪ್ರೀತಿ - ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್, ಸೌತ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್ ಬಗ್ಗೆ ಮಾತನಾಡಿದರು. ಈ ವೇಳೆ, ವಿಜಯ್ ಕೆನ್ನೆಗೆ ಮುತ್ತಿಕ್ಕುವ ಮೂಲಕ ಶಾಹಿದ್ ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಥಿಯೇಟರ್ಗಳಲ್ಲಿ ಪ್ರದರ್ಶನ ಕಂಡ ನಂತರ 'ಫ್ಯಾಮಿಲಿ ಸ್ಟಾರ್' ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಸಿನಿಮಾ ಏಪ್ರಿಲ್ ಮೊದಲ ವಾರ ತೆರೆಗಪ್ಪಳಿಸಲಿದೆ.
ವೇದಿಕೆಯಲ್ಲಿ ಶಾಹಿದ್, ವಿಜಯ್ ಅವರನ್ನು ಹೊಗಳಿದರು. ಅವರಿಲ್ಲದೇ 'ಅರ್ಜುನ್ ರೆಡ್ಡಿ' ಇರುತ್ತಿರಲಿಲ್ಲ, 'ಅರ್ಜುನ್ ರೆಡ್ಡಿ' ಇಲ್ಲದಿದ್ದರೆ 'ಕಬೀರ್ ಸಿಂಗ್' ಕೂಡ ಇರುತ್ತಿರಲಿಲ್ಲ ಎಂದು ಹೇಳಿದರು. ಸ್ಟಾರ್ ನಟರ ಈ ಹೃದಯಸ್ಪರ್ಶಿ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದೇ ಈವೆಂಟ್ನಲ್ಲಿ ಶಾಹಿದ್ ಕಪೂರ್ ತಮ್ಮ ಹೊಸ ಸಿನಿಮಾ 'ಅಶ್ವತ್ಥಾಮ' (Ashwatthama) ಕೂಡ ಅನೌನ್ಸ್ ಮಾಡಿದರು. ಜೊತೆಗೆ ಕಾರ್ಯಕ್ರಮದಲ್ಲಿ ತಮ್ಮ ಜನಪ್ರಿಯ ಶೋ ಫಾರ್ಜಿಯ ಯಶಸ್ಸನ್ನು ನಿರ್ದೇಶಕರಾದ ರಾಜ್ ಮತ್ತು ಡಿಕೆ ಜೊತೆ ಆಚರಿಸಿದರು. 2023ರಲ್ಲಿ ಪ್ರೈಮ್ ವಿಡಿಯೋದಲ್ಲಿ ಫಾರ್ಜಿ ಉತ್ತಮ ಪ್ರದರ್ಶನ ಕಂಡಿದೆ.