ಕರ್ನಾಟಕ

karnataka

ETV Bharat / entertainment

ಮದುವೆಗೂ ಮುನ್ನ ಸಿದ್ಧಿವಿನಾಯಕನ ದರ್ಶನ ಪಡೆದ ರಾಕುಲ್-ಜಾಕಿ - ರಾಕುಲ್ ಪ್ರೀತ್ ಸಿಂಗ್

ಫೆಬ್ರವರಿ 21ರಂದು ಮದುವೆಯಾಗಲಿರುವ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾಣಿಸಿಕೊಂಡರು.

Rakul Preet Singh-Jackky Bhagnani
ರಾಕುಲ್-ಜಾಕಿ

By ETV Bharat Karnataka Team

Published : Feb 17, 2024, 8:18 PM IST

ಶೀಘ್ರದಲ್ಲೇ ಹಸೆಮಣೆ ಏರಲಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ನಿರ್ಮಾಪಕ ಜಾಕಿ ಭಗ್ನಾನಿ ಇಂದು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾಣಿಸಿಕೊಂಡರು. ಫೆಬ್ರವರಿ 21 ರಂದು ಗೋವಾದಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದ್ದು, ಅದಕ್ಕೂ ಮುನ್ನ ಮುಂಬೈನ ಪ್ರಸಿದ್ಧ ಗಣೇಶ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಪೂಜೆ ಸಲ್ಲಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಗಳು ಹಂಚಿಕೊಂಡ ವಿಡಿಯೋಗಳಲ್ಲಿ, ರಾಕುಲ್ ಪ್ರೀತ್​ ಸಿಂಗ್​ ಮತ್ತು ಜಾಕಿ ಭಗ್ನಾನಿ ಸಾಂಪ್ರದಾಯಿಕ ಉಡುಗೆ ಧರಿಸಿ ಸಿದ್ಧಿವಿನಾಯಕ ದೇವಾಲಯಕ್ಕೆ ಆಗಮಿಸುತ್ತಿರುವುದನ್ನು ಕಾಣಬಹುದು. ರಾಕುಲ್ ಪಿಂಕ್​ ಅನಾರ್ಕಲಿ ಸೂಟ್ ಧರಿಸಿದ್ದರೆ, ಜಾಕಿ ಹಸಿರು ಕುರ್ತಾದಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಟ್ಟು ಮುನ್ನಡೆದರು.

ಈ ವಾರದ ಆರಂಭದಲ್ಲಿ ರಾಕುಲ್ ಮತ್ತು ಜಾಕಿ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭಗೊಂಡವು. ಮದುವೆ ಮುನ್ನದ ಸಂಭ್ರಮಾಚರಣೆಗೆ, ಮುಂಬೈನಲ್ಲಿರುವ ಜಾಕಿ ಭಗ್ನಾನಿ ಅವರ ಮನೆಯಲ್ಲಿ ವಧು-ವರರು ತಮ್ಮ ಕುಟುಂಬದೊಂದಿಗೆ ಸಾಕ್ಷಿಯಾದರು. ವರದಿಗಳ ಪ್ರಕಾರ, ಬಾಲಿವುಡ್​ನ ಈ ಪ್ರೇಮಪಕ್ಷಿಗಳು ಪರಿಸರ ಸ್ನೇಹಿ ವಿವಾಹ ಆಚರಣೆಯ ಗುರಿಯನ್ನು ಹೊಂದಿದ್ದಾರೆ. ಅದರ ಭಾಗವಾಗಿ, ಕಾಗದ ತ್ಯಾಜ್ಯವನ್ನು ನಿಯಂತ್ರಿಸಲು ಡಿಜಿಟಲ್ ಇನ್ವಿಟೇಶನ್​​, ಪಟಾಕಿಗಳ ನಿಷೇಧ ಮತ್ತು ಮರಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದಾರೆ. ಫೆಬ್ರವರಿ 19 ರಂದು ಪ್ರಾರಂಭವಾಗುವ ಮೂರು ದಿನಗಳ ವಿವಾಹ ಸಮಾರಂಭ ಫೆಬ್ರವರಿ 21 ರಂದು ಮುಕ್ತಾಯಗೊಳ್ಳಲಿದೆ. ಬುಧವಾರ ವಿವಾಹದ ಮುಖ್ಯ ಶಾಸ್ತ್ರ ನಿರವೇರಲಿದೆ. ಮದುವೆಯ ನಂತರ, ದಂಪತಿ ಮರ ನೆಡುವ ಪ್ರಯತ್ನದಲ್ಲಿ ಕೈ ಜೋಡಿಸಲಿದ್ದಾರೆ.

ಇದನ್ನೂ ಓದಿ:ಅಡಿವಿ ಶೇಷ್ 'ಗೂಢಾಚಾರಿ-2' ಚಿತ್ರತಂಡಕ್ಕೆ ಇಮ್ರಾನ್ ಹಶ್ಮಿ ಎಂಟ್ರಿ

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಬಡೆ ಮಿಯಾನ್ ಚೋಟೆ ಮಿಯಾನ್' ಬಿಡುಗಡೆಗೆ ಜಾಕಿ ಭಗ್ನಾನಿ ಎದುರು ನೋಡುತ್ತಿದ್ದಾರೆ. ಭಗ್ನಾನಿ ನಿರ್ಮಾಣದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2024ರ ಈದ್​ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ. ಇನ್ನು ರಾಕುಲ್ ಪ್ರೀತ್ ಸಿಂಗ್​​ ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ನಟಿ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಇಂಡಿಯನ್ 2 ಮತ್ತು ಅಯಾಲಾನ್‌ ಇವರ ಬಹುನಿರೀಕ್ಷಿತ ಚಿತ್ರಗಳು.

ಇದನ್ನೂ ಓದಿ:ಭಟ್ಕಳ ಶಾಪ್​​ನಲ್ಲಿ ಪತ್ನಿ ರಾಧಿಕಾಗೆ ಕ್ಯಾಂಡಿ ಕೊಡಿಸಿದ ಯಶ್​​; ಮುದ್ದಾದ ಫೋಟೋಗಳು ವೈರಲ್​

ABOUT THE AUTHOR

...view details