'ಮದಗಜ' ಚಿತ್ರದ ಬಳಿಕ ಸ್ಯಾಂಡಲ್ವುಡ್ನ ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಶ್ರೀಮುರಳಿ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಬಘೀರ'. ಚಿತ್ರದ ಟೈಟಲ್ ಹಾಗೂ ಟೀಸರ್ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಬಘೀರ ಚಿತ್ರತಂಡದಿಂದ ಗುಡ್ ನ್ಯೂಸ್ ಬಂದಿದೆ. ಹೌದು, ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ಬಘೀರ ಸಿನಿಮಾಗೆ ಬ್ಲಾಕ್ಬಸ್ಟರ್ ಕೆಜಿಎಫ್ ಕ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಲಕ್ಕಿ ಸಿನಿಮಾ ಬಳಿಕ ಡಾ.ಸೂರಿ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಕಳೆದ ವರ್ಷ ಸೆಟ್ಟೇರಿದ ಬಘೀರ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತಾ ಶ್ರೀಮುರಳಿ ಅಭಿಮಾನಿಗಳಲ್ಲಿ ಪ್ರಶ್ನೆಯೊಂದು ಕಾಡುತ್ತಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟೀಸರ್ನಿಂದಲೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ಬಘೀರ ಇದೇ ವರ್ಷ ಅಕ್ಟೊಬರ್ 31ಕ್ಕೆ ವಿಶ್ವದ್ಯಾಂತ ಬಿಡುಗಡೆ ಆಗಲಿದೆ.
ಇತ್ತೀಚೆಗಷ್ಟೇ ಬಘೀರ ಚಿತ್ರದ ಆ್ಯಕ್ಷನ್ ಸನ್ನಿವೇಶ ಚಿತ್ರೀಕರಣದ ವೇಳೆ ಶ್ರೀಮುರಳಿ ಪೆಟ್ಟು ಮಾಡಿಕೊಂಡಿದ್ದರು. ಆ್ಯಕ್ಷನ್ ಸೀಕ್ವೆನ್ಸ್ ಮಾಡುವಾಗ ಶ್ರೀಮುರಳಿ ಮೇಲಿಂದ ಬಿದ್ದು ಹಿಮ್ಮಡಿಗೆ ಪೆಟ್ಟು ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದರು.