ರುಕ್ಮಿಣಿ ವಸಂತ್. ಚಂದನವನದ ಚೆಂದುಳ್ಳಿ ಚೆಲುವೆ. ಬೆರಳೆಣಿಕೆಯ ಸಿನಿಮಾಗಳಲ್ಲೇ ಅಮೋಘ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿಯರ ಪೈಕಿ ಗುರುತಿಸಿಕೊಂಡಿರುವ 'ಬಘೀರ'ನ ಬೆಡಗಿ. ಇಂದು ರುಕ್ಮಿಣಿ ವಸಂತ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 28ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇವರಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿಮಾ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಸ್ಟಾರ್ ಹೀರೋಯಿನ್ ಬರ್ತ್ಡೇ ಅಂಗವಾಗಿ 'ACE' ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್ ಕೂಡಾ ಸಿಕ್ಕಿದೆ.
ರುಕ್ಮಿಣಿ ವಸಂತ್ ಅವರ ಚೊಚ್ಚಲ ತಮಿಳು ಚಿತ್ರ 'ACE'. ನಟಿ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋ ವಿಜಯ್ ಸೇತುಪತಿ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ACE'ನ ಸ್ಪೆಷಲ್ ಲುಕ್ ಬಹಿರಂಗಗೊಂಡಿದೆ. ಅರುಮುಗ ಕುಮಾರ್ ನಿರ್ದೇಶನದ ಚಿತ್ರದ ಗ್ಲಿಂಪ್ಸ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಪ್ರತೀ ಬಾರಿ ವಿಭಿನ್ನ ಸ್ಟೋರಿಗಳನ್ನೇ ಆಯ್ದುಕೊಳ್ಳುವ ಮೂಲಕ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಅವರೊಂದಿಗೆ 'ಸಪ್ತಸಾಗರದಾಚೆ ಎಲ್ಲೋ ಸಿನಿಮಾ'ದಲ್ಲಿ (ಸೈಡ್ ಎ, ಸೈಡ್ ಬಿ) ನಟಿಸುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ರುಕ್ಮಿಣಿ ವಸಂತ್ ಅವರೀಗ ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶ ಪಡೆದಿದ್ದಾರೆ. ಇತ್ತೀಚೆಗಷ್ಟೇ 'ಬಘೀರ' ಮತ್ತು 'ಭೈರತಿ ರಣಗಲ್' ಸಿನಿಮಾಗಳ ಮೂಲಕ ಸದ್ದು ಮಾಡಿರುವ ರುಕ್ಮಿಣಿ ವಸಂತ್ ತಮ್ಮ ಮುಂದಿನ 'ACE'ನಲ್ಲಿ 'ರುಕ್ಕು' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:'ಬೆಂಗಳೂರಂದ್ರೆ ನನಗಿಷ್ಟ, ಅವಕಾಶ ಸಿಕ್ಕಿದ್ರೆ ಕನ್ನಡ ಸಿನಿಮಾ ಮಾಡುವ ಇಚ್ಛೆಯಿದೆ': ಸನ್ನಿ ಲಿಯೋನ್
ವಿಜಯ್ ಸೇತುಪತಿ, ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್ಡಮ್ ಹೊಂದಿರುವ ಖ್ಯಾತ ತಾರೆ. ದೊಡ್ಡ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಹಾಗಾಗಿ ಅವರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳಿವೆ. 2018ರಲ್ಲಿ ಬಂದ ಒರು ನಲ್ಲ ನಾಲ್ ಪಾಥು ಸೊಲ್ರೆನ್ ಸಿನಿಮಾದಲ್ಲಿ ನಿರ್ದೇಶಕ ಆರುಮುಗ ಕುಮಾರ್ ಕುಮಾರ್ ಮತ್ತು ನಟ ವಿಜಯ್ ಸೇತುಪತಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇದೀಗ ಈ ಜೋಡಿ ಮತ್ತೊಮ್ಮೆ ಸಿನಿಮಾವೊಂದಕ್ಕೆ ಕೈ ಜೋಡಿಸಿದೆ. ವಿಜಯ್ ಸೇತುಪತಿ ಅವರ 51ನೇ ಸಿನಿಮಾ ಇದಾಗಿದ್ದು, ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ. ಉಳಿದಂತೆ ಯೋಗಿ ಬಾಬು, ದಿವ್ಯಾ ಪಿಳ್ಳೈ ಸೇರಿದಂತೆ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾಗೆ ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸುತ್ತಿದ್ದಾರೆ
ಇದನ್ನೂ ಓದಿ:5 ದಿನದಲ್ಲಿ 900 ಕೋಟಿ: ಇದು 'ಪುಷ್ಪ'ರಾಜನ ವ್ಯವಹಾರ; ಆರ್ಆರ್ಆರ್, ಕಲ್ಕಿ ದಾಖಲೆ ಮೀರಿಸಿದ ಸಿನಿಮಾ
ಮೇ 17ರಂದು ಚಿತ್ರದ ಟೈಟಲ್ ಟೀಸರ್ ಅನಾವರಣಗೊಂಡಿತ್ತು. ಏಸ್ ಶೀರ್ಷಿಕೆಯ ಸಿನಿಮಾವನ್ನು 7 ಸಿಎಸ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಕಲರ್ ಫುಲ್ ಟೈಟಲ್ ಟೀಸರ್ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸ್ವೀಕರಿಸಿತ್ತು. ಇದೀಗ ರುಕ್ಮಿಣಿ ವಸಂತ್ ಅವರನ್ನು ಪರಿಚಯಿಸುವ ಗ್ಲಿಂಪ್ಸ್ ಬಿಡುಗಡೆಯಾಗಿದೆ. ರುಕ್ಕುವಿನ ಸೌಂದರ್ಯ ಪ್ರದರ್ಶನವಾಗಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.