ಹೈದರಾಬಾದ್:ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಸೋಮವಾರ ತಡರಾತ್ರಿ ಗುಜರಾತ್ನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಇಬ್ಬರನ್ನೂ ಈಗ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದ ಎರಡೇ ದಿನದಲ್ಲಿ ಆರೋಪಿಗಳನ್ನು ಮುಂಬೈ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಭಾನುವಾರ ಮುಂಜಾವು 5 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಮೇಲೆ ಇಬ್ಬರು ಮುಸುಕುಧಾರಿ ವ್ಯಕ್ತಿ ಬೈಕ್ ಮೇಲೆ ಬಂದು 6 ಸುತ್ತಿನ ಗುಂಡು ಹಾರಿಸಿದ್ದರು. ಇದರಿಂದ ಗುಂಡುಗಳು ಮನೆಯ ಗೋಡೆಯ ಮೇಲೆ ಬಿದ್ದಿದ್ದವು. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಶಂಕಿತರನ್ನು ಗುರುತಿಸಿತ್ತು. ಇದೀಗ ಜಾಲ ಭೇದಿಸಿ ಗುಜರಾತ್ನಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಿದೆ.
ಗುಂಡಿನ ದಾಳಿಯ ನಂತರ ಮುಂಬೈನಿಂದ ಪರಾರಿಯಾಗಿದ್ದ ಆರೋಪಿಗಳು ಗುಜರಾತ್‌ನ ಭುಜ್‌ನಲ್ಲಿ ಅಡಗಿದ್ದರು. ಹಲವು ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಮಾಡಲಾಯಿತು. ಹೆಚ್ಚುವರಿ ಪರೀಕ್ಷೆಗಾಗಿ ಅವರನ್ನು ಮುಂಬೈಗೆ ಕರೆದೊಯ್ಯಲಾಗುವುದು. ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಆರೋಪಿಗಳು ಹೆಲ್ಮೆಟ್ ಧರಿಸಿ ಬೈಕ್ ಮೇಲೆ ಬಂದು ದಾಳಿ ಮಾಡಿದ್ದರು. ಪ್ರಾಥಮಿಕ ವಿಚಾರಣೆಯಲ್ಲಿ ಇದು ಯೋಜಿತ ದಾಳಿ ಎಂದು ಪತ್ತೆ ಮಾಡಲಾಯಿತು. ಅವರು ಒಟ್ಟು 4 ಗುಂಡುಗಳನ್ನು ಹಾರಿಸಿದ್ದಾರೆ. ಸ್ಥಳದಲ್ಲಿ ಜೀವಂತ ಕಾರ್ಟ್ರಿಡ್ಜ್ ಸಿಕ್ಕಿದೆ. ಈ ಹಿಂದೆಯೂ ಆರೋಪಿಗಳು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಲಾರೆನ್ ಬಿಷ್ಣೋಯ್ ಕೃತ್ಯ:ಈ ದಾಳಿಯನ್ನು ಗ್ಯಾಂಗ್ಸ್ಟರ್ ಲಾರೆನ್ ಬಿಷ್ಣೋಯ್ ಅವರ ತಂಡ ಮಾಡಿದೆ ಎಂದು ಒಪ್ಪಿಕೊಂಡಿದೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ದಾಳಿ ನಡೆಸಿದ್ದನ್ನು ಒಪ್ಪಿಕೊಳ್ಳಲಾಗಿದೆ. ಇದು ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಮುಂದಿನ ದಾಳಿಯು ಗುರಿ ತಪ್ಪುವುದಿಲ್ಲ ಎಂದು ಸಲ್ಮಾನ್ ಖಾನ್ಗೆ ಮತ್ತೊಂದು ಬೆದರಿಕೆ ಹಾಕಲಾಗಿದೆ.
ಇದು ಟ್ರೈಲರ್ ಆಗಿದ್ದು, ಮುಂದಿನ ಟಾರ್ಗೆಟ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ನಡೆಯುವ ದಾಳಿಗಳು ಖಾಲಿ ಬೆದರಿಕೆಗಳಾಗಿ ಇರುವುದಿಲ್ಲ. ಸಲ್ಮಾನ್ ಖಾನ್, ಇದು ನಿಮಗೆ ಟ್ರೇಲರ್ ಮಾತ್ರ. ನಮ್ಮ ತಾಳ್ಮೆಯನ್ನು ಮತ್ತಷ್ಟು ಪರೀಕ್ಷಿಸಬೇಡಿ. ಇದು ನಿಮಗೆ ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಮುಂದಿನ ಬಾರಿ ಗೋಡೆಗಳ ಮೇಲೆ ಗುಂಡುಗಳನ್ನು ಹಾರಿಸುವುದಿಲ್ಲ ಎಂದು ಬೆದರಿಕೆಯಲ್ಲಿದೆ. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬವು ಪಂಜಾಬ್ ಮೂಲದ ಮಾಫಿಯಾ ಗುಂಪುಗಳಿಂದ ಹಲವು ವರ್ಷಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದೆ.
ಇದನ್ನೂ ಓದಿ:ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ: ಒಬ್ಬ ಆರೋಪಿ ಗುರುಗ್ರಾಮದವನೆಂಬ ಶಂಕೆ, ಎಫ್ಐಆರ್ ದಾಖಲು - Salman Khan House Shooting