ಬಾಲಿವುಡ್‌ನ ತಾರಾ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ನಿನ್ನೆಯಷ್ಟೇ ಸಿಹಿ ಸುದ್ದಿ ಹಂಚಿಕೊಂಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಬಳಿಕ, ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ದೀಪ್ವೀರ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಮೊದಲು ಮುಂಬೈ ವಿಮಾನ ನಿಲ್ದಾಣದಲ್ಲಿ ಈ ತಾರಾ ಜೋಡಿ ಕಾಣಿಸಿಕೊಂಡಿದೆ. ಇಬ್ಬರೂ ಮ್ಯಾಚಿಂಗ್ ವೈಟ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಮೂರು ದಿನಗಳ ಪ್ರೀ ವೆಡ್ಡಿಂಗ್ ಸೆಲೆಬ್ರೇಶನ್ನಲ್ಲಿ ಪಾಲ್ಗೊಳ್ಳಲು ಜಾಮ್‌ನಗರಕ್ಕೆ ತೆರಳಿದ್ದಾರೆ. ಮುಂಬೈ ಮತ್ತು ಜಾಮ್‌ನಗರದಿಂದ ವಿಡಿಯೋಗಳು ಹೊರಬಿದ್ದಿವೆ.
ನಿನ್ನೆ ಬೆಳಗ್ಗೆಯಷ್ಟೇ ತಾವು ಪೋಷಕರಾಗಲಿರುವ ವಿಚಾರವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದರು. ಅದಾದ ಕೆಲವೇ ಗಂಟೆಗಳ ಅಂತರದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಗರ್ಭಧರಿಸಿರುವ ಪತ್ನಿಯನ್ನು ಪತಿ ರಣ್ವೀರ್ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಪವರ್ ಕಪಲ್ ಕಂಡ ಪಾಪರಾಜಿಗಳು ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಶೀಘ್ರದಲ್ಲೇ ತಂದೆ ತಾಯಿಯಾಗಲಿರುವ ಕಪಲ್ಗೆ ಅಭಿನಂದನೆ ತಿಳಿಸಿದ್ದಾರೆ. ದೀಪ್ವೀರ್ ಪರಸ್ಪರ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ನಟಿಯ ಮೊಗದಲ್ಲಿ ತಾಯಿಯಾಗುತ್ತಿರುವ ಕಳೆ ಎದ್ದು ಕಾಣುತ್ತಿತ್ತು.
ಮುಂಬೈ ಅಲ್ಲದೇ ಜಾಮ್‌ನಗರದಿಂದಲೂ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ದಂಪತಿಯ ಸುತ್ತಲೂ ಸಾಕಷ್ಟು ಪಾಪರಾಜಿಗಳು, ಜನರು ಸುತ್ತುವರೆದಿದ್ದು, ರಣ್ವೀರ್ ಬಹಳ ಕಾಳಜಿಯಿಂದ ದೀಪಿಕಾರನ್ನು ಕರೆದುಕೊಂಡು ಹೋಗಿದ್ದಾರೆ. ಇದನ್ನು ಕಂಡ ನೆಟ್ಟಿಗರು ಬಹುತೇಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.