ಕರ್ನಾಟಕ

karnataka

ETV Bharat / entertainment

'ಮ್ಯಾಟ್ನಿ' ನೋಡಲು ಸ್ನೇಹಿತರ ಜೊತೆಗೂಡಿದ ಸತೀಶ್ ನಿನಾಸಂ - Matney Movie - MATNEY MOVIE

ನಟ ಸತೀಶ್ ನೀನಾಸಂ ಹಾಗೂ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಮ್ಯಾಟ್ನಿ ಸಿನಿಮಾ ಟ್ರೇಲರ್​ ಮತ್ತು ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

SATISH NINASAM  MATNEY  SANDALWOOD
'ಮ್ಯಾಟ್ನಿ' ನೋಡಲು ಸ್ನೇಹಿತರ ಜೊತೆಗೂಡಿದ ಸತೀಶ್ ನಿನಾಸಂ

By ETV Bharat Karnataka Team

Published : Apr 1, 2024, 12:49 PM IST

ಮಾಟ್ನಿ ಟ್ರೇಲರ್​ ​ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆಯುತ್ತಿರುವ ಚಿತ್ರ‌. ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಮ್ಯಾಟ್ನಿ ಸಿನಿಮಾವು ಟ್ರೇಲರ್​ ಮತ್ತು ಹಾಡುಗಳ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಟ್ರೇಲರ್​ ರಿಲೀಸ್ ಮಾಡಿ ಸಿನಿಮಾಕ್ಕೆ ಸಾಥ್ ನೀಡಿದರು.

'ಮ್ಯಾಟ್ನಿ' ಚಿತ್ರದಲ್ಲಿ ನಾಯಕಿ ರಚಿತಾ ರಾಮ್ ಹಾಗೂ ನಾಯಕ ಸತೀಶ್ ನಿನಾಸಂ

ಮ್ಯಾಟ್ನಿಯಲ್ಲಿ ಸತೀಶ್ ನಿನಾಸಂ, ರಚಿತಾ ರಾಮ್ ಅದಿತಿ ಪ್ರಭುದೇವ ಮಾತ್ರವಲ್ಲದೇ ಇನ್ನೂ ಸಾಕಷ್ಟು ಕಲಾವಿದರ ದಂಡೇ ಇದೆ. ಸಿನಿಮಾ ಹಾರರ್ ಕಾಮಿಡಿ ಜೊತೆಗೆ ಸ್ನೇಹಿತರ ಸಮಾಗಮ ಕೂಡ ಆಗಿದೆ. ಸತೀಶ್ ಅವರ ಸ್ನೇಹಿತರಾಗಿ ನಟ ನಾಗಭೂಷಣ್, ಶಿವರಾಜ ಕೆ ಆರ್ ಪೇಟೆ, ಪೂರ್ಣ ಮತ್ತು ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ. ರಿಯಲ್ ಲೈಫ್​ನಲ್ಲಿ ಇವರೆಲ್ಲ ಹೇಗೆ ಬೆಸ್ಟ್ ಫ್ರೆಂಡ್ಸೋ ಹಾಗೆ ರೀಲ್ ಮೇಲು ಕೂಡ ಸ್ನೇಹಿತರಾಗಿ ಮಿಂಚುತ್ತಾರೆ.

ಚಿತ್ರದಲ್ಲಿ ನಟ ನಾಗಭೂಷಣ್ ನೆಕ್ಸನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಗಭೂಷಣ್, ನೀನಾಸಮ್ ಸತೀಶ್ ಜೊತೆ ಕಾಣಿಸಿಕೊಂಡಿದ್ದಾರೆ. ''ಪಾತ್ರ ತುಂಬಾ ಚೆನ್ನಾಗಿದೆ. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ'' ಎಂದು ನಾಗಭೂಷಣ್ ಹೇಳಿದರು.

'ಮ್ಯಾಟ್ನಿ' ನೋಡಲು ಸ್ನೇಹಿತರ ಜೊತೆಗೂಡಿದ ಸತೀಶ್ ನಿನಾಸಂ

ಕಾಮಿಡಿ ಪಾತ್ರದ ಮೂಲಕ ಕನ್ನಡ ಅಭಿಮಾನಿಗಳನ್ನು ರಂಜಿಸುತ್ತಿರುವ ನಟ ಶಿವರಾಜ್ ಕೆ ಆರ್ ಪೇಟೆ ಮ್ಯಾಟ್ನಿಯಲ್ಲಿ ನವೀನ್ ಎನ್ನುವ ರಿಯಲ್ ಎಸ್ಟೇಟರ್ ಆಗಿ ಕಾಣಿಕೊಂಡಿದ್ದಾರೆ. ವಿಶೇಷ ಎಂದರೆ ಶಿವರಾಜ್ ಕೆ ಆರ್ ಪೇಟೆ ಮತ್ತು ನೀನಾಸಮ್ ಅವರ ಕಾಂಬಿನೇಷನ್​ನ ನಾಲ್ಕನೇ ಸಿನಿಮಾ ಇದಾಗಿದೆ‌. ಕಾಮಿಡಿ ಶಿವರಾಜ್ ಕೆಆರ್ ಪೇಟೆ ಅವರಿಗೆ ಹೊಸದೇನಲ್ಲ. ಈ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಹಾರರ್ ಕೂಡ ಇರುವುದು ಅಭಿಮಾನಿಗಳಿಗೆ ಡಬಲ್ ಧಮಾಕವಾಗಿದೆ. ಈ ಬಗ್ಗೆ ಮಾತನಾಡಿದ ಶಿರಾಜ್ ಕೆ.ಆರ್ ಪೇಟೆ, ''ಟಿಕೆಟ್ ತೆಗೆದುಕೊಂಡು ಚಿತ್ರಮಂದಿರದೊಳಗೆ ಹೋಗಿ ಈ ಬೇಸಿಗೆಯಲ್ಲೂ ಐಪಿಎಲ್ ಮರೆತು ತಂಪಾಗಿ ಸಿನಿಮಾ ನೋಡಿ ಹೊರಬಂದ ಅನುಭವವಾಗುತ್ತೆ'' ಎಂದು ಹೇಳಿದರು.

'ಮ್ಯಾಟ್ನಿ' ಚಿತ್ರ ನಾಯಕ, ನಾಯಕಿಗೆ ವಿವರಿಸುತ್ತಿರುವ ನಿರ್ದೇಶಕ

ಇನ್ನು ನಟ ಪೂರ್ಣ ಮಾತನಾಡಿ, ''ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಿನಿಮಾದಲ್ಲಿ ಆನಂದ ಎನ್ನುವ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾವೆಲ್ಲರೂ ಈ ಸಿನಿಮಾದಲ್ಲಿ ಮಾತ್ರವಲ್ಲ ರಿಯಲ್ ಆಗಿಯೂ ಫ್ರೆಂಡ್ಸ್ ಆಗಿದ್ದರಿಂದ ಈ ಸಿನಿಮಾದಲ್ಲಿ ನಟಿಸಲು ಮತ್ತಷ್ಟು ಸುಲಭವಾಯಿತು'' ಎಂದು ತಿಳಿಸಿದರು.

'ಮ್ಯಾಟ್ನಿ' ಚಿತ್ರ ತಂಡ

ಮತ್ತೋರ್ವ ಸ್ನೇಹಿತನ‌ ಪಾತ್ರದಲ್ಲಿ ನಟ ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ದಿಗಂತ್ ಇದೇ ಮೊದಲ ಬಾರಿಗೆ ಫುಲ್ ಫ್ಲೆಡ್ಜ್ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಜಯದೇವ್ ಅಲಿಯಾಸ್ ಜೆಡಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ದಿಗಂತ್, 'ಇದು ನನ್ನ ಮೊದಲ ಸಿನಿಮಾ. ಎಲ್ಲೂ ಕೂಡ ಫಸ್ಟ್ ಟೈಮ್ ಆ್ಯಕ್ಟ್ ಮಾಡ್ತಾ ಇದಿನಿ ಅಂತ ಅನಿಸಿಲ್ಲ. ಎಲ್ಲರೂ ಫ್ರೆಂಡ್ಸ್ ಆಗಿರುವುದರಿಂದ ಶೂಟಿಂಗ್ ಸೆಟ್​ನಲ್ಲಿ ಕಷ್ಟ ಎನಿಸಿಲ್ಲ'' ಎಂದರು.

'ಮ್ಯಾಟ್ನಿ' ಸಿನಿಮಾದಲ್ಲಿ ಬರುವ ಸ್ನೇಹಿತರು ಪಾತ್ರದಲ್ಲಿ ಕಾಣಿಸಿಕೊಂಡ ನಟರು

ಈಗಾಗಲೇ ಭಾರಿ ನಿರೀಕ್ಷೆ ನೋಡಿತ್ತಿರುವ ಮ್ಯಾಟ್ನಿ ಏಪ್ರಿಲ್ 5ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತದೆ. ಹಾಡು ಮತ್ತು ಟ್ರೈಲರ್ ಮೂಲಕ ಕ್ಯೂರಿಯಾಸಿಟಿ ಹೆಚ್ಚಿಸಿರುವ ಸಿನಿಮಾ ಹೇಗಿದೆ. ಕಾಂಬಿನೇಷನ್ ಹೇಗೆ ವರ್ಕೌಟ್ ಆಗಿದೆ ಎಂದು ಗೊತ್ತಾಗಬೇಕಾದರೆ ಈ ಸಿನಿಮಾ ನೀವು ನೋಡಲೇ ಬೇಕು.

'ಮ್ಯಾಟ್ನಿ' ಚಿತ್ರ ದೃಶ್ಯ

ಇದನ್ನೂ ಓದಿ:ಹಿಂದೆ ಸಿನಿ ತಾರೆಯರು ಪ್ರಾಣ ಪಣಕ್ಕಿಟ್ಟು ಸಾಹಸ ದೃಶ್ಯಗಳನ್ನು ಮಾಡುತ್ತಿದ್ದರು​: ಹಳೆ ದಿನಗಳನ್ನು ಮೆಲಕು ಹಾಕಿದ ಬಿಗ್​​​​​​​​ ಬಿ - Amitabh Bachchan

ABOUT THE AUTHOR

...view details