ಹೈದರಾಬಾದ್:ನಿಮಗೆ ಚಿತ್ರನಿರ್ಮಾಪಕನಾಗುವ ಕನಸಿದೆಯೇ. ಹಾಗಾದರೆ ಇಲ್ಲಿದೆ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್‌ಗಳು. ರಾಮೋಜಿ ಅಕಾಡೆಮಿ ಆಫ್ ಮೂವೀಸ್ (RAM) ಉಚಿತ ಕೋರ್ಸ್ಗಳ ಸುವರ್ಣಾವಕಾಶವನ್ನು ನಿಮಗಾಗಿ ನೀಡುತ್ತಿದೆ.
ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ರಾಮೋಜಿ ಗ್ರೂಪ್‌ನ ಡಿಜಿಟಲ್ ಫಿಲ್ಮ್ ಅಕಾಡೆಮಿಯಾದ ರಾಮೋಜಿ ಅಕಾಡೆಮಿ ಆಫ್ ಮೂವೀಸ್ (RAM) ಸಂಸ್ಥೆ ಇಂಗ್ಲಿಷ್ ಜೊತೆಗೆ ಹಿಂದಿ, ಮರಾಠಿ, ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಬಂಗಾಳಿ ಸೇರಿದಂತೆ ಏಳು ಭಾರತೀಯ ಭಾಷೆಗಳಲ್ಲಿ ಆನ್‌ಲೈನ್ ಚಲನಚಿತ್ರ ನಿರ್ಮಾಣ ಕೋರ್ಸ್‌ಗಳನ್ನು ಘೋಷಿಸಿದೆ.
ಫ್ರೀ ಕೋರ್ಸ್ನಲ್ಲಿ ನೀವು ಕಥೆ ಮತ್ತು ಚಿತ್ರಕಥೆ, ನಿರ್ದೇಶನ, ಆ್ಯಕ್ಷನ್, ಚಲನಚಿತ್ರ ನಿರ್ಮಾಣ, ಚಲನಚಿತ್ರ ಸಂಕಲನ ಮತ್ತು ಡಿಜಿಟಲ್ ಫಿಲ್ಮ್ ಮೇಕಿಂಗ್ನ್ನು ಕಲಿಯಬಹುದು. ಇಷ್ಟು ಅವಕಾಶಗಳನ್ನು ರಾಮೋಜಿ ಅಕಾಡೆಮಿ ಆಫ್ ಮೂವೀಸ್ ನೀಡಿದೆ.
ಉಚಿತ ಕೋರ್ಸ್‌ಗಳು:ಎಲ್ಲಾ ಕೋರ್ಸ್‌ಗಳು ನಿಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಫಿಲ್ಮ್ ಮೇಕಿಂಗ್ ಕುರಿತು ಪಠ್ಯಕ್ರಮಗಳನ್ನು ಒದಗಿಸುತ್ತವೆ. ಮತ್ತು ಅವು ಉಚಿತವಾಗಿದ್ದು, ಚಲನಚಿತ್ರ ನಿರ್ಮಾಣದಲ್ಲಿಯೇ ವೃತ್ತಿಜೀವನದ ಕನಸು ಕಂಡವರಿಗೆ ಇಲ್ಲಿ ಕಲಿಯಲು ಅವಕಾಶವಿದೆ. ಅಲ್ಲದೆ ನಿಮಗೆ ಸಮಯ ಮತ್ತು ಸ್ಥಳದ ಅಡ್ಡಿಯಿಲ್ಲ. ಹೀಗಾಗಿ ನೀವು ಒಂದು ಬಾರಿ ಕೋರ್ಸ್ಗೆ ಸೇರಿದರೆ ನಿಮಗೆ ಬೇಕಾದಾಗೆಲ್ಲ ಕಲಿಯಬಹುದು.
ಹೊಸತನ ಮತ್ತು ಮೌಲ್ಯಯುತ ಕಾರ್ಯಕ್ರಮಗಳು:ಚಲನಚಿತ್ರಗಳು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವುದರಿಂದ, ಬಹು ಭಾಷೆಗಳಲ್ಲಿನ ಚಲನಚಿತ್ರ ನಿರ್ಮಾಣ ಕೋರ್ಸ್‌ಗಳು ನವೀನತೆಗೆ ಕಾರಣವಾಗಲಿವೆ. ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕತೆ ಮತ್ತು ಆ ಪ್ರದೇಶಕ್ಕೆ ವಿಶಿಷ್ಟವಾದ ವಿಷಯಗಳಲ್ಲಿ ಕಥೆ ಹೇಳುವಿಕೆಯ ಮೂಲಕ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಈ ಕೋರ್ಸ್ ಅನುವು ಮಾಡಿಕೊಡುತ್ತದೆ. ಜತೆಗೆ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕಲಿಯಲು ಸಹಾಯ ಮಾಡುತ್ತವೆ.