ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಇಂದು ತಮ್ಮ 28ನೇ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ನಟಿಯ ಮುಂಬರುವ ಚಿತ್ರಗಳ ಪೋಸ್ಟರ್ಗಳು ಅನಾವರಣಗೊಳ್ಳುತ್ತಿವೆ. 'ಪುಷ್ಪ 2: ದಿ ರೂಲ್' ನಟಿ ಬಣ್ಣ ಹಚ್ಚಿರುವ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಇದೇ ಸಾಲಿನಲ್ಲಿ ತೆರೆಗಪ್ಪಳಿಸಲಿರುವ ಪುಷ್ಪ ಸೀಕ್ವೆಲ್ನಿಂದ ನಟಿಯ ನೋಟ ಅನಾವರಣಗೊಂಡಿದೆ.
ನಟಿಯ ಮತ್ತೊಂದು ಚಿತ್ರ 'ದಿ ಗರ್ಲ್ಫ್ರೆಂಡ್'ನ ಟೀಸರ್ ಅನಾವರಣಗೊಳ್ಳಬೇಕಿತ್ತು. ಆದರೆ ಕೆಲ ಕಾರಣಗಳಿಂದ ಪೋಸ್ಟರ್ ಅಷ್ಟೇ ಬಿಡುಗಡೆ ಆಗಿದೆ. ಚಿತ್ರದಿಂದ ಎರಡು ಸುಂದರ ಪೋಸ್ಟರ್ಗಳಿಂದು ಅನಾವರಗೊಂಡಿದ್ದು, ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಇದರಲ್ಲಿ ಸರಳ ಸುಂದರಿಯಾಗಿ ಕಾಣಿಸಿಕೊಂಡಿದ್ದರೆ, ಪುಷ್ಪ 2ರ ಪೊಸ್ಟರ್ನಲ್ಲಿ ಖಡಕ್ ಲುಕ್ ಕೊಟ್ಟಿದ್ದಾರೆ.
ಪುಷ್ಪ 2 ಅಥವಾ ಪುಷ್ಪ: ದಿ ರೂಲ್ ಸಿನಿಮಾವು 2021ರ ಸೂಪರ್‌ಹಿಟ್ ಚಿತ್ರ ಪುಷ್ಪ: ದಿ ರೈಸ್‌ನ ಮುಂದುವರಿದ ಭಾಗ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಪ್ರಮುಖ ಪಾತ್ರದಲ್ಲಿದ್ದಾರೆ. ಪುಷ್ಪರಾಜ್ ಜೋಡಿಯಾಗಿ ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಜೀವ ತುಂಬಿದ್ದಾರೆ. ಇಂದು ಅನಾವರಣಗೊಂಡಿರುವ ಪೋಸ್ಟರ್ನಲ್ಲಿ ನಟಿ ಹಸಿರು ಸೀರೆ ತೊಟ್ಟು, ಅದಕ್ಕೆ ತಕ್ಕ ಆಭರಣ ಧರಿಸಿ ಖಡಕ್ ಲುಕ್ ಕೊಟ್ಟಿದ್ದಾರೆ.
ಪುಷ್ಪ ಸಿನಿಮಾದ ಹಿಂದಿರುವ ಮೈತ್ರಿ ಮೂವಿ ಮೇಕರ್ಸ್ ಚಿತ್ರದಿಂದ ರಶ್ಮಿಕಾ ಅವರ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಟಿಗೆ ವಿಶೇಷವಾಗಿ ಶುಭ ಕೋರಿದೆ. ಶ್ರೀವಲ್ಲಿಯ ಮೊದಲ ನೋಟವನ್ನು ಅನಾವರಣಗೊಳಿಸಿದ ನಿರ್ಮಾಪಕರು, ''ಶ್ರೀವಲ್ಲಿ ಅಲಿಯಾಸ್ ರಶ್ಮಿಕಾ ಮಂದಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ಏಪ್ರಿಲ್ 8 ರಂದು ಪುಷ್ಪ 2: ದಿ ರೂಲ್ ಟೀಸರ್ ಬಿಡುಗಡೆ, ಪುಷ್ಪ ಮಾಸ್ ಜಾತ್ರೆ, ಸಿನಿಮಾ ವಿಶ್ವದಾದ್ಯಂತ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:'ದಿ ಗರ್ಲ್ಫ್ರೆಂಡ್' ಪೋಸ್ಟರ್: ಒಂದಲ್ಲ, ಎರಡು ಲುಕ್ ಅನಾವರಣಗೊಳಿಸಿ ರಶ್ಮಿಕಾಗೆ ಸ್ಪೆಷಲ್ ವಿಶ್ - The Girlfriend
28ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟಿಗೆ ಶುಭ ಹಾರೈಸಿದ ಚಿತ್ರ ತಯಾರಕರು ಟೀಸರ್ ಬಿಡುಗಡೆ ದಿನಾಂಕವನ್ನೂ ನೆನಪಿಸಿದ್ದಾರೆ. ಪುಷ್ಪ 2ರ ಟೀಸರ್ ಏಪ್ರಿಲ್ 8ರಂದು ಅಲ್ಲು ಅರ್ಜುನ್ ಅವರ ಜನ್ಮದಿನದ ಗಿಫ್ಟ್ ಆಗಿ ಅನಾವರಣಗೊಳಿಸಲು ನಿರ್ಧರಿಸಲಾಗಿದೆ. ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಸುಕುಮಾರ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಚಿತ್ರ ಬಹಳ ಅದ್ಧೂರಿಯಾಗಿ ಮೂಡಿ ಬರಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಜೊತೆಗೆ ಪ್ರಮುಖ ಭಾಗದಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಹ್ಯಾಪಿ ಬರ್ತ್ಡೇ ರಶ್ಮಿಕಾ: 'ಕಿರಿಕ್ ಪಾರ್ಟಿ' ಬೆಡಗಿಯ ಸಿನಿಪಯಣ - HBD Rashmika Mandanna