Kerebete Movie:ಕೆರೆಬೇಟೆ ಸಿನಿಮಾ ನೋಡಿದ ಪ್ರೇಕ್ಷಕರು ನಮ್ಮ ಹಳ್ಳಿ ಸೊಗಡಿನ ಸಿನಿಮಾ ಅಂತಾ ಮೆಚ್ಚಿಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಉತ್ತಮ ಸಿನಿಮಾಗಳ ಕೊರತೆ ಇದೆ. ಕಂಟೆಂಟ್ ಓರಿಯೆಂಟ್ ಸಿನಿಮಾಗಳು ಬರ್ತಾ ಇಲ್ಲ ಎನ್ನುವ ಕೊರಗಿಗೆ ಈಗ ಮದ್ದು ನೀಡಿದೆ ಕೆರೆಬೇಟೆ ಸಿನಿಮಾ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಷ್ಟೇ ಅಲ್ಲ ಸಿನಿಮಾ ಗಣ್ಯರು ಕೂಡ ಕೆರೆಬೇಟೆ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಉತ್ತಮ ಸಿನಿಮಾಗಳನ್ನು ಅಭಿಮಾನಿಗಳು ಯಾವತ್ತೂ ಕೈ ಬಿಡಲ್ಲ ಎನ್ನುವುದಕ್ಕೆ ಕೆರೆಬೇಟೆ ಚಿತ್ರವೇ ಸಾಕ್ಷಿ. ಸಿನಿಮಾ ಗಣ್ಯರು ಕೂಡ ಉತ್ತಮ ಕಂಟೆಕ್ಟ್ ಇರುವ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವುದಕ್ಕೆ ಕೆರೆಬೇಟೆ ಸಿನಿಮಾನೇ ಉದಾಹರಣೆ. ಈ ಹಿಂದೆ ಕೆರೆಬೇಟೆ ಸಿನಿಮಾಗೆ ಕಿಚ್ಚ ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಧನಂಜಯ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನೆನಪಿರಲಿ ಪ್ರೇಮ್, ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಕವಿರಾಜ್ ಸೇರಿದಂತೆ ಚಿತ್ರರಂಗದ ತಾರೆಯರು ಹಾಡಿ ಹೊಗಳಿದ್ದರು. ಉತ್ತಮ ಸಿನಿಮಾಗಳಿಗೆ ಯಾವತ್ತೂ ಅನ್ಯಾಯವಾಗಬಾರದು ದಯವಿಟ್ಟು ಸಿನಿಮಾ ನೋಡಿ ಅಂತಾ ಹೇಳಿದ್ದರು.
ಇದೀಗ ನಟರಾದ ವಷಿಷ್ಟ ಸಿಂಹ, ಅಜಯ್ ರಾವ್, ಆ ದಿನಗಳು ಚೇತನ್, ನಿರ್ದೇಶಕ ಮಿಲನ ಪ್ರಕಾಶ್ ಹಾಗೂ ಗಾಯಕಿ ಶಮಿತಾ ಮಲ್ನಾಡ್ ಕೆರೆಬೇಟೆ ಸಿನಿಮಾ ನೋಡಿ ಮೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ವಸಿಷ್ಠ ಸಿಂಹ, ನಟ ಗೌರಿ ಶಂಕರ್ ಹಾಗೂ ನಿರ್ದೇಶಕ ರಾಜ್ ಗುರು ಸಮ್ಮುಖದಲ್ಲಿ ಕೆರೆಬೇಟೆ ಚಿತ್ರದ ವಿಶೇಷತೆ ಬಗ್ಗೆ ಮಾತನಾಡುತ್ತಾ ಗೆಳೆಯ ಗೌರಿ ಶಂಕರ್ ಹಾಗೂ ನಿರ್ದೇಶಕರ ಕೆಲಸದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಆ ದಿನಗಳು ಚೇತನ್ ಪತ್ನಿ ಮೇಘಾ ಜೊತೆ ಕೆರೆಬೇಟೆ ಚಿತ್ರವನ್ನ ನೋಡಿ ಮೆಚ್ಚಿಕೊಂಡರು. ಈ ಚಿತ್ರದಲ್ಲಿ ಮಲೆನಾಡಿನ ಸೊಬಗು ಆ ಸಂಸ್ಕೃತಿ ಹಾಗು ಜಾತಿ ವ್ಯವಸ್ಥೆ ಹಾಗು ತಾಯಿ ಸೆಂಟಿಮೆಂಟ್ನಲ್ಲಿ ಗೆಳೆಯ ಗೌರಿ ಶಂಕರ್ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಕಂಟೆಂಟ್ ಚಿತ್ರಗಳು ಬರಬೇಕು ಅಂತಾ ಚೇತನ್ ಹೇಳಿದರು.